ಹಿರೋಗಳ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ ಅನಸೂಯ, ಅವರು ಏನು ಮಾಡಿದ್ರು ಸುಮ್ಮನಿರಬೇಕು ಎಂದ ನಟಿ….!

ಕಿರುತೆರೆಯ ಮೂಲಕ ಫೇಂ ಪಡೆದುಕೊಂಡು ಸಿನೆಮಾಗಳಲ್ಲಿ ಸಕ್ಸಸ್ ಕಂಡುಕೊಡ ನಟಿಯರಲ್ಲಿ ಅನಸೂಯ ಭಾರದ್ವಾಜ್ ಸಹ ಒಬ್ಬರಾಗಿದ್ದಾರೆ. ಜಬರ್ದಸ್ತ್ ಶೋ ಮೂಲಕ ಫೇಂ ಪಡೆದುಕೊಂಡ ಈಕೆ ಬಳಿಕ ದೊಡ್ಡ ದೊಡ್ಡ ಸ್ಟಾರ್‍ ಗಳ ಸಿನೆಮಾಗಳಲ್ಲಿ ನಟಿಸುವ…

ಕಿರುತೆರೆಯ ಮೂಲಕ ಫೇಂ ಪಡೆದುಕೊಂಡು ಸಿನೆಮಾಗಳಲ್ಲಿ ಸಕ್ಸಸ್ ಕಂಡುಕೊಡ ನಟಿಯರಲ್ಲಿ ಅನಸೂಯ ಭಾರದ್ವಾಜ್ ಸಹ ಒಬ್ಬರಾಗಿದ್ದಾರೆ. ಜಬರ್ದಸ್ತ್ ಶೋ ಮೂಲಕ ಫೇಂ ಪಡೆದುಕೊಂಡ ಈಕೆ ಬಳಿಕ ದೊಡ್ಡ ದೊಡ್ಡ ಸ್ಟಾರ್‍ ಗಳ ಸಿನೆಮಾಗಳಲ್ಲಿ ನಟಿಸುವ ಅವಕಾಶವನ್ನು ಪಡೆದುಕೊಂಡರು. ಜೊತೆಗೆ ಆಕೆ ಸದಾ ಸುದ್ದಿಯಲ್ಲಿರುತ್ತಾರೆ. ಕೆಲವೊಂದು ವಿಚಾರಗಳ ಬಗ್ಗೆ ನೇರವಾಗಿಯೇ ಮಾತನಾಡುತ್ತಿರುತ್ತಾರೆ. ಇದೀಗ ಅನಸೂಯ ಸಿನಿರಂಗದ ತಾರತಮ್ಯದ ಬಗ್ಗೆ ಹಿರೋಗಳ ಪ್ರಾಧಾನ್ಯತೆ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಆಕೆಯ ಕಾಮೆಂಟ್ ಗಳು ವೈರಲ್ ಆಗುತ್ತಿವೆ.

ಆಂಕರಿಂಗ್ ಮೂಲಕ ಫೇಂ ಪಡೆದುಕೊಂಡ ನಟಿ ಅನಸೂಯ ಕಿರುತೆರೆಗಿಂತ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಭಾರಿ ಕ್ರೇಜ್ ಪಡೆದುಕೊಂಡ ಈಕೆ ಅನೇಕ ಹಿಟ್ ಸಿನೆಮಾಗಳಲ್ಲಿ ನಟಿಸಿ ತನ್ನದೇ ಆದ ಅಭಿಮಾನಿ ಬಳಗವನ್ನು ಸಹ ಪಡೆದುಕೊಂಡಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ಸಹ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿರುತ್ತಾರೆ. ಆಕೆ ಪೋಸ್ಟ್ ಗಳು ಕಡಿಮೆ ಸಮಯದಲ್ಲೇ ವೈರಲ್ ಆಗುತ್ತಿರುತ್ತವೆ ಜತೆಗೆ ಟ್ರೋಲ್ ಸಹ ಆಗುತ್ತಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ಆಕೆಯನ್ನು ಟ್ರೋಲ್ ಮಾಡಿದರೇ ಆಕೆ ಸಹ ಅಂತಹ ಟ್ರೋಲರ್‍ ಗಳಿಗೆ ಸ್ಟ್ರಾಂಗ್ ಆಗಿಯೇ ಕೌಂಟರ್‍ ಕೊಡುತ್ತಾರೆ. ಆಕೆಯನ್ನು ಆಂಟಿ ಎಂದು ಟ್ರೋಲ್ ಮಾಡಿದವ ಕೆಲವರ ಮೇಲೆ ಕಾನೂನು ರೀತ್ಯ ಕ್ರಮ ತೆಗೆದುಕೊಂಡ ಉದಾಹರಣೆಗಳೂ ಸಹ ಬಹಳಿಷ್ಟಿವೆ.

