Film News

ಪವನ್ ಕಲ್ಯಾಣ್ ಸಿನೆಮಾದಲ್ಲಿ ಯಂಗ್ ಬ್ಯೂಟಿ ಐಟಂ ಸಾಂಗ್ ನಲ್ಲಿ ಕುಣಿಯಲಿದ್ದಾರಂತೆ. ಹಿಂದಿ ಕ್ಲಾಸಿಕ್ ಸಾಂಗ್ ರಿಮೀಕ್ಸ್ ನಲ್ಲಿ ಕನ್ನಡ ಬ್ಯೂಟಿ….!

ಇತ್ತೀಚಿಗೆ ಸೌತ್ ಸಿನೆಮಾಗಳಲ್ಲಿ ಕನ್ನಡದ ನಟಿಯರ ಹವಾ ಜೋರಾಗಿಯೇ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಇದೀಗ ಪವನ್ ಕಲ್ಯಾನ್ ರವರ ಸಿನೆಮಾದಲ್ಲಿ ಕನ್ನಡದ ಬ್ಯೂಟಿ ಐಟಂ ಸಾಂಗ್ ನಲ್ಲಿ ಹೆಜ್ಜೆ ಹಾಕಲಿದ್ದಾರಂತೆ. ಫ್ಯಾಂಟಸಿ ಡ್ರಾಮಾ ಆಗಿ ಸೆಟ್ಟೇರುತ್ತಿರುವ ವಿನೋದಯ ಸೀತಂ ಎಂಬ ಸಿನೆಮಾದ ರಿಮೇಕ್ ನಲ್ಲಿ ಪವನ್ ಕಲ್ಯಾಣ್ ನಟಿಸುತ್ತಿದ್ದಾರೆ. ಈ ಸಿನೆಮಾದಲ್ಲಿ ಪವನ್ ಕಲ್ಯಾಣ್ ರವರಿಗೆ ಹಿರೋಯಿನ್ ಇಲ್ಲ ಎಂದು ಹೇಳಲಾಗುತ್ತಿದೆ. ಇದೀಗ ಮಾಸ್ ಪ್ರೇಕ್ಷಕರಿಗಾಗಿ ಚಿತ್ರತಂಡ ಐಟಂ ಸಾಂಗ್ ಪ್ಲಾನ್ ಮಾಡಿದ್ದಾರಂತೆ. ಈ ಹಾಡಿನಲ್ಲಿ ಕನ್ನಡದ ಬ್ಯೂಟಿ ಹೆಜ್ಜೆ ಹಾಕಲಿದ್ದಾರಂತೆ. ಸದ್ಯ ಈ ವಿಚಾರ ಸಿನಿವಲಯದಲ್ಲಿ ಹಾಟ್ ಟಾಪಿಕ್ ಆಗಿದೆ.

