ಆ ಸಮಯದಲ್ಲಿ ಇದ್ದಂತಹ 15 ಮಂದಿ ಪುರುಷರನ್ನು ನನ್ನ ಗಂಡನೆಂದು ಭಾವಿಸಿದ್ದೆ ಎಂದ ನಟಿ ಅಮಲಾಪಾಲ್, ವೈರಲ್ ಆದ ಕಾಮೆಂಟ್ಸ್….!

ಕಾಲಿವುಡ್ ಸಿನಿರಂಗದ ವಿಭಿನ್ನ ನಟಿಯೆಂದೆ ಖ್ಯಾತಿ ಪಡೆದುಕೊಂಡ ಡಸ್ಕಿ ಬ್ಯೂಟಿ ಅಮಲಾಪಾಲ್ ಸಿನೆಮಾಗಳ ಮೂಲಕ ಸಂಚಲನ ಸೃಷ್ಟಿಸುತ್ತಿರುತ್ತಾರೆ. ಆಕೆಗೆ ಪಾತ್ರ ಇಷ್ಟವಾದರೇ ನ್ಯೂಡ್ ಆಗಿ ನಟಿಸಲೂ ಸಹ ಸಿದ್ದವಾಗಿರುತ್ತಾರೆ. ಇನ್ನೂ ಪಾತ್ರಕ್ಕೆ ತಕ್ಕಂತೆ ಗ್ಲಾಮರಸ್ ರೋಲ್ಸ್ ಗಳಲ್ಲಿ ಆಕೆ ಕಾಣಿಸಿಕೊಳ್ಳುತ್ತಾರೆ. ಸಿನೆಮಾಗಳ ಜೊತೆಗೆ ಆಕೆ ಆಗಾಗ ಕೆಲವೊಂದು ಬೋಲ್ಡ್ ಕಾಮೆಂಟ್ ಗಳನ್ನು ನೀಡುವ ಮೂಲಕ ಸುದ್ದಿಯಾಗುತ್ತಿರುತ್ತಾರೆ ಇದೀಗ ಆಕೆ 15 ಮಂದಿಯನ್ನು ನನ್ನ ಗಂಡನೆಂದು ಭಾವಿಸಿದ್ದೆ ಎಂದು ಹೇಳುವ ಮೂಲಕ ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದ್ದಾರೆ.

ಬೋಲ್ಡ್ ಬ್ಯೂಟಿ ನಟಿ ಅಮಾಲಾಪಾಲ್ ಕೆರಿಯರ್‍ ವಿಭಿನ್ನವಾದ ಸಿನೆಮಾಗಳ ಮೂಲಕ ಸಾಗುತ್ತಿದೆ. ಗ್ಲಾಮರ್‍ ಪಾತ್ರಗಳುಳ್ಳ ಸಿನೆಮಾಗಳಿಂದ ದೂರವುಳಿದು ಕಥೆಗೆ ಪ್ರಾಧಾನ್ಯತೆಯಿರುವಂತಹ ಸಿನೆಮಾಗಳಲ್ಲಿ ನಟಿಸುತ್ತಾ ಸಾಗುತ್ತಿದ್ದಾರೆ. ಇನ್ನೂ ಈ ಹಿಂದೆಗಿಂತ ಪ್ರಸ್ತುತ ಅಮಲಾಪಾಲ್ ಕ್ರೇಜ್ ಏರಿದೆ ಎಂದೇ ಹೇಳಬಹುದು. ಇದಕ್ಕೆ ಮುಖ್ಯ ಕಾರಣ ಆಕೆಯ ವೈವಿಧ್ಯಮಯವಾದ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಎನ್ನಲಾಗಿದೆ. ಇನ್ನೂ ನಟಿ ಅಮಲಾಪಾಲ್ ಕಥೆ ಡಿಮ್ಯಾಂಡ್ ಮಾಡಿದರೇ ಬೋಲ್ಡ್ ಆಗಿ ನಟಿಸಲು ಸಹ ಸಿದ್ದವಾಗಿದ್ದರು. ಈ ಹಿಂದೆ ಆಮೆ ಎಂಬ ಸಿನೆಮಾದಲ್ಲಿ ಆಕೆ ಸಂಪೂರ್ಣ ನ್ಯೂಡ್ ಆಗಿ ನಟಿಸಿದ್ದರು. ಈ ಸಿನೆಮಾಗಾಗಿ ಆಕೆಯ ಧೈರ್ಯವನ್ನು ಕೆಲವರು ಮೆಚ್ಚಿದರೇ ಮತ್ತೆ ಕೆಲವರು ವಿಮರ್ಶೆ ಸಹ ಮಾಡಿದ್ದರು. ಈ ಸಿನೆಮಾದಲ್ಲಿ ಆಕೆ ಬೆತ್ತಲೆಯಾಗಿ ನಟಿಸಿರುವ ಬಗ್ಗೆ ಮಾತನಾಡಿದ್ದಾರೆ.

