Film News

ದುಶ್ಚಟಗಳಿಗೆ ದಾಸನಾಗಿದ್ದ ನನ್ನನ್ನು ಆಕೆ ಬದಲಿಸಿದಳು ಎಂದ ಸೂಪರ್ ಸ್ಟಾರ್ ರಜನಿಕಾಂತ್…!

ಸಾಮಾನ್ಯ ವ್ಯಕ್ತಿಯಾಗಿರುವ ಒಬ್ಬ ವ್ಯಕ್ತಿ ಸೂಪರ್‍ ಸ್ಟಾರ್‍ ಆಗುತ್ತಾರೆ ಎಂದೂ ಯಾರೂ ಊಹಿಸಿರಲಿಲ್ಲ. ಬೆಂಗಳೂರಿನ ಬಿಟಿಎಸ್ ಬಸ್ ಕಂಡಕ್ಟರ್‍ ಆಗಿದ್ದ ಶಿವಾಜಿರಾವ್ ಗಾಯಕ್ ವಾಡ್ ಇದೀಗ ದೇಶದ ಸಿನಿರಂಗದ ಸ್ಟಾರ್‍ ನಟರಾಗಿದ್ದಾರೆ. ಕಠಿಣ ಪರಿಶ್ರಮದಿಂದ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ರಜನಿಕಾಂತ್ ರವರೇ ಉತ್ತಮ ಉದಾಹರಣೆ ಎಂದರೇ ತಪ್ಪಾಗಲಾರದು. ಇನ್ನೂ ರಜನಿಕಾಂತ್ ತುಂಬಾ ಸರಳ ಹಾಗೂ ಸಜ್ಜನಿಕೆಯ ವ್ಯಕ್ತಿಯಾಗಿದ್ದಾರೆ. ಇದೀಗ ಅವರು ಕೆಲವೊಂದು ವೈಯುಕ್ತಿಕ ಹೇಳಿಕೆಗಳನ್ನು ನೀಡಿದ್ದಾರೆ.

ಸ್ಟಾರ್‍ ನಟ ರಜನಿಕಾಂತ್ ರವರು ಮೊದಲಿಗೆ ಸಣ್ಣ ಪಾತ್ರಗಳ ಮೂಲಕ ಸಿನಿರಂಗದಲ್ಲಿ ಗುರ್ತಿಸಿಕೊಂಡರು. ಬಳಿಕ ಹಂತ ಹಂತವಾಗಿ ಸ್ಟಾರ್‍ ನಟರಾಗಿ ಸೂಪರ್‍ ಸ್ಟಾರ್‍ ಎಂಬ ಖ್ಯಾತಿಗೆ ಪಾತ್ರರಾದರು. ಅವರು ಬರೊಬ್ಬರಿ 150 ಕ್ಕೂ ಅಧಿಕ ಸಿನೆಮಾಗಳಲ್ಲಿ ನಟಿಸಿದ್ದಾರೆ. ಇನ್ನೂ ಕಾಲೇಜೊಂದರ ಮ್ಯಾಗ್ ಜೈನ್ ಗಾಗಿ ಸಂದರ್ಶನ ಮಾಡಲು ಹೋಗಿದ್ದ ಹುಡುಗಿಯನ್ನು ರಜನಿಕಾಂತ್ ಸಂದರ್ಶನ ಮುಗಿಯುವ ವೇಳೆಗೆ ಆಕೆಯನ್ನು ಮದುವೆಯಾಗುವುದಾಗಿ ಪ್ರಪೋಸಲ್ ಇಟ್ಟಿದ್ದರು. ಇನ್ನೂ ಲತಾ ಎಂಬಾಕೆಯನ್ನು ರಜನಿಕಾಂತ್ ಮದುವೆಯಾದರು. ಇನ್ನೂ ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇಬ್ಬರೂ ಮಕ್ಕಳು ಸಹ ಸಿನೆಮಾರಂಗದಲ್ಲಿ ಮುಂದುವರೆಯುತ್ತಿದ್ದಾರೆ. ಇನ್ನೂ ಕಾಲಿವುಡ್ ಸಿನಿರಂಗದಲ್ಲಿ ರಜನಿಕಾಂತ್ ಟಾಪ್ 1 ನಟರಾಗಿದ್ದಾರೆ. ಇದೀಗ ಅವರು ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದು ಅನೇಕ ವಿಚಾರಗಳನ್ನು ಈ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ.

