Film News

ವೈರಲ್ ಆದ ಹೋಮ್ಲಿ ಬ್ಯೂಟಿ ಸ್ನೇಹಾ ಗ್ಲಾಮರಸ್ ಪೊಟೋಗಳು, ಪ್ರತಿನಿತ್ಯ ಅಮೃತ ಕುಡಿಯುತ್ತೀಯಾ ಎಂದ ಅಭಿಮಾನಿಗಳು….!

ಸೌತ್ ಸಿನಿರಂಗದಲ್ಲಿ ಹೋಮ್ಲಿ ಬ್ಯೂಟಿ ಎಂದೇ ಖ್ಯಾತಿ ಪಡೆದ ಸ್ನೇಹಾ ಅನೇಕ ಸಿನೆಮಾಗಳ ಮೂಲಕ ಸ್ಟಾರ್‍ ನಟಿಯಾಗಿದ್ದರು. ಸ್ನೇಹಾ ತೊಲಿ ವಲಪು ಎಂಬ ಸಿನೆಮಾದ ಮೂಲಕ ಟಾಲಿವುಡ್ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಮದುವೆಯಾದರೂ ಸಹ ಆಕೆಯ ಗ್ಲಾಮರ್‍ ಮಾತ್ರ ಹಾಗೆ ಇದೆ. ಇದಕ್ಕೆ ಸಾಕ್ಷಿಯೆಂಬಂತೆ ಆಕೆ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುವಂತಹ ಪೊಟೋಗಳು. ಸಿನೆಮಾಗಳಲ್ಲಿ ಬಹುತೇಕ ಹೋಮ್ಲಿಯಾಗಿಯೇ ಕಾಣಿಸಿಕೊಂಡ ಈಕೆ ಇತ್ತೀಚಿಗೆ ಗ್ಲಾಮರ್‍ ಡೋಸ್ ಕೊಂಚ ಕೊಂಚ ಏರಿಸುತ್ತಿದ್ದಾರೆ. ಇದೀಗ ಆಕೆಯ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದೆ.

ಸೌತ್ ನಟಿ ಸ್ನೇಹಾ ಕೆರಿಯರ್‍ ನಲ್ಲಿ ಹೋಮ್ಲಿಯಾಗಿಯೇ ಹೆಚ್ಚಾಗಿ ಕಾಣಿಸಿಕೊಂಡಿದ್ದರು. ಇತ್ತೀಚಿಗೆ ಆಕೆ ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರ್‍ ಡೋಸ್ ಏರಿಸುತ್ತಿದ್ದಾರೆ. ವಿವಿಧ ರೀತಿಯ ಗ್ಲಾಮರಸ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಸೌಂದರ್ಯ ಪ್ರದರ್ಶನದಲ್ಲಿ ಯಂಗ್ ನಟಿಯರಿಗೂ ಪೈಪೋಟಿ ನೀಡುತ್ತಿದ್ದಾರೆ. ಮೊದಲಿಗೆ ಟ್ರೆಡಿಷನಲ್ ಆಗಿಯೇ ಕಾಣಿಸಿಕೊಂಡ ಈಕೆ ಈಗ ಹಾಟ್ ಲುಕ್ಸ್ ಮೂಲಕ ಎಲ್ಲರನ್ನೂ ಮಸ್ಮರೈಜ್ ಮಾಡುತ್ತಿದ್ದಾರೆ. ಮದುವೆಯಾಗಿ, ಮಕ್ಕಳಾದರೂ ಸಹ ಆಕೆ ತುಂಬಾನೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಸ್ನೇಹಾ ಈಗಾಗಲೇ ಸೆಕೆಂಡ್ ಇನ್ನೀಂಗ್ಸ್ ಪ್ರಾರಂಭಿಸಿದ್ದು, ಅನೇಕ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಕೈತುಂಬ ಸಿನೆಮಾಗಳನ್ನು ಇಟ್ಟುಕೊಂಡು ಬ್ಯುಸಿಯಾಗಿ ಕಾಲ ಕಳೆಯುತ್ತಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಪುಲ್ ಬ್ಯುಸಿಯಾಗಿರುತ್ತಾ ಆಗಾಗ ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ.

