ಎಲ್.ಪಿ.ಜಿ ಬಳಕೆದಾರರು ಮಾ.31 ರೊಳಗೆ ತಪ್ಪದೇ KYC ಮಾಡಿಸಿ, ಇಲ್ಲವಾದಲ್ಲಿ ಸಬ್ಸಿಡಿ ಹಣ ಬರೊಲ್ಲ…..!

Follow Us :

ದೇಶದಲ್ಲಿ ಎಲ್.ಪಿ.ಜಿ ಗ್ಯಾಸ್ ಕನೆಕ್ಷನ್ ಪಡೆದುಕೊಂಡಿರುವ ಬಳಕೆದಾರರು ಕಡ್ಡಾಯವಾಗಿ ಮಾ.31 ರೊಳಗೆ KYC ಮಾಡಬೇಕಿದೆ. ಇಲ್ಲವಾದಲ್ಲಿ ಗ್ಯಾಸ್ ಸಿಲಂಡರ್‍ ಗೆ ಬರುವ ಸಬ್ಸಿಡಿ ಹಣ ಬರೊದಿಲ್ಲ ಎಂದು ಹೇಳಲಾಗಿದೆ. ಕೇಂದ್ರ ಸರ್ಕಾರದ ಸಬ್ಸಿಡಿ ಪಡೆಯಲು ಫಲಾನುಭವಿಗಳು ಮಾ.31 ರೊಳಗೆ KYC ಪೂರ್ಣಗೊಳಿಸಬೇಕು ಎಂದು ಸರ್ಕಾರ ತಿಳಿಸಿದೆ.

ದೇಶದಲ್ಲಿ ಅನೇಕರು ಬಹುತೇಕ ಮಂದಿ ಗ್ಯಾಸ್ ಸಿಲಂಡರ್‍ ಬಳಸುತ್ತಿದ್ದಾರೆ. ಸಬ್ಸಿಡಿಯಲ್ಲಿ ಗ್ಯಾಸ್ ಸಿಲಂಡರ್‍ ಬಳಸುತ್ತಿರುವವರು ಕೂಡಲೇ ಕೆ.ವೈ.ಸಿ ಮಾಡಿಸಬೇಕಿದೆ. ಈಗಾಗಲೇ ಅನೇಕ ಗ್ರಾಹಕರು ಕೆವೈಸಿ ಪೂರ್ಣಗೊಳಿಸಿದ್ದಾರೆ ಇನ್ನೂ ಅನೇಕರು ತಮ್ಮ ಕೆವೈಸಿ ಮಾಡಿಸಿಲ್ಲ. ಆದ್ದರಿಂದ ಅಧಿಕಾರಿಗಳು ಇದೀಗ ಪ್ರಕಟನೆ ಮೂಲಕ ಕೆವೈಸಿ ಪೂರ್ಣಗೊಳಿಸುವಂತೆ ತಿಳಿಸಿದ್ದಾರೆ. ಜೊತೆಗೆ ಕೊನೆಯ ದಿನಾಂಕವನ್ನು ಸಹ ನೀಡಲಾಗಿದೆ. ಮಾ.31 ರೊಳಗೆ ಕೆವೈಸಿ ಮಾಡದೇ ಇದ್ದರೇ  ಸರ್ಕಾರದಿಂದ ಸಿಗಬೇಕಾದ ಸಬ್ಸಿಡಿ ನಿಲ್ಲಿಸಬಹುದಾಗಿದೆ. ಇನ್ನೂ ಕೆವೈಸಿ ಅಪ್ಡೇಟ್ ಮಾಡಲು ಸಹ ಎರಡು ವಿಧಾನಗಳಿವೆ.

ತಮ್ಮ ಗ್ಯಾಸ್ ಏಜೆನ್ಸಿ ಕಚೇರಿಯಿಂದ ತಮ್ಮ ಕೆವೈಸಿ ಮಾಡಿಸಬಹುದು. ಅಥವಾ ಆನ್ ಲೈನ್ ಮೂಲಕವೂ ಸಹ ಕೆವೈಸಿ ಮಾಡಬಹುದಾಗಿದೆ. ಅಧಿಕೃತ ವೆಬ್ ಸೈಟ್ https://www.mylpg.in/ ಗೆ ಹೋಗಿ ತಮ್ಮ ಗ್ಯಾಸ್ ಕಂಪನಿಯನ್ನು ಆಯ್ಕೆ ಮಾಡಿಕೊಳ್ಳಬೇಕು ವೆಬ್ ಸೈಟ್ ನಲ್ಲಿ ನಿಮ್ಮ ಗ್ಯಾಸ್ ಕಂಪನಿಯ ಚಿತ್ರದ ಮೇಲೆ ಕ್ಲಿಕ್ ಮಾಡಬೇಕು. ಬಳಿಕ ತಮ್ಮ ಗ್ಯಾಸ್ ಕಂಪನಿಯ ವಿಂಡೋ ಒಪೆನ್ ಆಗುತ್ತದೆ. ಬಳಿಕ ಅಲ್ಲಿ ಕೆವೈಸಿ ಆಯ್ಕೆಗೆ ಹೋಗಿ. ಅದರಲ್ಲಿ ಕೇಳುವ ಅಗತ್ಯ ಮಾಹಿತಿ ನೀಡಿ ತಮ್ಮ ಕೆವೈಸಿ ಮಾಡಿಕೊಳ್ಳಬಹುದಾಗಿದೆ.