ತೆಲುಗು ಸಿನಿರಂಗದ ಟಾಪ್ ನಟ ಪವನ್ ಕಲ್ಯಾಣ್ ಇತ್ತೀಚಿಗೆ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಗ್ಯಾಪ್ ಇಲ್ಲದೇ ಬ್ಯಾಕ್ ಟು ಬ್ಯಾಕ್ ಶೂಟಿಂಗ್ ಗಳಲ್ಲಿ ಭಾಗಿಯಾಗುತ್ತಿದ್ದಾರೆ. ಈಗಾಗಲೇ ಭಾರಿ ನಿರೀಕ್ಷೆ ಹುಟ್ಟಿಸಿರುವ ಹರಿಹರ ವೀರಮಲ್ಲು ಸಿನೆಮಾದ ಶೂಟಿಂಗ್ ನಲ್ಲಿ ಪವನ್ ಬ್ಯುಸಿಯಾಗಿದ್ದಾರೆ. ಇನ್ನೂ ಇತ್ತಿಚಿಗಷ್ಟೆ ವಿನೋದಯ ಸೀತಂ ಎಂಬ ಸಿನೆಮಾದ ರಿಮೇಕ್ ಶೂಟಿಂಗ್ ಸಹ ಪ್ರಾರಂಭವಾಗಿದೆ. ಜೊತೆಗೆ ನಿರಂತರವಾಗಿ ಸಿನೆಮಾ ಶೂಟೀಂಗ್ ನಲ್ಲೂ ಸಹ ನಡೆಯುತ್ತಿದೆ. ಈ ಸಿನೆಮಾದದಲ್ಲಿ ಸಾಯಿಧರಮ್ ತೇಜ್ ಹಾಗೂ ಆತನಿಗೆ ಜೋಡಿಯಾಗಿ ಪ್ರಿಯಾ ಪ್ರಕಾಶ್ ವಾರಿಯರ್‍ ಹಾಗೂ ಕೇತಿಕಾ ಶರ್ಮಾ ಸಹ ನಟಿಸುತ್ತಿದ್ದಾರೆ. ಇನ್ನೂ ಈ ಸಿನೆಮಾದಲ್ಲಿ ಪವನ್ ಕಲ್ಯಾಣ್ ಪಾತ್ರ ಆಗಾಗ ಬಂದು ಹೋಗುತ್ತಿರುತ್ತದೆ ಎಂದು ಹೇಳಲಾಗುತ್ತಿದೆ.ಇನ್ನೂ ಪವನ್ ಕಲ್ಯಾಣ್ ರಾಜಕೀಯದಲ್ಲೂ ಸಹ ಬ್ಯುಸಿಯಾಗಿದ್ದಾರೆ. ಆದ ಕಾರಣ ಕಡಿಮೆ ಸಮಯ ತೆಗೆದುಕೊಳ್ಳುವಂತಹ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಈ ಹಾದಿಯಲ್ಲೇ ಈ ಸಿನೆಮಾಗಾಗಿ ಪವನ್ ಕೇವಲ 20 ದಿನಗಳ ಸಮಯ ಸಹ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇದೀಗ ಈ ಸಿನೆಮಾದ ಮತ್ತೊಂದು ಕ್ರೇಜಿ ಅಪ್ಡೇಟ್ ಕೇಳಿಬರುತ್ತಿದೆ. ಮಾಸ್ ಪ್ರೇಕ್ಷಕರಿಗಾಗಿ ಈ ಸಿನೆಮಾದಲ್ಲಿ ಐಟಂ ಸಾಂಗ್ ಒಂದನ್ನು ಚಿತ್ರತಂಡ ಪ್ಲಾನ್ ಮಾಡುತ್ತಿದೆಯಂತೆ. ಈ ಹಾಡು ಟಾಲಿವುಡ್ ಇತಿಹಾಸದಲ್ಲಿ ಶಾಶ್ವತವಾಗಿ ಇರಬೇಕೆಂಬ ಪ್ಲಾನ್ ಸಹ ಅವರದ್ದಂತೆ. ಬಾಲಿವುಡ್ ನ ಒಂದು ಹಾಡಿಗೆ ರಿಮೀಕ್ಸ್ ಮಾಡುತ್ತಿದ್ದಾರಂತೆ. ಅಮಿತಾಭ್ ಬಚ್ಚನ್, ಅಭಿಷೇಕ್ ಬಚ್ಚನ್ ಹಾಗೂ ರಾಣಿ ಮುಖರ್ಜಿ ನಟಿಸಿದ್ದಂತಹ ಸೂಪರ್‍ ಹಿಟ್ ಸಿನೆಮಾ ಬಂಟಿ ಔರ್‍ ಬಬ್ಲಿ ಸಿನೆಮಾದಲ್ಲಿನ ಕಜ್ ರಾರೆ ಹಾಡು ತುಂಬಾನೆ ಫೇಮಸ್ ಆಗಿದ್ದು, ಈ ಹಾಡಿನ ರೀಮಿಕ್ಸ್ ಅನ್ನು ಪವನ್ ಕಲ್ಯಾಣ್ ರವರ ವಿನೋದಯ ಸೀತಂ ಎಂಬ ಸಿನೆಮಾದ ರಿಮೇಕ್ ಪ್ಲಾನ್ ಮಾಡಲಾಗಿದೆಯಂತೆ. ಈ ಹಾಡಿನಲ್ಲಿ ಸ್ಯಾಂಡಲ್ ಬ್ಯೂಟಿ ಶ್ರೀಲೀಲಾ ರವರನ್ನು ಹೆಜ್ಜೆ ಹಾಕಿಸಲು ಚಿತ್ರತಂಡ ಸಿದ್ದವಾಗುತ್ತಿದೆಯಂತೆ. ಈಗಾಗಲೇ ಶ್ರೀಲೀಲಾ ಧಮಾಕಾ ಸಿನೆಮಾದಲ್ಲಿ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದಾರೆ.

ಇದೀಗ ಪವನ್ ಕಲ್ಯಾಣ್ ಸಿನೆಮಾದಲ್ಲೂ ಆಕೆ ಐಟಂ ಸಾಂಗ್ ನಲ್ಲಿ ನಟಿಸುವುದು ನಿಜವೇ ಆದರೇ ಶ್ರೀಲೀಲಾ ಮತಷ್ಟು ಕ್ರೇಜ್ ಪಡೆದುಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಈ ಸುದ್ದಿಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಮಾತ್ರ ಇಲ್ಲ. ಇನ್ನೂ ಈ ಸಿನೆಮಾ ಇದೇ ವರ್ಷದ ಆಗಸ್ಟ್ ಮಾಹೆಯಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆಯಂತೆ.

Most Popular

To Top