ಇನ್ನೂ ಸ್ನೇಹಾ ಬ್ಲೂ ಕಲರ್‍ ಟ್ರೆಂಡಿ ಡ್ರೆಸ್ ನಲ್ಲಿ ಕ್ಯೂಟ್ ಅಂಡ್ ಹಾಟ್ ಪೋಸ್ ಕೊಟ್ಟಿದ್ದಾರೆ. ಈ ಪೊಟೋಗಳಲ್ಲಿ ಆಕೆಯನ್ನು ನೋಡಿದರೇ ಆಕೆಗೆ ಮದುವೆಯಾಗಿದೆ, ಮಕ್ಕಳಾಗಿದ್ದಾರೆ ಎಂದು ಹೇಳಲು ಸಾಧ್ಯವೇ ಇಲ್ಲ ಎಂದು ಅಭಿಮಾನಿಗಳು ಅಭಿಪ್ರಾಯ ಪಡುತ್ತಿದ್ದಾರೆ. ವಯಸ್ಸಾದರೂ ಸಹ ಯಂಗ್ ನಟಿಯಂತೆ ಸ್ನೇಹಾ ಮಾದಕ ನೋಟ ಬೀರಿದ್ದಾರೆ. ಅದರಲ್ಲೂ ಆಕೆಯ ಮತ್ತೇರಿಸುವಂತಹ ಲುಕ್ಸ್ ಎಲ್ಲರನ್ನೂ ಫಿದಾ ಮಾಡಿದೆ. ಆಕೆ ಕ್ಯೂಟ್ ಸ್ಮೈಲ್ ಅಂತೂ ಯುವಕರನ್ನು ತನ್ನತ್ತ ಸೆಳೆದುಕೊಂಡಿದೆ. ಆಕೆಯ ಈ ಪೊಟೋಗಳು ವೈರಲ್ ಆಗುತ್ತಿದ್ದು, ನೀವು ಹೊಟ್ಟೆಗೆ ಅನ್ನ ತಿನ್ನುತ್ತೀರಾ ಅಥವಾ ಅಮೃತ ಕುಡಿಯುತ್ತೀರಾ ಎಂದು ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ನಿಮ್ಮ ಬ್ಯೂಟಿ ಸೀಕ್ರೇಟ್ ಏನು ಎಂದು ರಿವೀಲ್ ಮಾಡಿ ಎಂತಲೂ ಕಾಮೆಂಟ್ಸ್ ಮಾಡುತ್ತಿದ್ದಾರೆ.

ಪ್ರಿಯಮೈನ ನೀಕು, ವೆಂಕಿ, ಶ್ರೀರಾಮದಾಸು ಸೇರಿದಂತೆ ಅನೇಕ ಸೂಪರ್‍ ಹಿಟ್ ಸಿನೆಮಾಗಳ ಮೂಲಕ ಸ್ನೇಹಾ ಫೇಮ್ ಪಡೆದುಕೊಂಡು ಸ್ಟಾರ್‍ ನಟಿಯಾಗಿ ತೆಲುಗು ಸಿನಿರಂಗವನ್ನು ಆಳಿದಂತಹ ನಟಿಯಾಗಿದ್ದಾರೆ. ಸಿನಿರಂಗದಲ್ಲಿ ಬ್ಯುಸಿಯಾಗಿರುವಾಗಲೇ ಆಕೆ ಪ್ರಸನ್ನ ಎಂಬ ನಟನನ್ನು ಮದುವೆಯಾದರು. ಸದ್ಯ ಕುಟುಂಬದೊಂದಿಗೆ ಎಂಜಾಯ್ ಮಾಡುತ್ತಿರುವ ಈಕೆ ಆಗಾಗ ಸಿನೆಮಾಗಳಲ್ಲಿ ನಟಿಸುತ್ತಾ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ.

Most Popular

To Top