ಚಿಕಿತ್ಸೆಗಾಗಿ ಅಮೇರಿಕಾಗೆ ಪ್ರಭಾಸ್? ನಿರಂತರ ಶೂಟಿಂಗ್ ನಿಂದ ಆರೋಗ್ಯ ಸಮಸ್ಯೆ?

Follow Us :

ನಟ ಪ್ರಭಾಸ್ ಬಾಹುಬಲಿ ಸಿನೆಮಾದ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್‍ ಆಗಿಬಿಟ್ಟರು. ಕೇವಲ ದೇಶ ಮಾತ್ರವಲ್ಲದೇ ವಿದೇಶಗಳಲ್ಲೂ ಸಹ ಅಭಿಮಾನಿಗಳನ್ನು ಪ್ರಭಾಸ್ ಹೊಂದಿದ್ದಾರೆ. ಸುಮಾರು 20 ವರ್ಷಗಳಿಂದ ಸಿನಿರಂಗದಲ್ಲಿ ಆಕ್ಟೀವ್ ಆಗಿರುವಂತಹ ಪ್ರಭಾಸ್ ನಟಿಸಿದ್ದು ಕೇವಲ 21 ಸಿನೆಮಾಗಳಲ್ಲಿ ಮಾತ್ರ. ಇದೀಗ ಪ್ರಭಾಸ್ ಸಾಲು ಸಾಲು ಸಿನೆಮಾಗಳಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಬಿಡುವಿಲ್ಲದೇ ಸಿನೆಮಾಗಳಲ್ಲಿ ಭಾಗಿಯಾಗುತ್ತಿರುವ ಹಿನ್ನೆಲೆಯಲ್ಲಿ ಅವರ ಆರೋಗ್ಯದಲ್ಲಿ ಏರುಪೇರಾಗಿದೆ ಎನ್ನಲಾಗಿದ್ದು, ಅವರು ಚಿಕಿತ್ಸೆಗಾಗಿ ಅಮೇರಿಕಾಗೆ ಹೋಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಪ್ಯಾನ್ ಇಂಡಿಯಾ ಸ್ಟಾರ್‍ ಪ್ರಭಾಸ್ ಕೊನೆಯದಾಗಿ ಆದಿಪುರುಷ್ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಭಾರಿ ನಿರೀಕ್ಷೆಯಿಂದ ಈ ಸಿನೆಮಾ ತೆರೆ ಮೇಲೆ ಬಂತು. ಆದರೆ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತು ಎಂದು ಹೇಳಬಹುದಾಗಿದೆ. ಈ ಸಿನೆಮಾದ ಶೂಟಿಂಗ್ ಸಮಯದಲ್ಲೆ ಪ್ರಭಾಸ್ ಪ್ರಶಾಂತ್ ನೀಲ್ ಜೊತೆಗೆ ಸಲಾರ್‍, ಇದರ ಜೊತೆಗೆ ಪ್ಯಾನ್ ವರ್ಲ್ಡ್ ಸಿನೆಮಾ ಕಲ್ಕಿ 2898 ಎಂಬ ಸಿನೆಮಾದ ಶೂಟಿಂಗ್ ನಲ್ಲೂ ಸಹ ಬ್ಯುಸಿಯಾಗಿದ್ದಾರೆ. ಇನ್ನೇನು ಕಲ್ಕಿ 2898 ಸಿನೆಮಾದ ಶೂಟಿಂಗ್ ಸಹ ಕೊನೆಯ ಹಂತಕ್ಕೆ ಬಂದಿದ್ದು, ವರ್ಷದ ಅಂತ್ಯಕ್ಕೆ ಶೂಟೀಂಗ್ ನಿಂದ ಬಿಡುವು ಪಡೆದುಕೊಳ್ಳಲಿದ್ದಾರಂತೆ. ಬಳಿಕ ಅಮೇರಿಕಾಗೆ ತೆರಳಿ ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದಾರಂತೆ. ಬಳಿಕ ಒಂದು ವರ್ಷದ ಮಟ್ಟಿಗೆ ಸಿನೆಮಾಗಳಿಂದ ದೂರವೇ ಉಳಿಯಲಿದ್ದಾರಂತೆ.

