ಸಂಭಾವನೆ ಏರಿಸಿದ ಸೀತಾರಾಮಂ ಬ್ಯೂಟಿ ಮೃಣಾಲ್, ನಾನಿ ಸಿನೆಮಾಗಾಗಿ ಭಾರಿ ಮೊತ್ತ ಡಿಮ್ಯಾಂಡ್ ಮಾಡಿದ್ದಾರಂತೆ?

Follow Us :

ನಟಿ ಮೃಣಾಲ್ ಠಾಕೂರ್‍ ಮೂಲತಃ ನಾರ್ತ್ ಗೆ ಸೇರಿದ ನಟಿಯಾಗಿದ್ದು, ಸೀತಾರಾಮಂ ಸಿನೆಮಾದ ಮೂಲಕ ರಾತ್ರೋರಾತ್ರಿ ಸ್ಟಾರ್‍ ನಟಿಯಾದ ಮೃಣಾಲ್ ಠಾಕೂರ್‍ ಇದೀಗ ಸಖತ್ ಫೇಮ್ ಹೊಂದಿರುವ ನಟಿಯಾಗಿದ್ದಾರೆ. ಆಕೆಯ ನಟನೆ, ಸೌಂದರ್ಯ ಎಲ್ಲರನ್ನೂ ಫಿದಾ ಮಾಡಿತ್ತು. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕೆ ಇತ್ತೀಚಿಗೆ ಬೋಲ್ಡ್ ಪೋಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ. ಇನ್ನೂ ಆಕೆ ನ್ಯಾಚುರಲ್ ಸ್ಟಾರ್‍ ನಟ ನಾನಿ ಜೊತೆಗೆ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾಗಾಗಿ ಭಾರಿ ಮೊತ್ತದ ಸಂಭಾವನೆ ಡಿಮ್ಯಾಂಡ್ ಮಾಡುತ್ತಿದ್ದಾರಂತೆ.

ನಟಿ ಮೃಣಾಲ್ ಠಾಕೂರ್‍ ಗೆ ಸೀತಾರಾಮಂ ಸಿನೆಮಾದ ಬಳಿಕ ಅನೇಕ ಸಿನೆಮಾಗಳ ಆಫರ್‍ ಗಳು ಹರಿದು ಬಂದವು. ಇದೀಗ ಟಾಲಿವುಡ್ ನಲ್ಲಿ ಆಕೆ ತನ್ನ ಕ್ರೇಜ್ ಬೆಳೆಸಿಕೊಳ್ಳಲು ಶುರುಹಚ್ಚಿದ್ದಾರೆ. ಆಕೆ ದೊಡ್ಡ ಮಟ್ಟದ ಕ್ರೇಜ್ ಈಗಾಗಲೇ ಪಡೆದುಕೊಂಡಿದ್ದರು, ಸ್ಟಾರ್‍ ನಟರೂ ಸಹ ಆಕೆಯನ್ನು ನಟಿಯಾಗಿ ಆಯ್ಕೆ ಮಾಡಿಕೊಳ್ಳಲು ಆಸಕ್ತಿ ತೋರುತ್ತಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ ಮೊದಲನೇ ಸಿನೆಮಾ ಭಾರಿ ಸಕ್ಸಸ್ ಕಂಡ ಕಾರಣದಿಂದಾಗಿ ಆಕೆ ತನ್ನ ರೆನ್ಯುಮರೇಷನ್ ಸಹ ಏರಿಸಿದ ಕಾರಣದಿಂದಾಗಿ ಆಕೆ ಮುಂದಿನ ಸಿನೆಮಾಗಳಲ್ಲಿ ನಟಿಸಲು ಕೊಂಚ ಸಮಯ ಬೇಕಿತ್ತು. ಇದಕ್ಕೆ ಕಾರಣ ಆಕೆಯ ಭಾರಿ ಸಂಭಾವನೆ ಏರಿಕೆ ಮಾಡಿದ್ದು ಎಂದು ಹೇಳಲಾಗುತ್ತಿದೆ. ಇದೀಗ ಆಕೆ ನ್ಯಾಚುರಲ್ ಸ್ಟಾರ್‍ ನಾನಿ ಜೊತೆಗೆ ಸಿನೆಮಾ ಒಂದರಲ್ಲಿ ನಟಿಸುತ್ತಿದ್ದಾರೆ.

