ಪ್ರಭಾಸ್ ಹಿರೋ ಆಗೋಕ್ಕೂ ಮುಂಚೆ ಕನಸು ಕಂಡಿದ್ದೇ ಬೇರೆಯಂತೆ?

Follow Us :

ಬಾಹುಬಲಿ ಸಿನೆಮಾದ ಬಳಿಕ ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್‍ ಆಗಿದ್ದಾರೆ. ಸದ್ಯ ಪ್ರಭಾಸ್ ಬ್ಯಾಕ್ ಟು ಬ್ಯಾಕ್ ಬಿಗ್ ಬಜೆಟ್ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಇನ್ನೂ ಅವರ ಸಂಭಾವನೆ ಸಹ ಬರೊಬ್ಬರಿ 150 ಕೋಟಿ. ತೆಲುಗು ಭಾಷೆಯಲ್ಲಿ ಮಾತ್ರವಲ್ಲದೇ ಸೌತ್ ಅಂಡ್ ನಾರ್ತ್‌ನಲ್ಲೂ ಸಹ ಬಹುಬೇಡಿಕೆಯುಳ್ಳ ನಟನಾಗಿದ್ದಾರೆ. ಇನ್ನೂ ಪ್ರಭಾಸ್ ನಟನಾಗುವುದಕ್ಕೂ ಮುಂಚೆ ಕನಸು ಕಂಡಿದ್ದು ಬೇರೆಯಂತೆ. ಆತ ನಟನಾಗುತ್ತೇನೆ ಎಂದೂ ಎಂದಿಗೂ ಊಹಿಸಿಯೇ ಇರಲಿಲ್ಲವಂತೆ. ಆತನ ಕನಸೇ ಬೇರೆಯಾಗಿತ್ತಂತೆ. ಅದು ಏನು ಎಂಬುದನ್ನು ತಿಳಿಯಲು ಮುಂದೆ ಓದಿ..

ದೇಶದ ಸಿನಿರಂಗದ ದೊಡ್ಡ ಸ್ಟಾರ್‍ ನಟರಲ್ಲಿ ಪ್ರಭಾಸ್ ಒಬ್ಬರಾಗಿದ್ದಾರೆ. ಬಾಹುಬಲಿ ಸೀರಿಸ್ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್‍ ಆದ ಪ್ರಭಾಸ್ ರವರ ಸಿನೆಮಾಗಳು ಪ್ಲಾಪ್ ಆದರೂ ಸಹ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತದೆ. ಸದ್ಯ ಪ್ರಭಾಸ್ ಬಿಗ್ ಬಜೆಟ್ ಸಿನೆಮಾಗಳಾದ ಆದಿಪುರುಷ್, ಸಲಾರ್‍, ಪ್ರಾಜೆಕ್ಟ್ ಕೆ, ರಾಜ್ ಡಿಲಕ್ಸ್ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾಗಳ ಒಟ್ಟಾರೆ ಬಜೆಟ್ ಬರೊಬ್ಬರಿ ಎರಡು ಸಾವಿರ ಕೋಟಿ ಎನ್ನಲಾಗುತ್ತಿದೆ. ಅಷ್ಟೊಂದು ಬಜೆಟ್ ಸಿನೆಮಾಗಳಲ್ಲಿ ಪ್ರಭಾಸ್ ನಟಿಸುತ್ತಿದ್ದಾರೆ. ಈ ಕಾರಣದಿಂದಲೇ ಪ್ರಭಾಸ್ ಗೆ  ಇಡೀ ದೇಶದಾದ್ಯಂತ ದೊಡ್ಡ ಅಭಿಮಾನಿ ಬಳಗವೇ ಇದೆ. ಇಷ್ಟೊಂದು ಕ್ರೇಜ್ ಪಡೆದುಕೊಂಡ ಪ್ರಭಾಸ್ ಈ ಹಿಂದೆ ನಟನಾಗಬೇಕು ಎಂದುಕೊಂಡಿರಲಿಲ್ಲವಂತೆ. ಆತನ ಕನಸೇ ಬೇರೆಯಿತ್ತಂತೆ.

ಇನ್ನೂ ಪ್ರಭಾಸ್ ಎಂದೂ ಸಹ ನಟನಾಗಬೇಕು ಎಂದುಕೊಂಡಿರಲಿಲ್ಲವಂತೆ. ನಟನಾಗುವುದು ಆತನ ಕನಸೇ ಅಲ್ಲವಂತೆ. ಪ್ರಭಾಸ್ ರವರೇ ಇತ್ತಿಚಿಗೆ ಹೇಳಿದ್ದಾರೆ. ಪ್ರಭಾಸ್ ಹೇಳಿರುವಂಎತ ನಾನು ನಟನಾಗುತ್ತೇನೆ ಎಂದುಕೊಂಡಿರಲಿಲ್ಲ. ವ್ಯಾಪಾರ ಮಾಡಬೇಕೆಂಬುದು ನನ್ನ ಕನಸು.  ಅದರಲ್ಲೂ ಹೋಟೆಲ್ ಬ್ಯುಸಿನೆಸ್ ಮೇಲೆ ತುಂಬಾ ಆಸಕ್ತಿಯಿತ್ತು. ಹೋಟೆಲ್ ರಂಗದಲ್ಲೆ ಸಾಧನೆ ಮಾಡಬೇಕು ಎಂದುಕೊಂಡಿದ್ದೆ. ನಾನು ಹೆಚ್ಚು ತಿನ್ನುತ್ತೇನೆ ಆ ಕಾರಣದಿಂದಲೇ ನನಗೆ ಹೋಟೆಲ್ ಬ್ಯುಸಿನೆಸ್ ಮೇಲೆ ಮನಸ್ಸಾಗಿರಬಹುದು ಎಂದು ಪ್ರಭಾಸ್ ಹೇಳಿದ್ದಾರೆ. ಆದರೆ ಆ ಸಂದರ್ಭದಲ್ಲಿ ನಮ್ಮ ಕುಟುಂಬ ಸ್ಥಿತಿ ತುಂಬಾನೆ ಕೆಟ್ಟದಾಗಿತ್ತು. ಹೊಟೆಲ್ ಬ್ಯುಸಿನೆಸ್ ಮಾಡಲು ತುಂಬಾನೆ ಹಣ ಬೇಕಿತ್ತು. ಹಣವಿಲ್ಲದೇ ಆ ಆಲೋಚನೆಗಳನ್ನು ಬಿಟ್ಟುಬಿಟ್ಟೆ. ಇನ್ನೂ ಪ್ರಭಾಸ್ ನಟನಾಗದೇ ಇದಿದ್ದರೇ ಬ್ಯುಸಿನೆಸ್ ಮ್ಯಾನ್ ಆಗುತ್ತಿದ್ದರು.

ಇನ್ನೂ ಪ್ರಭಾಸ್ ಕೊನೆಯದಾಗಿ ರಾಧೆಶ್ಯಾಮ್ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತು. ಆದರೂ ಸಹ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ. ಸದ್ಯ ಪ್ರಭಾಸ್ ಬಿಗ್ ಬಜೆಟ್ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್‍ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಇನ್ನೂ ಈಗಾಗಲೇ ಆದಿಪುರುಷ್ ಸಿನೆಮಾ ಸಹ ಶೂಟಿಂಗ್ ಪೂರ್ಣಗೊಳಿಸಿದ್ದು, ಶೀಘ್ರದಲ್ಲೆ ತೆರೆಗೆ ಬರಲಿದೆ. ಅದೇ ರೀತಿ ಬಿಗ್ ಬಜೆಟ್ ಸಿನೆಮಾ ಪ್ರಾಜೆಕ್ಟ್ ಕೆ ಸಿನೆಮಾದಲ್ಲೂ ಸಹ ಪ್ರಭಾಸ್ ಬ್ಯುಸಿಯಾಗಿದ್ದಾರೆ.