Film News

ಸೂಪರ್ ವುಮೆನ್ ಗೆಟಪ್ ನಲ್ಲಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ, ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆದ ಪೊಟೋಸ್….!

ಮೊದಲನೇ ಸಿನೆಮಾದ ಮೂಲಕ ಕಡಿಮೆ ಸಮಯದಲ್ಲೇ ಸ್ಟಾರ್‍ ನಟಿಯಾದವರಲ್ಲಿ ರಶ್ಮಿಕಾ ಮಂದಣ್ಣ ಟಾಪ್ ಸ್ಥಾನದಲ್ಲಿರುತ್ತಾರೆ. ಕನ್ನಡದ ಕಿರಿಕ್ ಪಾರ್ಟಿ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಈಕೆ ಕಡಿಮೆ ಸಮಯದಲ್ಲೇ ತೆಲುಗು, ತಮಿಳು ಹಾಗೂ ಹಿಂದಿ ಸಿನೆಮಾಗಳಲ್ಲೂ ಸಹ ನಟಿಸುವ ಅವಕಾಶಗಳನ್ನು ಪಡೆದುಕೊಂಡು ಬಹುಬೇಡಿಕೆ ನಟಿಯಾಗಿ ಕೆರಿಯರ್‍ ಸಾಗಿಸುತ್ತಿದ್ದಾರೆ. ಇನ್ನೂ ರಶ್ಮಿಕಾ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ಸದಾ ಸುದ್ದಿಗಳು ಹರಿದಾಡುತ್ತಿರುತ್ತವೆ. ಇದೀಗ ಆಕೆ ಸೂಪರ್‍ ವುಮೆನ್ ಗೆಟಪ್ ನಲ್ಲಿನ ಕೆಲವೊಂದು ಪೊಟೊಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ನಟಿ ರಶ್ಮಿಕಾ ಮಂದಣ್ಣ ದಿನೇ ದಿನೇ ಓವರ್‍ ಡೋಸ್ ಗ್ಲಾಮರ್‍ ಶೋ ಮಾಡುತ್ತಿದ್ದಾರೆ. ಅದರಲ್ಲೂ ಆಕೆ ಸೋಷಿಯಲ್ ಮಿಡಿಯಾದಲ್ಲಿ ಮತಷ್ಟು ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಾದಿಯಲ್ಲೇ ಇದೀಗ ಆಕೆ ಹಾಲಿವುಡ್ ಸೂಪರ್‍ ವುಮೆನ್ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸೂಪರ್‍ ವುಮೆನ್ ಗೆಟಪ್ ನಲ್ಲಿ ರಶ್ಮಿಕಾ ಹಾಟ್ ಹಾಟ್ ಪೋಸ್ ಕೊಟ್ಟಿದ್ದಾರೆ. ಆಕೆಯ ಹಾಟ್ ನೆಸ್ ಮತಷ್ಟು ಏರಿದ್ದು, ಕಲರ್‍ ಪುಲ್ ಸೌಂದರ್ಯದೊಂದಿಗೆ ಎಲ್ಲರನ್ನೂ ಮಂತ್ರಮುಗ್ದರನ್ನಾಗಿ ಮಾಡುತ್ತಿದ್ದಾರೆ. ಇನ್ನೂ ಆಕೆಯ ಈ ಪೊಟೊಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಫ್ಯಾನ್ಸ್ ಹಾಗೂ ನೆಟ್ಟಿಗರನ್ನು ಆಶ್ಚರ್ಯಕ್ಕೆ ಗುರಿ ಮಾಡಿದ್ದಾರೆ. ಇನ್ನೂ ಈ ಪೊಟೊಗಳು ಹೊಸ ಆಪ್ ಮೂಲಕ ಅನಿಮೇಟ್ ಮಾಡಲಾಗಿದೆ. ಹೊಸ ಆಪ್ ಮೂಲಕ ಅನೇಕ ನಟಿಯರು ಅವರ ಪೊಟೊಗಳನ್ನು, ಕಲರ್‍ ಪುಲ್, ಕ್ಯೂಟ್ ಅಂಡ್ ಹಾಟ್ ಆಗಿ ಬದಲಿಸುತ್ತಿದ್ದಾರೆ. ಈ ಆಪ್ ಮೂಲಕ ಅನೇಕ ಅನಿಮೇಷನ್ ಬಳಸಿ ಹೊಸ ಲುಕ್ಸ್ ನಲ್ಲಿ ಮಾರ್ಪಾಡಾಗುತ್ತಿದ್ದಾರೆ.

