Film News

ಮೂರು ಮದುವೆಗಳ ಬಗ್ಗೆ ಪವನ್ ಕಲ್ಯಾಣ್ ಕ್ಲಾರಿಟಿ, ಅನ್ ಸ್ಟಾಪುಬಲ್ ಶೋ ನಲ್ಲಿ ಬಾಲಯ್ಯ ಪ್ರಶ್ನೆಗೆ ಉತ್ತರಿಸಿದ ಪವನ್…!

ತೆಲುಗಿನಲ್ಲಿ ಇತ್ತೀಚಿಗೆ ತುಂಬಾ ಫೇಮಸ್ ಆಗುತ್ತಿರುವ ಕಿರುತೆರೆಯ ಶೋಗಳಲ್ಲಿ ಅನ್ ಸ್ಟಾಪಬುಲ್ ವಿತ್ ಎನ್.ಬಿ.ಕೆ ಶೋ ಒಂದಾಗಿದೆ. ಈ ಶೋ ಅನ್ನು ನಂದಮೂರಿ ಬಾಲಕೃಷ್ಣ ಹೋಸ್ಟ್ ಮಾಡುತ್ತಾರೆ. ಅನೇಕ ಸೆಲೆಬ್ರೆಟಿಗಳು ಈ ಶೋ ನಲ್ಲಿ ಭಾಗಿಯಾಗುತ್ತಾ ಪ್ರೇಕ್ಷಕರನ್ನು ರಂಜಿಸುತ್ತಿರುತ್ತಾರೆ. ಇದೀಗ ಅನ್ ಸ್ಟಾಪುಬಲ್ ವಿತ್ ಎನ್.ಬಿ.ಕೆ 2 ಶೋ ಆರಂಭವಾಗಿದ್ದು, ಇದೀಗ ಪವನ್ ಕಲ್ಯಾಣ್ ಈ ಶೋ ನಲ್ಲಿ ಭಾಗಿಯಾಗಿದ್ದು, ಈ ಸಂಬಂಧ ಪ್ರೊಮೋ ಒಂದನ್ನು ಬಿಡುಗಡೆ ಮಾಡಲಾಗಿದೆ. ಈ ಪ್ರಮೋನಲ್ಲಿ ಪವನ್ ಕಲ್ಯಾಣ್ ರವರಿಗೆ ಬಾಲಕೃಷ್ಣ ಅನೇಕ ಪ್ರಶ್ನೆಗಳನ್ನು ಕೇಳಿದ್ದಾರೆ.

ನಟ ಬಾಲಕೃಷ್ಣ ಹೋಸ್ಟ್ ಮಾಡುವಂತಹ ಅನ್ ಸ್ಟಾಪುಬಲ್ ವಿತ್ ಎನ್.ಬಿ.ಕೆ 2 ನಲ್ಲಿ ಪವನ್ ಕಲ್ಯಾಣ್ ಎಪಿಸೋಡ್ ಗೆ ಸಂಬಂಧಿಸಿದ ಪಾರ್ಟ್-1 ಪ್ರೋಮೋ ಬಿಡುಗಡೆಯಾಗಿದೆ. ಈ ಪ್ರೋಮೋ ಇದೀಗ ಇಂಟರ್‍ ನೆಟ್ ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಈ ಶೋ ನಲ್ಲಿ ಭಾಗಿಯಾಗುವ ಎಲ್ಲರನ್ನೂ ಬಾಲಕೃಷ್ಣ ಅನೇಕ ಆಸಕ್ತಿಕರವಾದ ಪ್ರಶ್ನೆಗಳನ್ನು ಕೇಳುತ್ತಾ ಉತ್ತರಗಳನ್ನು ಪಡೆದುಕೊಳ್ಳುತ್ತಿರುತ್ತಾರೆ. ಈ ಹಾದಿಯಲ್ಲೇ ಪವನ್ ಕಲ್ಯಾಣ್ ಸಹ ಈ ಶೋ ನಲ್ಲಿ ಹಾಜರಾಗಿದ್ದು, ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸುಮಾರು ದಿನಗಳಿಂದ ಪವನ್ ಕಲ್ಯಾಣ್ ರವರನ್ನು ಕಾಡುತ್ತಿರುವ ಒಂದು ಪ್ರಶ್ನೆಯನ್ನು ಬಾಲಕೃಷ್ಣ ಕೇಳಿದ್ದಾರೆ. ಇದಕ್ಕೆ ಪವನ್ ಕಲ್ಯಾಣ್ ಸಹ ಉತ್ತರ ನೀಡಿದ್ದಾರೆ. ಸದ್ಯ ಈ ಪ್ರಶ್ನೆ ಸಖತ್ ಸದ್ದು ಮಾಡುತ್ತಿದೆ.