ಚೆನೈನಲ್ಲಿ ಇತ್ತೀಚಿಗೆ ನಡೆದ ಕಾರ್ಯಕ್ರಮವೊಂದರಲ್ಲಿ ರಜನಿಕಾಂತ್ ರವರು ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಅವರು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತಮಗಿದ್ದ ದುಶ್ಚಟಗಳ ಬಗ್ಗೆ ಮಾತನಾಡಿದ್ದಾರೆ. ನಾನು ಬಸ್ ಕಂಡಕ್ಟರ್‍ ಆಗಿದ್ದ ಸಮಯದಲ್ಲಿ ಪ್ರತಿನಿತ್ಯ ಸಿಗರೇಟ್, ಮದ್ಯ ಸೇವನೆ ಮಾಡುತ್ತಿದೆ. ಬೆಳಿಗ್ಗೆ ಮಾಂಸಾಹಾರದೊಂದಿಗೆ ನನ್ನ ದಿನ ಆರಂಭವಾಗುತ್ತಿತ್ತು. ಪ್ರತಿ ದಿನ 2 ಬಾರಿ ಮಾಂಸಾಹಾರ ಸೇವಿಸುತ್ತಿದ್ದೆ. ನನ್ನ ಪ್ರಕಾರ ಮದ್ಯ, ಸಿಗರೇಟ್ ಹಾಗೂ ಮಾಂಸ ಈ ಮೂರು ಆರೋಗ್ಯಕ್ಕೆ ತುಂಬಾನೆ ಅಪಾಯ. ಈ ಮೂರನ್ನು ಜಾಸ್ತಿ ಬಳಕೆ ಮಾಡಿದರೇ 60 ವಯಸ್ಸಿನ ಬಳಿಕ ತುಂಬಾ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ನನ್ನ ಪತ್ನಿ ಲತಾ ತನ್ನ ಪ್ರೀತಿಯಿಂದ ನನಗೆ ಆ ದುಶ್ಚಟಗಳಿಂದ ನನ್ನನ್ನು ದೂರ ಮಾಡಿದಳು. ಆಕೆಯ ಪ್ರೀತಿಯ ಕಾರಣದಿಂದ ನಾನು ಆರೋಗ್ಯಕರವಾದ ಜೀವನ ಸಾಗಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಲತಾ ನನ್ನ ಜೀವನದಲ್ಲಿ ಬಂದ ಮೇಲೆ ನನ್ನ ಜೀವನ ತುಂಬಾನೆ ಬದಲಾಯಿತು. ಅದರಲ್ಲೂ ಮುಖ್ಯವಾಗಿ ನಾನು ಕ್ರಮಶಿಕ್ಷಣ ಕಲಿತೆ ಎಂದು ಹೇಳಿದ್ದು, ಈ ಹೇಳಿಕೆಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನೂ ರಜನಿಕಾಂತ್ ಸದ್ಯ ಜೈಲರ್‍ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ರಜನಿ ಪುತ್ರಿ ಐಶ್ವರ್ಯ ನಿರ್ದೇಶನದಲ್ಲಿ ಸೆಟ್ಟಿರಿರುವ ಲಾಲ್ ಸಲಾಂ ಸಿನೆಮಾದಲ್ಲೂ ಸಹ ರಜನಿಕಾಂತ್ ಮುಖ್ಯ ಅತಿಥಿ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಇನ್ನೂ ಈ ಬಾರಿ ರಜನಿಕಾಂತ್ ಸಕ್ರಿಯ ರಾಜಕಾರಣಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿಗಳು ಸಹ ಕೇಳಿಬರುತ್ತಿದ್ದು, ಈ ಬಗ್ಗೆ ಇನ್ನೂ ಅಧಿಕೃತವಾದ ಮಾಹಿತಿ ಬರಬೇಕಿದೆ.

Most Popular

To Top