ಬ್ರೇಕಪ್ ಅಂದಿದಕ್ಕೆ ಪ್ರಿಯತಮ ಮಾಡಿದ್ದು ಕೊಲೆ, ಕತ್ತು ಸೀಳಿ ಬರ್ಬರವಾಗಿ ಕೊಂದು ಬಿಟ್ಟ….!

ಜಗತ್ತಿನಲ್ಲಿ ಪ್ರೀತಿಯ ಕಾರಣದಿಂದ ಅನೇಕರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ, ಕೆಲವರು ಪ್ರೀತಿ ತ್ಯಾಗ ಮಾಡಿದ್ದಾರೆ. ಅದೇ ಮಾದರಿಯಲ್ಲಿ ಕೆಲವರು ಕೊಲೆಯನ್ನು ಸಹ ಮಾಡಿದ್ದಾರೆ. ಈ ಹಾದಿಯಲ್ಲೇ ಹಾಸನದಲ್ಲಿ ಬ್ರೇಕಪ್ ಕಾರಣದಿಂದ ಯುವತಿಯೊಬ್ಬಳ ಕತ್ತು…

ಜಗತ್ತಿನಲ್ಲಿ ಪ್ರೀತಿಯ ಕಾರಣದಿಂದ ಅನೇಕರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ, ಕೆಲವರು ಪ್ರೀತಿ ತ್ಯಾಗ ಮಾಡಿದ್ದಾರೆ. ಅದೇ ಮಾದರಿಯಲ್ಲಿ ಕೆಲವರು ಕೊಲೆಯನ್ನು ಸಹ ಮಾಡಿದ್ದಾರೆ. ಈ ಹಾದಿಯಲ್ಲೇ ಹಾಸನದಲ್ಲಿ ಬ್ರೇಕಪ್ ಕಾರಣದಿಂದ ಯುವತಿಯೊಬ್ಬಳ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.

ಹಾಸನ ಜಿಲ್ಲೆಯ ಅಗಿಲೆ ಬಳಿಯ ಕುಂತಿ ಬೆಟ್ಟದಲ್ಲಿ ಈ ಕೊಲೆ ನಡೆದಿದೆ ಎನ್ನಲಾಗಿದೆ. ಮೊಸಳೆ ಹೊಸಳ್ಳಿ ಇಂಜನೀಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಮೃತ ದುರ್ದೈವಿ ಸುಚಿತ್ರಾ (21) ಹಾಗೂ ಆರೋಪಿ ತೇಜಸ್ ನಡುವೆ ಲವ್ ಬ್ರೇಕಪ್ ಆಗಿದೆ. ಈ ಸಂಬಂಧ ಇಬ್ಬರ ನಡುವೆ ಜಗಳ ನಡೆದಿದೆ ಎನ್ನಲಾಗಿದೆ. ಈ ವೇಳೆ ಮಾತನಾಡುವ ನೆಪದಲ್ಲಿ ಆಕೆಯನ್ನು ಕುಂತಿ ಬೆಟ್ಟಕ್ಕೆ ಕರೆಸಿ ಕತ್ತು ಸೀಳಿ ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಪೊಲೀಸರು ಆರೋಪಿ ತೇಜಸ್ ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಲವ್ ಬ್ರೇಕಪ್ ಆದ ಕಾರಣದಿಂದ ಕೋಪಗೊಂಡ ತೇಜಸ್ ಮೃತ ಸುಚಿತ್ರಾ ರನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬಂಧಿತ ಮೂಲತಃ ಹಾಸನ ತಾಲೂಕಿನ ಶಂಕರನಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ಮೊಸಳೆ ಹೊಸಳ್ಳಿಯಲ್ಲಿರುವ ಸರ್ಕಾರಿ ಇಂಜನಿಯರಿಂಗ್ ಕಾಲೇಜಿನಲ್ಲಿ ಇಂಜನೀಯರಿಂಗ್ ಪದವಿಯನ್ನು ವ್ಯಾಸಂಗ ಮಾಡುತ್ತಿದ್ದಾನೆ ಎನ್ನಲಾಗಿದೆ. ಲವ್ ಬ್ರೇಕಪ್ ನಿಂದ ಕೋಪಗೊಂಡ ತೇಜಸ್ ಸುಚಿತ್ರಾ ಳನ್ನು ತನ್ನೊಂದಿಗೆ ಕುಂತಿ ಬೆಟ್ಟಕ್ಕೆ ಕರೆದುಕೊಂಡು ಹೋಗಿ, ಅಲ್ಲಿ ಆಕೆಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ ಎನ್ನಲಾಗಿದ್ದು, ಈ ಸಂಬಂಧ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ ಎನ್ನಲಾಗಿದೆ.