ಶೀಘ್ರದಲ್ಲೇ ಮಲಯಾಳಂ ಬ್ಯೂಟಿ ನಿತ್ಯಾ ಮಿನನ್ ಮದುವೆಯಂತೆ, ಆ ನಟನೊಂದಿಗೆ ಆಕೆಯ ಮದುವೆ ನಡೆಯಲಿದೆಯಂತೆ?

Follow Us :

ಸೌತ್ ಸಿನಿರಂಗದಲ್ಲಿ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಕ್ರೇಜ್ ದಕ್ಕಿಸಿಕೊಂಡ ನಿತ್ಯಾ ಮೆನನ್ ಅನೇಕ ಹಿಟ್ ಸಿನೆಮಾಗಳ ಮೂಲಕ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಕಟ್ಟಿಕೊಂಡಿದ್ದಾರೆ. ಸುಮಾರು ದಿನಗಳಿಂದ ನಿತ್ಯಾ ಮೆನನ್ ಮದುವೆಯ ಬಗ್ಗೆ ಅನೇಕ ರೂಮರ್‍ ಗಳು ಕೇಳಿಬರುತ್ತಿದ್ದು, ಇದೀಗ ಮತ್ತೊಂದು ಗಾಸಿಫ್ ಕೇಳಿಬರುತ್ತಿದೆ. ಆಕೆ ನಟನೊಬ್ಬನನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಮಲಯಾಳಂ ಮೂಲದ ನಟನನ್ನು ಆಕೆ ವರಿಸಲಿದ್ದಾರೆ ಎಂಬ ಮಾತುಗಳು ವೈರಲ್ ಆಗುತ್ತಿವೆ.

ಮಲ್ಲು ಬ್ಯೂಟಿ ನಿತ್ಯಮೆನನ್ ಬಲವಾದ ಕಥೆಯುಳ್ಳ ಅನೇಕ ಸಿನೆಮಾಗಳಲ್ಲಿ ನಟಿಸಿ ಸೌತ್ ಸಿನಿರಂಗದಲ್ಲಿ ಬೇಡಿಕೆಯುಳ್ಳ ನಟಿಯಾಗಿದ್ದಾರೆ. ಪವನ್ ಕಲ್ಯಾಣ್ ನಟನೆಯ ಭಿಮ್ಲಾನಾಯಕ್ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನೆಮಾದಲ್ಲಿ ಆಕೆ ತುಂಬಾನೆ ಅದ್ಬುತವಾಗಿ ನಟಿಸುವ ಮೂಲಕ ಎಲ್ಲರನ್ನೂ ರಂಜಿಸಿದ್ದರು. ಇತ್ತೀಚಿಗಷ್ಟೆ ಆಕೆ 19(1)(a) ಸಿನೆಮಾದಲ್ಲಿ ವಿಭಿನ್ನಪಾತ್ರದಲ್ಲಿ ನಟಿಸಿದ್ದರು. ಈ ಸಿನೆಮಾದಲ್ಲೂ ಸಹ ನಿತ್ಯಾ ತಮ್ಮ ಅದ್ಬುತವಾದ ನಟನೆಯ ಮೂಲಕ ಒಳ್ಳೆಯ ಮನರಂಜನೆ ನೀಡಿದ್ದರು. ಜೊತೆಗೆ ಆಕೆ ತಮಿಳಿನಲ್ಲಿ ಸ್ಟಾರ್‍ ನಟ ಧನುಷ್ ಜೊತೆಗೆ ಸಹ ತಿರು ಎಂಬ ಸಿನೆಮಾದಲ್ಲಿ ನಟಿಸಿ ಸಕ್ಸಸ್ ಕಂಡುಕೊಂಡರು. ಆ ಮೂಲಕ ಸಕ್ಸಸ್ ಪುಲ್ ಜರ್ನಿಯನ್ನು ಸಾಗಿಸುತ್ತಾ ಸ್ಟಾರ್‍ ನಟಿಯಾಗಿದ್ದಾರೆ.

ಇನ್ನೂ ನಿತ್ಯಾ ಮಿನನ್ ಮದುವೆ ಸುದ್ದಿ ಸದಾ ಚರ್ಚೆಯಾಗುತ್ತಲೇ ಇರುತ್ತದೆ. 35 ವರ್ಷ ವಯಸ್ಸಿನ ನಿತ್ಯಾ ಮಿನನ್ ಮದುವೆ ಸುದ್ದಿ ಮತ್ತೊಮ್ಮೆ ಕೇಳಿಬರುತ್ತಿದೆ. ಮಲಯಾಳಂ ಮೂಲದ ನಟನೋರ್ವನ ಜೊತೆಗೆ ನಿತ್ಯಾ ಮಿನನ್ ಮದುವೆ ನಡೆಯಲಿದೆಯಂತೆ. ಅವರಿಬ್ಬರೂ ಬಾಲ್ಯದ ಸ್ನೇಹಿತರಾಗಿದ್ದರಂತೆ. ಜೊತೆಗೆ ಇಬ್ಬರ ಕುಟುಂಬಗಳ ನಡುವೆ ಸಹ ಒಳ್ಳೆಯ ಸಂಬಂಧವಿದೆಯಂತೆ. ಶೀಘ್ರದಲ್ಲೇ ನಿತ್ಯಾಮಿನನ್ ಮದುವೆ ಬಗ್ಗೆ ಅಧಿಕೃತ ಅಪ್ಡೇಟ್ ಸಹ ಸಿಗಲಿದೆಯಂತೆ. ಈ ನಿಟ್ಟಿನಲ್ಲಿ ಸೋಷಿಯಲ್ ಮಿಡಿಯಾದಲ್ಲಿ ಸುದ್ದಿಗಳು ಹರಿದಾಡುತ್ತಿವೆ. ಈ ಬಗ್ಗೆ ಅಧಿಕೃತವಾದ ಮಾಹಿತಿಯಿಲ್ಲದೇ ಇದ್ದರೂ ಸಹ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಹಿಂದೆ ಬಂದಂತಹ ರೂಮರ್‍ ಗಳ ಬಗ್ಗೆ ನಿತ್ಯಾ ಮಿನನ್ ಎಲ್ಲ ಸುಳ್ಳು ಎಂದು ಕ್ಲಾರಿಟಿ ಕೊಟ್ಟಿದ್ದರು.

ಸದ್ಯ ಹರಿದಾಡುತ್ತಿರುವ ಈ ಗಾಸಿಫ್ ಬಗ್ಗೆ ನಿತ್ಯಾಮಿನನ್ ಯಾವ ರೀತಿಯಲ್ಲಿ ರಿಯಾಕ್ಟ್ ಆಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ನಟಿ ನಿತ್ಯಾ ಮೆನನ್ ಅಲಾ ಮೊದಲೈಂದಿ ಸಿನೆಮಾದ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಬಳಿಕ ಆಕೆ ಇಷ್ಕ್, ಜಬರ್ದಸ್ತ್, ರುದ್ರಮದೇವಿ, ಭೀಮ್ಲಾ ನಾಯಕ್ ಸೇರಿದಂತೆ ಅನೇಕ ಸೂಪರ್‍ ಹಿಟ್ ಸಿನೆಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ ಕನ್ನಡದಲ್ಲಿ ಮೈನಾ ಸಿನೆಮಾದ ಮೂಲಕ ಆಕೆ ಮತಷ್ಟು ಫೇಂ ಪಡೆದುಕೊಂಡರು.