ಪ್ರಭಾಸ್ ನಿರಂತರ ಶೂಟಿಂಗ್ ನಿಂದ ವ್ಯಾಯಾಮ, ಜಿಮ್ ನಲ್ಲಿ ವರ್ಕೌಟ್ ಕಾರಣಗಳಿಂದ ಪ್ರಭಾಸ್ ಗೆ ಮೊಣಕಾಲು ನೋವು ಶುರುವಾಗಿದೆಯಂತೆ. ವೈದ್ಯರ ಸಲಹೆಯ ಮೆರೇಗೆ ಮೊಣಕಾಲಿನ ಸರ್ಜರಿಗೆ ಒಳಗಾಗಲಿದ್ದಾರಂತೆ. ಇನ್ನೂ ಬಹುನಿರೀಕ್ಷಿತ ಕಲ್ಕಿ 2898 ಸಿನೆಮಾದ ಶೂಟಿಂಗ್ ಸಹ ಈ ವರ್ಷದ ಅಂತ್ಯಕ್ಕೆ ಅಂದರೇ ಡಿಸೆಂಬರ್‍ ಮಾಹೆಗೆ ಪೂರ್ಣಗೊಳ್ಳಲಿದೆಯಂತೆ. ಈ ಸಿನೆಮಾದ ಶೂಟೀಂಗ್ ಪೂರ್ಣಗೊಳಿಸಿ ಅಮೇರಿಕಾದ ನ್ಯೂಯಾರ್ಕ್‌ ನ ಪ್ರಖ್ಯಾತ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಈ ಸಿನೆಮಾದ ಜೊತೆಗೆ ಮಾರುತಿ ನಿರ್ದೇಶನದ ರಾಜ್ ಡಿಲಕ್ಸ್, ಸಂದೀಪ್ ವಂಗಾ ನಿರ್ದೇಶನದ ಸ್ಪಿರಿಟ್, ಬಾಲಿವುಡ್ ನಿರ್ದೇಶಕ ಸಿದ್ದಾರ್ಥ್ ಆನಂದ್ ಜೊತೆಗೆ ಸಹ ಸಿನೆಮಾ ಮಾಡಲು ಪ್ರಭಾಸ್ ಒಪ್ಪಿಕೊಂಡಿದ್ದಾರೆ.

ಇದೀಗ ಪ್ರಭಾಸ್ ಆರೋಗ್ಯ ಸಮಸ್ಯೆಯ ಕಾರಣದಿಂದ ಈ ಮೂರು ಸಿನೆಮಾಗಳು ತಡವಾಗಲಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಪ್ರಭಾಸ್ ಅಭಿನಯದ ಆದಿಪುರುಷ್ ಸಿನೆಮಾ ಭಾರಿ ವಿಮರ್ಶೆಗೆ ಗುರಿಯಾಗಿತ್ತು. ಭಾರಿ ನಿರೀಕ್ಷೆಯಿಂದ ಈ ಸಿನೆಮಾ ನಿರ್ಮಾಣ ಮಾಡಲಾಗಿದ್ದು, ಈ ಸಿನೆಮಾ ಭಾರಿ ಪ್ಲಾಪ್ ಪಡೆದುಕೊಂಡಿತ್ತು. ಇನ್ನು ಬಹುನಿರೀಕ್ಷಿತ ಸಲಾರ್‍ ಸಿನೆಮಾ ಇದೇ ಸೆಪ್ಟೆಂಬರ್‍ 28 ರಂದು ಬಿಡುಗಡೆಯಾಗಲಿದೆ. ಕಲ್ಕಿ ಸಿನೆಮಾ ಮುಂದಿನ ವರ್ಷ ತೆರೆಕಾಣಲಿದೆ ಎಂದು ಹೇಳಲಾಗುತ್ತಿದೆ.