Film News

ಕಾಂತಾರ ಪ್ರೀಕ್ವೆಲ್ ಸಿನೆಮಾ ಬಗ್ಗೆ ಕ್ರೇಜಿ ಅಪ್ಡೇಟ್, ಶೂಟಿಂಗ್ ಸ್ಥಳ, ಬಿಡುಗಡೆ ದಿನಾಂಕ ಫಿಕ್ಸ್?

ಸೈಲೆಂಟ್ ಆಗಿ ಬಂದು ಸೆನ್ಷೇಷನ್ ಕ್ರಿಯೇಟ್ ಮಾಡಿದ ಸಿನೆಮಾಗಳಲ್ಲಿ ರಿಷಭ್ ಶೆಟ್ಟಿಯವರ ಕಾಂತಾರ ಸಿನೆಮಾ ಮೊದಲ ಸ್ಥಾನದಲ್ಲಿರುತ್ತದೆ. ಜೊತೆಗೆ ಕಡಿಮೆ ಬಜೆಟ್ ನಲ್ಲಿ ತೆರೆಕಂಡು ಭಾರಿ ಕಲೆಕ್ಷನ್ ಸಹ ಮಾಡಿತ್ತು. ಮೊದಲಿಗೆ ಕನ್ನಡದಲ್ಲಿ ಮಾತ್ರ ಬಿಡುಗಡೆಯಾದ ಈ ಸಿನೆಮಾ ಬಳಿಕ ಪ್ಯಾನ್ ಇಂಡಿಯಾ ಸಿನೆಮಾ ಆಗಿತ್ತು. ಈಗಾಗಲೇ ಕಾಂತಾರಾ ಪ್ರೀಕ್ವೆಲ್ ಬಗ್ಗೆ ಅನೇಕ ಸಭೆಗಳಲ್ಲಿ ಚಿತ್ರತಂಡ ಮಾಹಿತಿ ನೀಡಿತ್ತು. ಇದೀಗ ಕಾಂತಾರಾ ಪ್ರೀಕ್ವೆಲ್ ಬಗ್ಗೆ ಕ್ರೇಜಿ ಅಪ್ಡೇಟ್ ಒಂದು ಬಂದಿದ್ದು, ಅದು ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ.

ಸ್ಯಾಂಡಲ್ ವುಡ್ ಸಿನಿರಂಗವನ್ನು ಇಡೀ ವಿಶ್ವವೇ ತಿರುಗಿ ನೋಡುವಂತೆ ಮಾಡಿದ್ದು ಕಾಂತಾರ ಸಿನೆಮಾ ಎಂದು ಹೇಳಬಹುದಾಗಿದೆ. ನಟ ಕಂ ನಿರ್ದೇಶಕ ರಿಷಭ್ ಶೆಟ್ಟಿ ಈ ಸಿನೆಮಾವನ್ನು ನಿರ್ದೇಶನ ಮಾಡಿ ನಟಿಸಿದ್ದರು. ತುಂಬಾ ಅದ್ಬುತವಾದ ಕಥೆಯೊಂದಿಗೆ ಈ ಸಿನೆಮಾ ತೆರೆಕಂಡಿದ್ದು, ಸಾಮಾನ್ಯವಾಗಿ ಬಿಡುಗಡೆಯಾದ ಈ ಸಿನೆಮಾ ಪ್ಯಾನ್ ಇಂಡಿಯಾ ಸಿನೆಮಾ ಆಗಿ ಕೇವಲ ದೇಶ ಮಾತ್ರವಲ್ಲದೇ ವಿಶ್ವ ಮಟ್ಟದಲ್ಲೂ ಸಹ ಕ್ರೇಜ್ ಪಡೆದುಕೊಂಡಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬ್ಲಾಕ್ ಬ್ಲಸ್ಟರ್‍ ಹಿಟ್ ಸಹ ಪಡೆದುಕೊಂಡಿತ್ತು. ಈ ಸಿನೆಮಾ ನೋಡಿದ ಅನೇಕ ಸ್ಟಾರ್‍ ಗಳು, ಅಂದರೇ ಸೂಪರ್‍ ಸ್ಟಾರ್‍ ರಜನಿಕಾಂತ್, ಪ್ರಭಾಸ್ ರವರಂತಹ ನಟರೂ ಸಹ ಈ ಸಿನೆಮಾವನ್ನು ನೋಡಿ ಫಿದಾ ಆಗಿ ಮನಸಾರೆ ಹೊಗಳಿದರು. ಅದರಲ್ಲೂ ಸೂಪರ್‍ ಸ್ಟಾರ್‍ ರಜನಿಕಾಂತ್ ರವರು ರಿಷಭ್ ಶೆಟ್ಟಿಯವರನ್ನು ಮನೆಗೆ ಕರೆಸಿಕೊಂಡು ಪ್ರಶಂಸೆ ಮಾಡಿದ್ದರು.

