News

ಜಾತಿ ನಿಂದನೆ ಆರೋಪ ತನಿಷಾ ವಿರುದ್ದ ದೂರು, ಬಿಗ್ ಬಾಸ್ ಗೆ ನೊಟೀಸ್ ಕೊಟ್ಟ ಪೊಲೀಸರು.….!

ಕಿರುತೆರೆಯಲ್ಲಿ ಭಾರಿ ಹೈಪ್ ಕ್ರಿಯೇಟ್ ಮಾಡಿರುವ ರಿಯಾಲಿಟಿ ಶೋಗಳಲ್ಲಿ ಬಿಗ್ ಬಾಸ್ ಸಹ ಒಂದಾಗಿದೆ. ಈ ಬಾರಿ ಕನ್ನಡದ ಬಿಗ್ ಬಾಸ್ ಮನೆಯ ಒಳಗಿನ ವಿವಾದಕ್ಕಿಂತಲೂ ಹೊರಗೆ ಸೃಷ್ಟಿಯಾಗುತ್ತಿರುವ ವಿವಾದ ಭಾರಿ ಸುದ್ದಿಯಾಗುತ್ತಿದೆ ಎನ್ನಬಹುದಾಗಿದೆ. ಹುಲಿ ಉಗುರು ಧರಿಸಿದ ಆರೋಪದ ಮೇರೆಗೆ ಜೈಲು ಸೇರಿದ್ದ ವರ್ತೂರು ಸಂತೋಷ್ ಜಾಮೀನಿನ ಮೇಲೆ ಮತ್ತೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಕೆಲವು ದಿನಗಳ ಹಿಂದೆಯಷ್ಟೆ ಮತ್ತೋರ್ವ ಸ್ಪರ್ಧಿ ತನಿಷಾ ವಿರುದ್ದ ಜಾತಿನಿಂದನೆ ದೂರು ದಾಖಲಾಗಿದೆ.

ನಟಿ ತನಿಷಾ ಬಿಗ್ ಬಾಸ್ ಮನೆಯಲ್ಲಿ ಆಡಿದಂತಹ ಮಾತಿನಿಂದ ವಿವಾದಕ್ಕೆ ಗುರಿಯಾಗಿದ್ದಾರೆ. ಬೋವಿ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಬೋವಿ ಸಮುದಾಯದ ಮಹಿಳಾ ವಿಭಾಗದ ಅಧ್ಯಕ್ಷೆ ಪದ್ಮಾ ಎಂಬುವವರು ಕುಂಬಳಗೋಡು ಪೊಲೀಸ್ ಠಾನೆಯಲ್ಲಿ ದೂರು ದಾಖಲಿಸಿದ್ದರು. ಇನ್ನೂ ಈ ಪ್ರಕರಣದ ಸಂಬಂದ ವಿಚಾರಣೆ ಕೈಗೆತ್ತಿಕೊಂಡಿರುವ ರಾಮನಗರ ಪೊಲೀಸರು ಬಿಗ್ ಬಾಸ್ ಶೋ ಆಯೋಜಕರಿಗೆ ನೊಟೀಸ್ ಸಹ ಜಾರಿ ಮಾಡಿದ್ದಾರೆ ಎನ್ನಲಾಗಿದೆ. ಇನ್ನೂ ಈ ಬಗ್ಗೆ ರಾಮನಗರ ಎಸ್.ಪಿ. ಕಾರ್ತಿಕ್ ರೆಡ್ಡಿ ಮಾದ್ಯಮಗಳೊಂದಿಗೆ ಮಾತನಾಡಿ, ಬಿಗ್ ಬಾಸ್ ಸ್ಪರ್ಧಿ ತನಿಷಾ ಬೋವಿ ಸಮುದಾಯಕ್ಕೆ ಅವಹೇಳನ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ. ದೂರಿನಂತೆ ಆಕೆಯ ಎಸ್.ಸಿ/ಎಸ್.ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಇನ್ನೂ ತನಿಷಾ ನಿಂದನೆ ಮಾಡುವಂತಹ ಪದ ಬಳಸಿದ್ದಾರೆ ಎನ್ನುವ ಪ್ರೊಮೋ ವಿಡಿಯೋ ಪರಿಶೀಲನೆ ನಡೆಸಿದ್ದು, ಮೂಲ ದೃಶ್ಯಗಳ ವಿಡಿಯೋ ನೀಡುವಂತೆ ಬಿಗ್ ಬಾಸ್ ಗೆ ನೊಟೀಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನೂ ಈ ಪ್ರಕರಣವನ್ನು ನಿಯಮಗಳಂತೆ ತನಿಖೆ ನಡೆಸುತ್ತಿದ್ದು, ಬಿಗ್ ಬಾಸ್ ಆಯೋಜಕರು ನೀಡುವಂತಹ ದೃಶ್ಯಗಳನ್ನು ಪರಿಶೀಲಿಸಿ ಬಳಿಕ ಮುಂದಿನ ಕ್ರಮ ತೆಗೆದುಕೋಳ್ಳುತ್ತೇವೆ. ಈ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ಮಾಗಡಿ ಡಿ.ವೈ.ಎಸ್.ಪಿ ರವರಿಗೆ ವಹಿಸಲಾಗಿದೆ ಎಂದು ತಿಳಿಸಿದ್ದಾರೆ. ಇನ್ನೂ ತನಿಷಾ ಬಿಗ್ ಬಾಸ್ ನಲ್ಲಿ ಡ್ರೋನ್ ಪ್ರತಾಪ್ ರವರ ಮೇಲೆ ಬೈಯುತ್ತಿದ್ದ ಸಮಯದಲ್ಲಿ ಮಾಡಿದಂತಹ ಪದ ಬೋವಿ ಸಮುದಾಯದ ವಿರುದ್ದ ಇದೆ ಎಂದು ಆರೋಪದ ಮೇರೆಗೆ ತನಿಷಾ ವಿರುದ್ದ ದೂರು ದಾಖಲಾಗಿದೆ.

Most Popular

To Top