ನನ್ನ ಮಾತನ್ನು ತಿರುಚಿದ್ದಾರೆ ಎಂದ ನಟ ಜಗ್ಗೇಶ್, ಬೆದರಿಕೆ ಹಾಕಿದವರ ವಿರುದ್ದ ದೂರು ಕೊಟ್ಟ ನಟ…..!

Follow Us :

ನವರಸ ನಾಯಕ ಜಗ್ಗೇಶ್ ರವರು ರಂಗನಾಯಕ ಸಿನೆಮಾದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಾ ಹುಲಿ ಉಗುರು ಪ್ರಕರಣದ ಬಗ್ಗೆ ಕೆಲವೊಂದು ಹೇಳಿಕೆಗಳನ್ನು ನೀಡಿದ್ದರು. ಕಿತ್ತೋದ್ ನನ್ನ ಮಗ ತಗಲಾಕ್ಕೊಂಡ ಎಂದಿದ್ದರು, ಆದರೆ ತನ್ನ ಮಾತನ್ನು ತಿರುಚಲಾಗಿದೆ ಎಂದು ಜಗ್ಗೇಶ್ ಹೇಳಿದ್ದು, ಬೆದರಿಕೆ ಹಾಕಿದವರು ವಿರುದ್ದ ದೂರು ಸಹ ನೀಡಿದ್ದಾರೆ.

ನವರಸ ನಾಯಕ ಜಗ್ಗೇಶ್ ರವರು ರಂಗನಾಯಕ ಸಿನೆಮಾದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಾ ನಾನು ಹುಲಿ ತರ ಬದುಕಬೇಕು ಎಂದು ನಮ್ಮ ತಾಯಿ ಹುಲಿ ಉಗುರಿನ ಪೆಂಡೆಂಟ್ ಕೊಟ್ಟಿದ್ದರು. ಆದರೆ ಅವನು ಯಾವಾನೋ ಕಿತ್ತೋದ್ ನನ್ ಮಗ ನಿಜವಾದ ಹುಲಿ ಉಗುರು ಹಾಕ್ಕೊಂಡು ಟಿವಿ ಶೋಗೆ ಹೋಗಿ ತಗಲಾಕ್ಕೊಂಡ ಎಂದಿದ್ದರು. ಈ ಹೇಳಿಎಕ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗಿತ್ತು. ಈ ಕುರಿತು ಬಿಗ್ ಬಾಸ್ ಸ್ಪರ್ಧಿ ವರ್ತೂರ್‍ ಸಂತೋಷ್ ಸಹ ರಿಯಾಕ್ಟ್ ಆಗಿದ್ದರು. ದೊಡ್ಡವರು ಬಿಡಿ ಎಂದು ವರ್ತೂರ್‍ ಸಂತೋಷ್ ಹೇಳಿದ್ದರು. ಈ ಹೇಳಿಗೆಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗಿತ್ತು. ಈ ಕುರಿತು ಜಗ್ಗೇಶ್ ಆಕ್ರೋಷ ಹೊರಹಾಕಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ತಮ್ಮ ವಿರುದ್ದ ಅಪಪ್ರಚಾರ ಮಾಡಿದಂತಹವರ ವಿರುದ್ದ ದೂರು ನೀಡಿದ್ದಾರೆ.

ನಾನು ಹುಲಿ ಉಗುರಿನ ವಿಚಾರವಾಗಿ ರಂಗನಾಯಕ ಸಿನೆಮಾದಲ್ಲಿ ಮಾತಾನಾಡಿದ ಮಾತುಗಳನ್ನು ತಿರುಚಲಾಗಿದೆ ಎಂದು ಆರೋಪಿಸಿ, ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ತಮ್ಮ ವಿರುದ್ದ ಅಪಪ್ರಚಾರ ಮಾಡಿದವರ ವಿರುದ್ದ ಸಹ ದೂರು  ನೀಡಿದ್ದಾರೆ. ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಪ್ರಚಾರ ಪ್ರಿಯರು ಅಂತಹ ವಿಷಯಗಳಿಗಾಗಿ ಕಾಯುತ್ತಿರುತ್ತಾರೆ. ಅಂಥವರಿಗೆ ಈಗ ನಾನು ಸಿಕ್ಕಿದ್ದೇನೆ. ಜಾತಿ ನಿಂದನೆ, ಕೆಟ್ಟ ಪದ, ಮನುಷ್ಯತ್ವ ಇಲ್ಲ, ಮನೆಗೆ ಮುತ್ತಿಗೆ ಹಾಕುತ್ತೇವೆ ಎಂದೆಲ್ಲಾ ಬೆದರಿಕೆ ಹಾಕಿದ್ದಾರೆ. ನಾನು ಯಾವ ವ್ಯಕ್ತಿ ಅಥವಾ ಜಾತಿ ಬಗ್ಗೆ ಮಾತನಾಡಿಲ್ಲ. ನನಗಾದ ವೈಯುಕ್ತಿಕ ಅನುಭವದ ಬಗ್ಗೆ ಮಾತ್ರ ಮಾತನಾಡಿದ್ದೇನೆ ಅಷ್ಟೆ. ಅದರಲ್ಲಿ ಯಾವ ತಪ್ಪು ಇಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ತಮ್ಮ ವಿರುದ್ದ ಬೆದರಿಕೆ ಹಾಕಿದಂತಹವರ ವಿರುದ್ದ ಕಾನೂನು ರೀತ್ಯ ಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ.