News

ಲೈಂಗಿಕ ತೃಪ್ತಿಗಾಗಿ ಮಾಡಬಾರದ ಕೆಲಸ ಮಾಡಿದ ವೃದ್ದ, ಜನನಾಂಗಕ್ಕೆ ಬ್ಯಾಟರಿ ಸಿಕ್ಕಿಸಿಕೊಂಡು ಎಡವಟ್ಟು ಮಾಡಿಕೊಂಡ್ನಾ?

ಲೈಂಗಿಕ ತೃಪ್ತಿಗಾಗಿ ಅನೇಕರು ವಿವಿಧ ಮಾರ್ಗಗಳನ್ನು ಅನುಸರಿಸುತ್ತಿರುತ್ತಾರೆ. ಅದರಲ್ಲೂ ಕೆಲವರು ಮೆಡಿಸಿನ್ ಗಳನ್ನು ಬಳಸಿ ತೃಪ್ತಿ ಪಡುತ್ತಿರುತ್ತಾರೆ. ಕೆಲವು ದಿನಗಳ ಹಿಂದೆಯಷ್ಟೆ ಉತ್ತರ ಪ್ರದೇಶದಲ್ಲಿ ವ್ಯಕ್ತಿಯೋರ್ವ ಹೆಚ್ಚು ಡೋಸ್ ವೈಯಾಗ್ರಾ ಸೇವಿಸಿ ವಿಕೃತ ಕಾಮ ಮೆರೆದಿದ್ದರಿಂದ ಆತನ ಪತ್ನಿ ಮೃತಪಟ್ಟಿದ್ದರು. ಇದೀಗ ಅಂತಹ ಘಟನೆಯೊಂದು ನಡೆದಿದೆ. ಲೈಂಗಿಕ ತೃಪ್ತಿಗಾಗಿ 73ರ ವೃದ್ದನೋರ್ವ ಮಾಡಿದ ಕೆಲಸದಿಂದ ಆಸ್ಪತ್ರೆಯ ಪಾಲಾಗಿದ್ದಾನೆ.

ಆಸ್ಟ್ರೇಲಿಯಾದಲ್ಲಿ ಈ ಘಟನೆ ನಡೆದಿದ್ದು, ತಾತ್ಕಲಿಕವಾಗಿ ಲೈಂಗಿಕ ತೃಪ್ತಿ ಪಡೆಯುವ ಆಸೆಯಿಂದ 73 ವಯಸ್ಸಿನ ಮುದುಕ ಆಸ್ಪತ್ರೆ ಪಾಲಾಗಿದ್ದಾನೆ. ಲೈಂಗಿಕ ತೃಪ್ತಿಗಾಗಿ ಬಟನ್ ಶೈಲಿಯ ಬ್ಯಾಟರಿಗಳನ್ನು ತನ್ನ ಜನನಾಂಗಕ್ಕೆ ಅಳವಡಿಸಿಕೊಂಡಿದ್ದಾನೆ. ಬಳಿಕ ಅದು ಜನನಾಂಗದಲ್ಲೇ ಸಿಕ್ಕಿಕೊಂಡಿದ್ದರಿಂದ ಶಸ್ತ್ರ ಚಿಕಿತ್ಸೆಯ ಮೊರೆ ಹೋಗಬೇಕಾಗಿದೆ. ಈ ವೃದ್ದ ಉದ್ದೇಶಪೂರ್ವಕವಾಗಿಯೇ ಶಿಶ್ನದ ಒಳಕ್ಕೆ ಬ್ಯಾಟರಿ ತಳ್ಳುವ ಮೂಲಕ ತಾತ್ಕಾಲಿಕ ಲೈಂಗಿಕ ತೃಪ್ತಿ ಅನುಭವಿಸಿದ್ದಾನೆ. ಆದರೆ ಬ್ಯಾಟರಿಗಳು ಮೂತ್ರನಾಳದಲ್ಲೇ ಸಿಲುಕಿಕೊಂಡು ತಡೆಯಲಾರದ ನೋವು ಅನುಭವಿಸಿದ್ದಾನೆ ಎಂದು ವೈದ್ಯಕೀಯ ಅಧ್ಯಯನದ ವರದಿಯಿಂದ ತಿಳಿದುಬಂದಿದೆ ಎನ್ನಲಾಗಿದೆ.

ಇನ್ನೂ ನೋವು ತಾಳಲಾರದ ವೃದ್ದ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗಿದ್ದಾನೆ. ವೈದ್ಯ ಆ ವೃದ್ದನಿಗೆ ಶಸ್ತ್ರ ಚಿಕಿತ್ಸೆ ಮಾಡಿ ಬ್ಯಾಟರಿಯನ್ನು ಹೊರಕ್ಕೆ ತೆಗೆದಿದ್ದಾರೆ. ಈ ರೀತಿಯಲ್ಲಿ ಲೈಂಗಿಕ ತೃಪ್ತಿಗಾಗಿ ಬ್ಯಾಟರಿ ಅಳವಡಿಸಿಕೊಳ್ಳುವುದರಿಂದ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಜನನಾಂಗಕ್ಕೆ ಬಟನ್ ಬ್ಯಾಟರಿ ಸೇರಿಸಿದ ಬಳಿಕ ನೋವು ಹೆಚ್ಚಾಗುತ್ತದೆ. ಮೂತ್ರ ವಿಸರ್ಜನೆಯ ವೇಳೆ ತೀವ್ರ ನೋವು ಸಹ ಆಗುತ್ತದೆ. ಆದ್ದರಿಂದ ಜನರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಅಲ್ಪ ತೃಪ್ತಿಗಾಗಿ ಈ ರೀತಿಯ ಎಡವಟ್ಟುಗಳನ್ನು ಮಾಡಿಕೊಳ್ಳಬಾರದು ಎಂದು ವೈದ್ಯರ ಎಚ್ಚರಿಕೆಯಾಗಿದೆ.

Most Popular

To Top