ಇನ್ನೂ ರಶ್ಮಿಕಾ ಅಭಿಮಾನಿಗಳು ಸಹ ಇದೇ ಆಪ್ ಬಳಸಿ ತಮ್ಮ ಪೊಟೋಗಳನ್ನು ಹೊಸದಾಗಿ ಅನಿಮೇಟ್ ಮಾಡಿದ್ದಾರೆ. ಸೂಪರ್‍ ವುಮೆನ್ ಗೆಟಪ್ ನಲ್ಲಿ ಆಕೆ ಮತಷ್ಟು ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ರಕುಲ್, ಕೃತಿ ಶೆಟ್ಟಿ ಸೇರಿದಂತೆ ಅನೇಕ ನಟಿಯರು ಈ ಮಾದರಿಯ ಪೊಟೋಗಳನ್ನು ಹಂಚಿಕೊಂಡಿದ್ದರು. ಇನ್ನೂ ರಶ್ಮಿಕಾ ಅಭಿಮಾನಿಗಳು ಈ ಪೊಟೋಗಳನ್ನು ಸೊಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಇನ್ನೂ ಆಕೆಯ ಅಭಿಮಾನಿಗಳೂ ಸಹ ಈ ಪೊಟೋಗಳಿಗೆ ಮೆಚ್ಚುಗೆಯ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಇನ್ನೂ ರಶ್ಮಿಕಾ ಸದ್ಯ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಬ್ಯುಸಿಯಾಗಿದ್ದಾರೆ. ತೆಲುಗಿನಲ್ಲಿ ಪುಷ್ಪಾ-2 ಸಿನೆಮಾದಲ್ಲಿ, ಬಾಲಿವುಡ್ ನಲ್ಲಿ ಯಾನಿಮಲ್ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ತಮಿಳಿನಲ್ಲೂ ಸಹ ಸಿನೆಮಾ ಒಂದನ್ನು ಮಾಡುತ್ತಿರುವುದಾಗಿ ಹೇಳಲಾಗುತ್ತಿದೆ ಆದರೆ ಈ ಬಗ್ಗೆ ಯಾವುದೇ ಅಧಿಕೃತ ಪ್ರಕಟನೆ ಬಂದಿಲ್ಲ. ಅಷ್ಟೇಅಲ್ಲದೇ ಇತ್ತಿಚಿಗೆ ರಶ್ಮಿಕಾ ಕೆಲವೊಂದು ವಿವಾದಗಳ ಮೂಲಕ ಸಹ ಸುದ್ದಿಯಾಗುತ್ತಿದ್ದಾರೆ. ಆಕೆಯ ಬಗ್ಗೆ ಅನೇಕ ವಿಮರ್ಶೆಗಳು ಎದುರಾಗುತ್ತಿದ್ದು, ಅದಕ್ಕೆ ಆಕೆ ಸಹ ಅನೇಕ ಬಾರಿ ಸ್ಪಷ್ಟನೆ ನೀಡಿದ್ದಾರೆ ಆದರೂ ಸಹ ವಿಮರ್ಶೆಗಳು ಮಾತ್ರ ನಿಲ್ಲುತ್ತಿಲ್ಲ ಎನ್ನಬಹುದಾಗಿದೆ.

Most Popular

To Top