ಇನ್ನೂ ಅನಸೂಯ ಇತ್ತಿಚಿಗೆ ನಡೆದ ಸಂದರ್ಶನವೊಂದರಲ್ಲಿ ಸಿನಿರಂಗದಲ್ಲಿ ಲಿಂಗ ತಾರತಮ್ಯದ ಬಗ್ಗೆ ಮಾತನಾಡಿದ್ದಾರೆ. ಸಿನಿರಂಗದಲ್ಲಿ ಹಿರೋ-ಹಿರೋಯಿನ್ ಗಳ ನಡುವೆ ತುಂಬಾನೆ ವ್ಯತ್ಯಾಸವಿದೆ. ಕೇವಲ ಹಿರೋಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಸಿನೆಮಾಗಳನ್ನು ತೆಗೆಯುತ್ತಾರೆ. ಸಿನೆಮಾಗಳಲ್ಲಿ ಹಿರೋಯಿನ್ಸ್ ಕೇವಲ ರೊಮ್ಯಾನ್ಸ್ ಮಾಡಲು ಮಾತ್ರ ನಟಿಸುತ್ತಿದ್ದಾರೆ. ಜೊತೆಗೆ ಸಹಾಯ ಬೇಕು ಎಂದಾಗ ಹಿರೋಗಳು ಬಂದು ಕಾಪಾಡುತ್ತಾರೆ. ಹಿರೋಗಳು ಏನೇ ಮಾಡಿದರು ಸರಿಯಾಗಿರುತ್ತದೆ. ಅವರು ಗಿಚ್ಚಿದರೇ ಗಿಚ್ಚಿಸಿಕೊಳ್ಳಬೇಕು. ಹಿರೋಯಿನ್ ಪಾತ್ರಗಳಿಗೆ ಪ್ರಾಧಾನ್ಯತೆ ನೀಡುತ್ತಿಲ್ಲ. ಹಿರೋಯಿನ್ ಗಳಿಗೂ ಪ್ರಾಧಾನ್ಯತೆ ನೀಡುವಂತಾಗಬೇಕು ಎಂದು ನಾನು ಕೋರುತ್ತೇನೆ ಎಂದು ಕಾಮೆಂಟ್ಸ್ ಮಾಡಿದ್ದಾರೆ. ಸದ್ಯ ಆಕೆಯ ಈ ಕಾಮೆಂಟ್ ಗಳು ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಇನ್ನೂ ಅನಸೂಯ ಸದ್ಯ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಕೊನೆಯದಾಗಿ ಆಕೆ ರಂಗಮಾರ್ತಾಂಡ ಎಂಬ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನೆಮಾದಲ್ಲಿನ ಆಕೆಯ ಪಾತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ದೊರೆಯಿತು. ಸದ್ಯ ಆಕೆ ಅಲ್ಲು ಅರ್ಜುನ್ ರವರ ಪುಷ್ಪಾ-2 ಸಿನೆಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಶೀಘ್ರದಲ್ಲೇ ಆಕೆ ವಿಮಾನಂ ಎಂಬ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ.