Film News

ನಾನು ಮಾಡುವ ಪಾತ್ರಗಳು ಅದೇ ಮಾದರಿ ಇರುತ್ತೆ ಎಂದ ಅನಸೂಯ, ವೈರಲ್ ಆದ ಅನಸೂಯ ಕಾಮೆಂಟ್ಸ್….!

ಸಿನೆಮಾಗಳ ಜೊತೆಗೆ ಸದಾ ಸುದ್ದಿಯಲ್ಲೇ ಇರುವಂತಹ ನಟಿ ಅನಸೂಯ ಭಾರಾದ್ವಾಜ್ ಒಂದಲ್ಲ ಒಂದು ಕಾರಣದಿಂದ ಸುದ್ದಿಯಲ್ಲೇ ಇರುತ್ತಾರೆ. ನಟಿ ಅನಸೂಯ ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿದ್ದು, ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡುತ್ತಿರುತ್ತಾರೆ. ಇದೀಗ ಸಿನೆಮಾಗಳಲ್ಲಿ ಆಕೆಯ ಪಾತ್ರಗಳ ಬಗ್ಗೆ ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದು, ಆಕೆಯ ಕಾಮೆಂಟ್ ಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ಆಂಕರ್‍ ಆಗಿ ಭಾರಿ ಸೆನ್ಷೇಷನ್ ಕ್ರಿಯೇಟ್ ಮಾಡಿದ ಅನಸೂಯ ಭಾರದ್ವಾಜ್ ಸದ್ಯ ಕಿರುತೆರೆಯಿಂದ ದೂರವುಳಿದು ಸಿನೆಮಾಗಳ ಮೇಲೆ ಪುಲ್ ಪೋಕಸ್ ಇಟ್ಟಿದ್ದಾರೆ. ಕಿರುತೆರೆಯಲ್ಲಿ ಗ್ಲಾಮರ್‍ ಶೋ ಮಾಡುತ್ತಾ ಭಾರಿ ಫೇಂ ಪಡೆದುಕೊಂಡ ಅನಸೂಯ ಸಿನೆಮಾಗಳಲ್ಲಿ ಅವಕಾಶಗಳನ್ನು ಪಡೆದುಕೊಂಡು, ಬಹುಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಕಿರುತೆರೆಯಲ್ಲಿರುವಾಗಲೇ ಸೆನ್ಷೇಷನ್ ಕಾಮೆಂಟ್ ಗಳನ್ನು ಮಾಡುತ್ತಾ, ತನ್ನ ವಿರುದ್ದ ಬಂದಂತಹ ವಿಮರ್ಶೆಗಳನ್ನು ಸಹ ಎದುರಿಸುತ್ತಿದ್ದರು. ಈಗಲೂ ಸಹ ಅನಸೂಯ ಅನೇಕ ಟ್ರೋಲರ್‍ ಗಳನ್ನು ಎದುರಿಸುತ್ತಿರುತ್ತಾರೆ. ಆ ಟ್ರೋಲ್ ಗಳಿಗೂ ಸಹ ಆಕೆ ತನ್ನದೇ ಆದ ಶೈಲಿಯಲ್ಲಿ ಕೌಂಟರ್‍ ಸಹ ಕೊಡುತ್ತಿರುತ್ತಾರೆ. ಇದೀಗ ಆಕೆ ಸಿನೆಮಾಗಳಲ್ಲಿನ ತನ್ನ ಪಾತ್ರದ ಬಗ್ಗೆ ಕಾಮೆಂಟ್ಸ್ ಮಾಡಿದ್ದಾರೆ.

ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಕೆಲವೊಂದು ಕಾಮೆಂಟ್ಸ್ ಮಾಡಿದ್ದಾರೆ. ತಾನು ನಟಿಸುವಂತಹ ಸಿನೆಮಾಗಳಲ್ಲಿ ಪಾತ್ರಗಳಿಗೆ ಒಂದು ನಿರ್ಣಯಕ್ಕೆ ಕಟ್ಟುಬಿದ್ದಿರುತ್ತಾರಂತೆ. ತಾನು ನಟಿಸುವಂತಹ ಪಾತ್ರಗಳನ್ನು ಮತ್ತೆ ರಿಪೀಟ್ ಮಾಡೊಲ್ಲವಂತೆ. ಇಲ್ಲಿಯವರೆಗೂ ಆಕೆ ವಿಭಿನ್ನ ಪಾತ್ರಗಳಲ್ಲೇ ನಟಿಸುತ್ತಿದ್ದಾರೆ. ವಿಭಿನ್ನ ಪಾತ್ರಗಳ ಮೂಲಕವೇ ಅಭಿಮಾನಿಗಳನ್ನು, ಸಿನೆಮಾ ಪ್ರೇಕ್ಷಕರನ್ನು ರಂಜಿಸುತ್ತೇನೆ. ಅದಕ್ಕಾಗಿ ನಾನು ತುಂಬಾ ಕೃಷಿ ಮಾಡುತ್ತೇನೆ. ಯಾವುದೇ ಪಾತ್ರಕ್ಕಾದರೂ ನಾನು ನ್ಯಾಯ ಮಾಡುತ್ತೇನೆ ಎಂಬ ನಂಬಿಕೆ ನನಗಿದೆ. ಅದೇ ರೀತಿ ರಂಗಸ್ಥಲಂ ಸಿನೆಮಾದಲ್ಲಿ ರಂಗಮ್ಮತ್ತ ಎಂಬ ಪಾತ್ರ ಬಳಿಕ ಪುಷ್ಪಾ ಸಿನೆಮಾದಲ್ಲಿನ ದಾಕ್ಷಾಯಣಿ ಪಾತ್ರದ ಬಗ್ಗೆ ಸಹ ಮಾತನಾಡಿದ್ದಾರೆ. ಪುಷ್ಪಾ ಸಿನೆಮಾದ ದಾಕ್ಷಾಯಣಿ ಪಾತ್ರಕ್ಕಾಗಿ ಲುಕ್ ಟೆಸ್ಟ್ ಮಾಡಿದಾಗ ರಂಗಮತ್ತ ಪಾತ್ರದಂತೆ ಹೈಪ್ ಇರೊಲ್ಲ ಎಂದು ನಿರ್ದೇಶಕ ಹೇಳಿದ್ದರಂತೆ. ಆದರೆ ದಾಕ್ಷಾಯಣಿ ಪಾತ್ರಕ್ಕೂ ಒಳ್ಳೆಯ ರೆಸ್ಪಾನ್ಸ್ ಬಂದಿದೆ. ಪುಷ್ಪಾ-2 ಸಿನೆಮಾದಲ್ಲಿ ನನ್ನ ಪಾತ್ರ ಮತಷ್ಟು ಆಕರ್ಷಣೆಯಾಗಿರುತ್ತದೆ ಎಂದು ಹೇಳಿದ್ದಾರೆ.

ಇನ್ನೂ ಅನಸೂಯ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿರುತ್ತಾರೆ. ಇದೀಗ ಆಕೆ ಸೀರೆಯಲ್ಲಿ ಸಂಪ್ರದಾಯಬದ್ದವಾಗಿ ಕಾಣಿಸಿಕೊಂಡಿದ್ದಾರೆ. ಬ್ಯೂಟಿಪುಲ್ ಲುಕ್ಸ್ ಜೊತೆಗೆ ಮತ್ತೇರಿಸುವಂತಹ ಲುಕ್ಸ್ ಮೂಲಕ ಎಲ್ಲರನ್ನೂ ಮಸ್ಮರೈಜ್ ಮಾಡಿದ್ದಾರೆ. ಆಕೆಯ ಈ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

Most Popular

To Top