ಬಾತ್ ರೂಂ ಸೆಲ್ಫಿ ಪೊಟೋ ಹಂಚಿಕೊಂಡ ಇಲಿಯಾನಾ, ಮೆಮೊರಿಗಾಗಿ ಈ ರೀತಿಯ ಪೊಟೊ ಹಂಚಿಕೊಳ್ಳಬೇಕಾ ಎಂದ ಫ್ಯಾನ್ಸ್……!

Follow Us :

ಗೋವಾ ಬ್ಯೂಟಿ ಇಲಿಯಾನಾ ಪೋಕಿರಿ ಸಿನೆಮಾದ ಮೂಲಕ ಟಾಲಿವುಡ್ ನಲ್ಲಿ ಓವರ್‍ ನೈಟ್ ಸ್ಟಾರ್‍ ಆದರು. ಆಕೆ ಸೊಂಟದ ಮೂಲಕ ಅನೇಕ ಯುವಕರ ಕ್ರಷ್ ಆದರು. ಅನೇಕ ಸೂಪರ್‍ ಹಿಟ್ ಸಿನೆಮಾಗಳಲ್ಲಿ ನಟಿಸಿದಂತಹ ಗೋವಾ ಬ್ಯೂಟಿ ಇಲಿಯಾನಾ ಕೆರಿಯರ್‍ ಪೀಕ್ ಲೆವೆಲ್ ನಲ್ಲಿರುವಾಗಲೇ ಆಕೆ ತೆಗೆದುಕೊಂಡ ಕೆಲವು ತಪ್ಪು ನಿರ್ಣಯಗಳ ಕಾರಣದಿಂದ ಆಕೆಯ ಕೆರಿಯರ್‍ ಫೇಡ್ ಔಟ್ ಆಗಿಬಿಟ್ಟಿತ್ತು. ಕೆಲವು ದಿನಗಳಿಂದ ಇಲಿಯಾನಾ ತಮ್ಮ ವೈಯುಕ್ತಿಕ ವಿಚಾರಗಳಿಂದ ಪ್ರತಿ ನಿತ್ಯ ಸುದ್ದಿಯಲ್ಲೇ ಇದ್ದಾರೆ. ಇದೀಗ ಆಕೆ ಬಾತ್ ರೂಂ ನಿಂದ ಬೋಲ್ಡ್ ಪೊಟೋ ಒಂದನ್ನು ಹಂಚಿಕೊಂಡಿದ್ದು, ಪೋಟೋ ಭಾರಿ ವೈರಲ್ ಆಗುತ್ತಿದೆ.

ನಟಿ ಇಲಿಯಾನಾ ಮದುವೆಗೂ ಮುಂಚೆಯೇ ಗರ್ಭಿಣಿಯಾಗುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದರು. ಈ ಕಾರಣದಿಂದ ಆಕೆ ತುಂಬಾನೆ ಸುದ್ದಿಯಾಗಿದ್ದರು. ಬಳಿಕ ಆ.1 ರಂದು ಇಲಿಯಾನಾ ಗಂಡು ಮಗುವಿಗೆ ಜನ್ಮ ಕೊಟ್ಟರು. ಇಲಿಯಾನಾ ಮಗುವಿಗೆ ತಂದೆ ಯಾರು, ಆತ ಯಾರು ಎಂಬ ಸುದ್ದಿ ಜೊರಾಗಿಯೇ ಕೇಳಿಬಂತು. ಅದಕ್ಕೆ ಆಕೆ ತನ್ನ ಪತಿ ಮಿಚಲ್ ಡೊಲೋನ್ ರನ್ನು ಸೋಷಿಯಲ್ ಮಿಡಿಯಾ ಮೂಲಕ ಪರಿಚಯಿಸಿದ್ದರು. ಇಲಿಯಾನಾ ಗರ್ಭಿಣಿಯಾಗುವುದಕ್ಕೂ ಮುಂಚೆಯೇ ವಿವಾಹವಾಗಿದ್ದರಂತೆ. ಆದರೆ ಆಕೆಯ ಮದುವೆ ಎಲ್ಲಿ, ಯಾವಾಗ ನಡೆಯಿತು ಎಂಬ ಪ್ರಶ್ನೆಗಳು ಮಾತ್ರ ಹಾಗೆಯೇ ಉಳಿದಿದೆ. ಜೊತೆಗೆ ಆಕೆ ಸಿನೆಮಾಗಳಿಂದ ದೂರ ಉಳಿದಿದ್ದಾರೆ. ಮತ್ತೊಂದು ರೂಮರ್‍ ನಂತೆ ಇಲಿಯಾನಾ ಸಿನೆಮಾಗಳಿಗೆ ಗುಡ್ ಬೈ ಹೇಳಿ ಮಗನ ಲಾಲನೆ ಪಾಲನೆ ಮಾಡಲಿದ್ದಾರೆ ಎಂದೂ ಸಹ ಹೇಳಲಾಗಿತ್ತು.

ಸದ್ಯ ನಟಿ ಇಲಿಯಾನ ತನ್ನ ಪತಿ ಹಾಗೂ ಮಗನೊಂದಿಗೆ ಸಂತೊಷದಿಂದ ಜೀವನ ಸಾಗಿಸುತ್ತಿದ್ದಾರೆ. ಮಗನ ಬಗ್ಗೆ ತನ್ನ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಗಳನ್ನು ಮಾಡುತ್ತಿರುತ್ತಾರೆ. ಇದೀಗ ಇಲಿಯಾನಾ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಪೊಟೊ ಒಂದನ್ನು ಹಂಚಿಕೊಂಡಿದ್ದಾರೆ. ಈ ಪೊಟೋ ಹಂಚಿಕೊಂಡ ಕಡಿಮೆ ಸಮಯದಲ್ಲೇ ಭಾರಿ ವೈರಲ್ ಆಗುತ್ತಿದೆ. ಬಾತ್ ರೂಂನಿಂದ ಬೋಲ್ಡ್ ಪೊಟೋ ಒಂದನ್ನು ಹಂಚಿಕೊಂಡಿದ್ದಾರೆ. ಬ್ಲಾಕ್ ಕಲರ್‍ ಬಿಕಿನಿಯಲ್ಲಿ ಆಕೆ ಕಾಣಿಸಿಕೊಂಡಿದ್ದಾರೆ. ಆಕೆ ನಾಲ್ಕು ತಿಂಗಳ ಗರ್ಭಿಣಿಯಾದಾಗ ಬಾತ್ ರೂಂನಲ್ಲಿ ಸೆಲ್ಫಿಗೆ ಪೋಸ್ ಕೊಟ್ಟಿದ್ದಾರೆ. ಈ ಮೆಮೊರಿಯನ್ನು ನೆನಪಿಸಿಕೊಳ್ಳುತ್ತಾ ಆಕೆ ಈ ಪೊಟೋ ಶೇರ್‍ ಮಾಡಿದ್ದಾರೆ. ಸದ್ಯ ಈ ಪೊಟೋ ಭಾರಿ ವೈರಲ್ ಆಗುತ್ತಿದ್ದು, ಪೊಟೋ ಭಾರಿ ವೈರಲ್ ಆಗುತ್ತಿದೆ. ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳ ಮೂಲಕ ಪೊಟೋ ಮತಷ್ಟು ಕಡೆ ವೈರಲ್ ಮಾಡುತ್ತಿದ್ದಾರೆ.