ಬಾಲಿವುಡ್ ನಟಿ ಕಾಜೋಲ್ ಡೀಪ್ ಫೇಕ್ ನ್ಯೂಡ್ ವಿಡಿಯೋ ವೈರಲ್, ರಶ್ಮಿಕಾ ವಿಡಿಯೋ ಪ್ರಕರಣ ಮರೆಯಾಗುವ ಮುಂಚೆ ಮತ್ತೊಂದು…..!

Follow Us :

ಕೆಲವು ದಿನಗಳ ಹಿಂದೆಯಷ್ಟೆ ಸ್ಟಾರ್‍ ನಟಿ ರಶ್ಮಿಕಾ ಮಂದಣ್ಣ ರವರ ಡೀಪ್ ಫೇಕ್ ವಿಡಿಯೋ ಇಡೀ ದೇಶದಾದ್ಯಂತ ಭಾರಿ ಸಂಚಲನ ಸೃಷ್ಟಿಸಿತ್ತು. ಈ ವಿಡಿಯೋ ಹೊರಬಂದ ಬಳಿಕ ಅನೇಕ ನಟಿಯರು ತುಂಬಾನೆ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಆ ರೀತಿ ನಮ್ಮ ವಿಡಿಯೋ ಬಂದರೇ ಏನು ಗತಿ ಎಂಬ ಭಯಪಡುತ್ತಿದ್ದಾರೆ. ಇದೀಗ ಬಾಲಿವುಡ್ ಸ್ಟಾರ್‍ ನಟಿ ಕಾಜೋಲ್ ದೇವಗನ್ ರವರ ಡೀಪ್ ಫೇಕ್ ವಿಡಿಯೋ ಒಂದು ಇಂಟರ್‍ ನೆಟ್ ನಲ್ಲಿ ಸಂಚಲನ ಸೃಷ್ಟಿಸಿದೆ.

ಆರ್ಟಿಫಿಷಿಯಲ್ ಇಂಟಿಲಿಜೆನ್ಸ್ ಮೂಲಕ ಕೆಲ ಕಿಡಿಗೇಡಿಗಳು ಡೀಪ್ ಫೇಕ್ ವಿಡಿಯೋಗಳನ್ನು ಕ್ರಿಯೇಟ್ ಮಾಡಿ ಸೋಷಿಯಲ್ ಮಿಡಿಯಾದಲ್ಲಿ ಹರಿಬಿಡುತ್ತಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ರಶ್ಮಿಕಾ ರವರ ಡೀಪ್ ಫೇಕ್ ವಿಡಿಯೋ ವಿವಾದ ಇಡೀ ದೇಶದಾದ್ಯಂತ ಭಾರಿ ಸದ್ದು ಮಾಡಿತ್ತು. ಈ ವಿಡಿಯೋ ಬಗ್ಗೆ ಅನೇಕ ಸಿನೆಮಾ ಸೆಲೆಬ್ರೆಟಿಗಳು, ರಾಜಕೀಯ ನಾಯಕರು ಸಹ ಈ ಬಗ್ಗೆ ಆಗ್ರಹ ವ್ಯಕ್ತಪಡಿಸಿದ್ದರು. ಇನ್ನೂ ರಶ್ಮಿಕಾ ಫೇಕ್ ವಿಡಿಯೋ ಸುದ್ದಿ ಹಸಿಯಾಗಿರುವಾಗಲೇ ಬಾಲಿವುಡ್ ಸೀನಿಯರ್‍ ನಟಿ ಕಾಜೋಲ್ ಡೀಪ್ ಫೇಕ್ ವಿಡಿಯೋ ವೈರಲ್ ಆಗುತ್ತಿದೆ. ಈ ಬಾರಿ ಕಾಜೋಲ್ ಫೇಕ್ ವಿಡಿಯೋ ರಶ್ಮಿಕಾ ಫೇಕ್ ವಿಡಿಯೋ ಗಿಂತ ಅಸಭ್ಯಕರವಾಗಿದೆ ಎನ್ನಲಾಗುತ್ತಿದೆ.

ಈ ಹಿಂದೆ ವೈರಲ್ ಆದ ರಶ್ಮಿಕಾ ಡೀಪ್ ಫೇಕ್ ವಿಡಿಯೋ ಗಿಂತ ಕಾಜೋಲ್ ವಿಡಿಯೋ ಮತಷ್ಟು ಅಸಭ್ಯಕರವಾಗಿದೆ ಎನ್ನಲಾಗುತ್ತಿದೆ. ಕಾಜೋಲ್ ನ್ಯೂಡ್ ಆಗಿ ಬಟ್ಟೆ ಬದಲಿಸುತ್ತಿರುವಂತೆ ಈ ವಿಡಿಯೋ ಕ್ರಿಯೇಟ್ ಮಾಡಲಾಗಿದೆ. ಕಾಜೋಲ್ ಕೋಣೆಯೊಂದರಲ್ಲಿ ಬಟ್ಟೆ ಬದಲಿಸಿಕೊಳ್ಳುತ್ತಿರುವ ಫೇಕ್ ವಿಡಿಯೋ ಇದಾಗಿದೆ. ಈ ವಿಡಿಯೋ ಇದೀಗ ಸಿನಿರಂಗ ಮಾತ್ರವಲ್ಲದೇ ಎಲ್ಲಾ ಕಡೆ ಭಾರಿ ಸದ್ದು ಮಾಡುತ್ತಿದೆ. ಕಿಡಗೇಡಿಗಳ ಕೃತ್ಯಕ್ಕೆ ಕಡಿವಾಣ ಹಾಕಬೇಕೆಂಬ ಕೂಗು ಜೋರಾಗಿದೆ. ಕಾಜೋಲ್ ದೇವಗನ್ ಡೀಪ್ ಫೇಕ್ ವಿಡಿಯೋ ಬಗ್ಗೆ ಕಾಜೋಲ್ ದೇವಗನ್ ಕುಟುಂಬ ರಿಯಾಕ್ಟ್ ಆಗಬೇಕಿದೆ. ಕೆಲವು ಸೆಕೆಂಡ್ ಗಳ ವಿಡಿಯೋ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಬಿರುಗಾಳಿಯಂತೆ ಹರಿದಾಡುತ್ತಿದೆ. ಕೂಡಲೇ ಈ ಮಾದರಿಯಲ್ಲಿ ಫೇಕ್ ವಿಡಿಯೋ ಹರಿಬಿಡುವಂತಹ ಕಿಡಗೇಡಿಗಳಿಗೆ ಕಡಿವಾಣ ಹಾಕಬೇಕಿದೆ ಎಂಬುದು ಎಲ್ಲರ ಒತ್ತಾಯವಾಗಿದೆ.