ತೆಲುಗು ಸ್ಟಾರ್‍ ನಟ ಪವನ್ ಕಲ್ಯಾಣ್ ಮೂರು ಮದುವೆಯಾದ ಬಗ್ಗೆ ತಿಳಿದೇ ಇದೆ. ಇನ್ನೂ ಜನಸೇನಾ ಪಾರ್ಟಿ ಪ್ರಾರಂಭಿಸಿ ಪವನ್ ಕಲ್ಯಾಣ್ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇನ್ನೂ ಅನೇಕ ರಾಜಕೀಯ ಎದುರಾಳಿಗಳು ಮೂರು ಮದುವೆಗಳ ಬಗ್ಗೆ ವಿಮರ್ಶೆಗಳನ್ನು ಮಾಡಿದ್ದಾರೆ. ಆದರೆ ಈ ಬಗ್ಗೆ ಎಂದೂ ಸಹ ಪವನ್ ಸ್ಪಷ್ಟನೆ ನೀಡಿರಲಿಲ್ಲ. ಆದರೆ ವಿಮರ್ಶೆ ಮಾಡಿದವರಿಗೆ ತನ್ನದೇ ಆದ ಶೈಲಿಯಲ್ಲಿ ಉತ್ತರ ನೀಡಿದ್ದರು. ನಾನು ಕಾನೂನು ಪ್ರಕಾರವೇ ಮದುವೆಯಾಗಿದ್ದಾಗಿ ಉತ್ತರ ನೀಡಿದ್ದರು. ಇದೀಗ ಅನ್ ಸ್ಟಾಪುಬಲ್ ವಿತ್ ಎನ್.ಬಿ.ಕೆ 2 ಶೋ ನಲ್ಲೂ ಸಹ ಇದೇ ಪ್ರಶ್ನೆ ಎದುರಾಗಿದೆ. ಬಾಲಕೃಷ್ಣ ಮೂರು ಮದುವೆಯ ಗಲಬೆ ಏನು ಬಯ್ಯಾ (ಪೆಳ್ಳಿಳ್ಲ ಗೊಡವೇಂಟಿ ಬಯ್ಯಾ) ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಪವನ್ ಸಹ ಉತ್ತರಿಸುತ್ತಾ, ಅವರು ಬಾದೆ ಪಡುತ್ತಾರೇನೋ ಎಂದು ನನ್ನ ಜ್ಞಾನ ಹಾಗೂ ಸಂಸ್ಕಾರ ಮಾತನಾಡದೇ ಮಾಡುತ್ತಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಮತಷ್ಟು ಸ್ಪಷ್ಟನೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಪವನ್ ಕಲ್ಯಾಣ್ ಸಂಪೂರ್ಣವಾಗಿ ಹೇಳಿದ್ದಾರಯೇ ಅಥವಾ ಇಲ್ಲವೇ ಎಂಬುದನ್ನು ಸಂಪೂರ್ಣವಾಗಿ ಈ ಶೋ ನೋಡಿದ ಮೇಲೆ ತಿಳಿಯಲಿದೆ.

ಇನ್ನೂ ಈ ಎಪಿಸೋಡ್ ನ ಪ್ರೊಮೋ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಎಪಿಸೋಡ್ ಎರಡು ಭಾಗಗಳಾಗಿ ಬಿಡುಗಡೆಯಾಗಲಿದ್ದು, ಮೊದಲನೇ ಭಾಗ ಇದೇ ಫೆಬ್ರವರಿ 3 ರಂದು ಆಹಾ ಒಟಿಟಿ ಫ್ಲಾಟ್ ಫಾರಂ ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಇನ್ನೂ ಪವನ್ ಕಲ್ಯಾಣ್ ಹರಿಹರ ವೀರಮಲ್ಲು ಸಿನೆಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

Most Popular

To Top