ತಾಯಿಯ ಬಗ್ಗೆ ಶಾಕಿಂಗ್ ವಿಚಾರಗಳನ್ನು ಹೊರಹಾಕಿದ ಜಾನ್ವಿ ಕಪೂರ್, ಶ್ರೀದೇವಿ ಬಗ್ಗೆ ಎಮೋಷನಲ್ ಸ್ಪೀಚ್ .…..!

Follow Us :

ಬಾಲಿವುಡ್ ಸಿನಿರಂಗದ ಸ್ಟಾರ್‍ ಕಿಡ್ ಜಾನ್ವಿ ಕಪೂರ್‍ ಸಿನೆಮಾಗಳಲ್ಲಿ ಅಷ್ಟೊಂದು ಸಕ್ಸಸ್ ಕಾಣದೇ ಇದ್ದರೂ ಸಹ ಸೋಷಿಯಲ್ ಮಿಡಿಯಾದಲ್ಲಂತೂ ಸ್ಟಾರ್‍ ನಟಿಯರಿಗಿಂತಲೂ ಹೆಚ್ಚಿನ ಪಾಪ್ಯುಲಾರಿಟಿ ಪಡೆದುಕೊಂಡಿದ್ದಾರೆ. ಅತಿಲೋಕ ಸುಂದರಿ ಶ್ರೀದೇವಿಯವರ ಪುತ್ರಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಈಕೆ ಸಿನೆಮಾಗಳಿಗಿಂತ ಸೋಷಿಯಲ್ ಮಿಡಿಯಾ ಮೂಲಕ ಭಾರಿ ಕ್ರೇಜ್ ಪಡೆದುಕೊಂಡಿದ್ದಾರೆ. ಇದೀಗ ಆಕೆ ತಮ್ಮ ತಾಯಿಯ ಬಗ್ಗೆ ಎಮೋಷನಲ್ ಕಾಮೆಂಟ್ಸ್ ಮಾಡಿದ್ದಾರೆ. ಅಷ್ಟಕ್ಕೂ ಜಾನ್ವಿ ಕಪೂರ್‍ ತಾಯಿಯ ಬಗ್ಗೆ ಹೇಳಿದ್ದಾದರೂ ಏನು ಎಂಬ ವಿಚಾರಕ್ಕೆ ಬಂದರೇ,

ಯಂಗ್ ಬ್ಯೂಟಿ ಜಾನ್ವಿ ಕಪೂರ್‍ ಸಿನೆಮಾಗಳಿಗಿಂತ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಖ್ಯಾತಿ ಪಡೆದುಕೊಂಡಿದ್ದಾರೆ. ಇದೀಗ ಮುಂಬೈನಲ್ಲಿ ನಡೆದಂತಹ ಖಾಸಗಿ ಕಾರ್ಯಕ್ರಮವೊಂದರಲ್ಲಿ ಆಕೆ ತಾಯಿಯನ್ನು ನೆನಪಿಸಿಕೊಂಡು ಎಮೋಷನಲ್ ಆಗಿದ್ದಾರೆ. ತಾಯಿಯನ್ನು ನೆನಪಿಸಿಕೊಂಡು ಬಾವೀದ್ವಾಗಕ್ಕೆ ಗುರಿಯಾಗಿದ್ದಾರೆ. ತಾನು ಕೆರಿಯರ್‍ ಆರಂಭದಲ್ಲಿ ಶ್ರೀದೇವಿಯವರನ್ನು ಆಕೆ ದೂರ ಇಟ್ಟಿದ್ದಾರೆ. ಧಡಕ್ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಈ ವೇಳೆ ಜಾನ್ವಿ ತನ್ನ ತಾಯಿಯನ್ನು ದೂರ ಇಟ್ಟಿದ್ದಳಂತೆ. ತನ್ನ ಸಿನೆಮಾದ ಶೂಟಿಂಗ್ ವೇಳೆ ಶ್ರೀದೇವಿಯವರನ್ನು ಸ್ಥಳಕ್ಕೆ ಬರಬೇಡ ಎಂದು ಹೇಳಿದ್ದರಂತೆ. ಆ ಸಮಯದಲ್ಲಿ ಜಾನ್ವಿ ತಾನು ತೆಗೆದುಕೊಂಡ ನಿರ್ಣಯ ತಪ್ಪೆಂದು ಅರ್ಥ ಮಾಡಿಕೊಂಡರಂತೆ.  ನಮ್ಮ ತಾಯಿಗೆ ಇರುವಂತಹ ಹೆಸರು ಖ್ಯಾತಿ ಕಾರಣದಿಂದ ನನಗೆ ಅವಕಾಶ ಬರುತ್ತದೆ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ ಅದಕ್ಕಾಗಿಯೇ ನಮ್ಮ ತಾಯಿಯನ್ನು ಶೂಟೀಂಗ್ ಲೊಕೇಷನ್ ಗೆ ಬರಬೇಡ ಎಂದು ಹೇಳಿದ್ದೆ ಎಂದು ಜಾನ್ವಿ ಹೇಳಿದ್ದಾರೆ.