ಇನ್ನೂ ಮಲ್ಲು ಬ್ಯೂಟಿ ಅಮಲಾಪಾಲ್ ಸಿನೆಮಾಗಳ ಜೊತೆಗೆ ಆಗಾಗ ವೈಯುಕ್ತಿಕ ವಿಚಾರಗಳು, ಬೋಲ್ಡ್ ಪೊಟೋಶೂಟ್ಸ್ ಗಳು, ವಿವಾದಿತ ಹೇಳಿಕೆಗಳ ಮೂಲಕ ಸುದ್ದಿಯಾಗುತ್ತಿರುತ್ತಾರೆ.ಈ ಹಾದಿಯಲ್ಲೇ ಆಕೆ ಇತ್ತೀಚಿಗೆ ನಡೆದ ಸಂದರ್ಶನವೊಂದಲ್ಲಿ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಆಮೆ ಎಂಬ ಸಿನೆಮಾದಲ್ಲಿ ಅಮಲಾ ಪಾಲ್ ಬೆತ್ತಲೆಯಾಗಿ ನಟಿಸಿದ್ದರು. ಈ ಶೂಟಿಂಗ್ ಸಮಯಲ್ಲಿ ಒಬ್ಬ ಮಹಿಳೆ ಸಹ ಇರಲಿಲ್ಲವಂತೆ. ಕ್ಯಾಮೆರಾಮೆನ್, ಡೈರೆಕ್ಟರ್‍ ಸೇರಿದಂತೆ 15 ಮಂದಿ ಕೆಲಸ ಮಾಡುತ್ತಿದ್ದರು. ಇನ್ನೂ ಚಿತ್ರೀಕರಣದ ವೇಳೆ ಹೇಗೆ ನಟಿಸಬೇಕೆಂಬ ಚಿಂತೆಯಲ್ಲಿದ್ದೆ. ಆದರೆ ನನಗೆ ಈ ಕ್ಷಣ 15 ಮಂದಿ ಗಂಡಂದಿರು ಎಂದು ಭಾವಿಸಿ ನಟಿಸಿದ್ದೆ ಎಂದು ಹೇಳಿದ್ದಾರೆ. ಇನ್ನೂ ಆಕೆ ನೀಡಿದ ಈ ಹೇಳಿಕೆಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ಸದ್ಯ ಅಮಲಾಪಾಲ್ ಆಡು ಜೀವಿತಂ ಎಂಬ ಸಿನೆಮಾದಲ್ಲಿ ಪ್ರಥ್ವಿರಾಜ್ ಸುಕುಮಾರ್‍ ಜೊತೆಗೆ ನಟಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಈ ಸಿನೆಮಾದ ಟ್ರೈಲರ್‍ ಸಹ ಬಿಡುಗಡೆಯಾಗಿದ್ದು, ಈ ಸಿನೆಮಾದಲ್ಲೂ ಕೆಲವೊಂದು ಬೋಲ್ಡ್ ದೃಶ್ಯಗಳಿವೆ. ಈ ಸಿನೆಮಾದಲ್ಲಿ ಲಿಪ್ ಲಾಕ್ ದೃಶ್ಯ ಸಹ ಇದ್ದು, ಅದರ ಬಗ್ಗೆ ಸಹ ಅಮಲಾಪಾಲ್ ಬೋಲ್ಡ್ ಆಗಿಯೇ ಹೇಳಿಕೆ ನೀಡಿದ್ದರು. ಇನ್ನೂ ಈ ಸಿನೆಮಾ ಸಹ ಬಿಡುಗಡೆಗೆ ಸಿದ್ದವಾಗಿದ್ದು ಕೆಲವೇ ದಿನಗಳಲ್ಲಿ ತೆರೆಕಾಣಲಿದೆ.