ತೆಲುಗು ಸಿನಿರಂಗದಲ್ಲಿ ನ್ಯಾಚುರಲ್ ಸ್ಟಾರ್‍ ನಾನಿ ತುಂಬಾನೆ ಫೇಂ ಹೊಂದಿರುವ ನಟ. ಈ ಸಿನೆಮಾದಲ್ಲಿ ನಾನಿಗೆ ಜೋಡಿಯಾಗಿ ಮೃಣಾಲ್ ಠಾಕೂರ್‍ ರನ್ನು ಫೈನಲ್ ಮಾಡಲಾಗಿದೆ. ಇನ್ನೂ ಈ ಸಿನೆಮಾಗಾಗಿ ಆಕೆ ಕೇಳಿದಷ್ಟು ಸಂಭಾವನೆಯನ್ನು ಸಹ ಕೊಡಲು ನಿರ್ಮಾಪಕರು ಸಿದ್ದರಾಗಿದ್ದಾರಂತೆ. ನಾನಿ ಸಹ ಮೃಣಾಲ್ ಠಾಕೂರ್‍ ರವರೇ ಚೆನ್ನಾಗಿರುತ್ತಾರೆ ಎಂದು ಹೇಳಿದ ಕಾರಣದಿಂದ ನಿರ್ಮಾಪಕರೂ ಸಹ ಒಪ್ಪಿಗೆ ನೀಡಿದ್ದಾರಂತೆ. ಇನ್ನೂ ಈ ಸಿನೆಮಾಗಾಗಿ ಮೃಣಾಲ್ ಬರೊಬ್ಬರಿ ಎರಡು ಕೋಟಿ ಡಿಮ್ಯಾಂಡ್ ಮಾಡುತ್ತಿದ್ದಾರಂತೆ. ಅದಕ್ಕೆ ನಿರ್ಮಾಪಕರೂ ಸಹ ಒಪ್ಪಿಗೆ ನೀಡಿದ್ದಾರಂತೆ. ಇನ್ನೂ ಕಡಿಮೆ ಸಮಯದಲ್ಲೇ ಭಾರಿ ಸಂಭಾವನೆ ಪಡೆದುಕೊಳ್ಳುತ್ತಿರುವ ನಟಿಯಾಗಿ ಮೃಣಾಲ್ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನೂ ಶೀಘ್ರದಲ್ಲೇ ನಾನಿ 30ನೇ ಸಿನೆಮಾದ ಶೂಟಿಂಗ್ ಸಹ ಪ್ರಾರಂಭವಾಗಲಿದೆ.

ಇನ್ನೂ ಮರಾಠಿ ಮೂಲದ ನಟಿ ಮೃಣಾಲ್ ಠಾಕೂರ್‍ ಹಿಂದಿ ಸೀರಿಯಲ್ಸ್ ಮೂಲಕ ಸಿನಿರಂಗಕ್ಕೆ ಎಂಟ್ರಿಕೊಟ್ಟರು. ಸೀತಾರಾಮಂ ಸಿನೆಮಾದ ಮೂಲಕ ತೆಲುಗು ಪ್ರೇಕ್ಷಕರ ಅಭಿಮಾನವನ್ನು ಪಡೆದುಕೊಂಡರು. ಇನ್ನೂ ಮೊದಲನೇ ಸಿನೆಮಾದ ಮೂಲಕ ಭಾರಿ ಕ್ರೇಜ್ ಪಡೆದುಕೊಂಡ ಈಕೆ ಎರಡನೇ ಸಿನೆಮಾಗಾಗಿ ತುಂಬಾನೆ ಸಮಯ ಪಡೆದುಕೊಂಡಿದ್ದಾರೆ. ಇದೀಗ ನಾನಿ ಸಿನೆಮಾಗೆ ಎರಡು ಕೋಟಿ ಡಿಮ್ಯಾಂಡ್ ಮಾಡುತ್ತಿರುವ ಮೃಣಾಲ್ ಬಾಲಿವುಡ್ ನಲ್ಲೂ ಸಹ ಬ್ಯುಸಿಯಾಗಿದ್ದಾರೆ. ಸದ್ಯ ನಾನಿ ಜೊತೆಗೆ ಮೃಣಾಲ್ ಕಾಂಬಿನೇಷನ್ ಯಾವ ರೀತಿಯಲ್ಲಿ ಹವಾ ಕ್ರಿಯೇಟ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.