ನನಗೆ ಯಾವುದೇ ಸ್ಟಾರ್‍ ಕಿಡ್ ಎಂಬುದು ಬೇಡ ಎಂದು, ತಾಯಿಯ ವಾರಸತ್ವ ನನ್ನ ಬಳಿ ಬರಬಾರದೆಂದು, ನಾನು ನನ್ನ ಸ್ವಂತ ಪ್ರತಿಭೆಯಿಂದ ಬೆಳೆಯಬೇಕು ಎಂದು ಪ್ರಯತ್ನ ಮಾಡುವುದು ನನ್ನ ಉದ್ದೇಶವಾಗಿದೆ. ಆದರೆ ಕೆರಿಯರ್‍ ಆರಂಭದಲ್ಲಿ ಏನೋ ತಿಳಿಯದ ಅಭದ್ರತೆಯ ಭಾವನೆ ಇತ್ತು. ಗುರಿ ಸಾಧಿಸಲು ಒತ್ತಡಕ್ಕೆ ಗುರಿಯಾಗುತ್ತಿದ್ದೆ ಎಂದು ನೋವನ್ನು ಹೊರಹಾಕಿದ್ದಾರೆ. ತಾಯಿ ನೀಡುತ್ತಿದ್ದ ಸಲಹೆಗಳನ್ನು ಪಾಲಿಸುತ್ತಿರಲಿಲ್ಲ. ಕೆಲವು ದಿನಗಳು ಕಳೆದ ಬಳಿಕ ನನ್ನ ತಪ್ಪು ಅರಿವಾಗಿ ನೋವನ್ನು ಅನುಭವಿಸಿದ್ದೆ. ಈಗ ನಮ್ಮ ತಾಯಿ ಇದ್ದಿದ್ದರೇ ನನ್ನ ಜೊತೆಗೆ ಶೂಟಿಂಗ್ ಗೆ ಕರೆದುಕೊಂಡು ಹೋಗಿ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದೆ. ಶ್ರೀದೇವಿ ಮಗಳಾಗಿ ಹುಟ್ಟಿದ್ದಕ್ಕೆ ಗರ್ವ ಪಡುತ್ತಿದ್ದೇನೆ ಎಂದು ಜಾನ್ವಿ ಎಮೋಷನಲ್ ಆಗಿದ್ದಾರೆ.

ಸದ್ಯ ಜಾನ್ವಿ ಕಪೂರ್‍ ದೇವರ ಸಿನೆಮಾದಲ್ಲಿ ಜೂನಿಯರ್‍ ಎನ್.ಟಿ.ಆರ್‍ ಜೊತೆಗೆ ನಟಿಸುತ್ತಿದ್ದಾರೆ. ಈ ಸಿನೆಮಾದ ಮೂಲಕ ಆಕೆ ಸೌತ್ ಸಿನಿರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ಈ ಸಿನೆಮಾದಲ್ಲಿ ಆಕೆ ಹಳ್ಳಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನೆಮಾಗಳ ಜೊತೆಗೆ ಆಕೆ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಸದ್ದು ಮಾಡುತ್ತಿರುತ್ತಾರೆ.