ಇನ್ನೂ ಹೊಂಬಾಳೆ ಫಿಲಂಸ್ ಈ ಸಿನೆಮಾ ನಿರ್ಮಾಣ ಮಾಡಿದ್ದು, ಸಿನೆಮಾದ 100 ಡೇಸ್ ಕಾರ್ಯಕ್ರಮದಲ್ಲಿ ಈ ಸಿನೆಮಾದ ಪಾರ್ಟ್ 2 ಬದಲಿಗೆ ಕಾಂತಾರಾ ಪ್ರೀಕ್ವೆಲ್ ಮಾಡುವುದಾಗಿ ತಿಳಿಸಲಾಗಿತ್ತು. ಇನ್ನೂ ಅದರಂತೆ ಕಳೆದ ಮಾರ್ಚ್‌ನಲ್ಲಿ ಸಿನೆಮಾ ಕಥೆಯ ಕೆಲಸ ಸಹ ಶುರು ಮಾಡಲಾಗಿತ್ತು. ಅದಾದ ಬಳಿಕ ಈ ಸಿನೆಮಾದ ಬಗ್ಗೆ ಕೆಲವೊಂದು ಊಹಾಪೋಹಗಳು ಮಾತ್ರ ಕೇಳಿಬಂದವು. ಇದೀಗ ಮತ್ತೊಂದು ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ. ಕಾಂತಾರ ಸಿನೆಮಾ ರಿಷಭ್ ರವರ ಹುಟ್ಟೂರಾದ ಕುಂದಾಪುರದಲ್ಲಿ ಶೂಟೀಂಗ್ ಮಾಡಲಾಗಿತ್ತು. ಇದೀಗ ಕಾಂತಾರಾ ಪ್ರೀಕ್ವೆಲ್ ಮಂಗಳೂರಿನಲ್ಲಿ ನಡೆಯಲಿದೆ. ಕಾಂತಾರ ಸಿನೆಮಾಗಿಂತ ಪ್ರೀಕ್ವೆಲ್ ಭಾರಿ ಬಜೆಟ್ ನಲ್ಲಿ ನಿರ್ಮಾಣ ಮಾಡಲು ಪ್ಲಾನ್ ಮಾಡಲಾಗಿದೆಯಂತೆ. ಈ ಸಿನೆಮಾ 2024ರ ಕೊನೆಯಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂಬ ಸುದ್ದಿಯೊಂದು ಟ್ರೆಂಡ್ ಆಗುತ್ತಿದೆ.

ಇನ್ನೂ ಈ ಸುದ್ದಿಯ ಬಗ್ಗೆ ಅಧಿಕೃತ ಅಪ್ಡೇಟ್ ಇಲ್ಲದೇ ಇದ್ದರೂ ಸಹ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಬಿರುಗಾಳಿಯಂತೆ ಹರಿದಾಡುತ್ತಿದೆ. ಕಡಿಮೆ ಬಜೆಟ್ ನಲ್ಲಿ ತೆರೆಕಂಡ ಕಾಂತಾರಾ ಸಿನೆಮಾ ಆ ಮಟ್ಟಿಗೆ ಸಕ್ಸಸ್ ಕಂಡರೇ, ಇನ್ನೂ ಕಾಂತಾರಾ ಪ್ರೀಕ್ವೆಲ್ ಯಾವ ರೀತಿಯಲ್ಲಿ ಸದ್ದು ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top