Film News

ಅತ್ತಾ ಮುಸ್ಲೀಂರು ಮನೆ ಕೊಡುತ್ತಿಲ್ಲ, ಇತ್ತ ಹಿಂದೂಗಳು ಮನೆ ಕೊಡುತ್ತಿಲ್ಲ, ಪಾಪ ಉರ್ಫಿ ಗೋಳು ಕೇಳೋವ್ರು ಇಲ್ಲ…!

ಬಟ್ಟೆಗಳ ವಿಚಾರದಲ್ಲಿ ಯಾರಾದರೂ ಸದಾ ಸುದ್ದಿಯಾಗುತ್ತಾರೆ ಎಂದರೇ ಅದು ಬಾಲಿವುಡ್ ಕಾಂಟ್ರವರ್ಸಿ ಬ್ಯೂಟಿ ಉರ್ಫಿ ಜಾವೇದ್ ಮಾತ್ರ ಎಂದು ಹೇಳಬಹುದಾಗಿದೆ. ವಿಚಿತ್ರವಾದ ಉಡುಗೆಗಳ ಮೂಲಕ ಸದಾ ಸುದ್ದಿಯಲ್ಲೇ ಇರುತ್ತಾರೆ. ಆಕೆ ಧರಿಸುವಂತಹ ಬಟ್ಟೆಗಳ ಕಾರಣಕ್ಕೆ ಆಕೆ ಸದಾ ಟ್ರೋಲ್ ಆಗುತ್ತಿರುತ್ತಾರೆ. ಇದೀಗ ಆಕೆ ವರ್ತನೆಯ ಕಾರಣದಿಂದ ಆಕೆಗೆ ಯಾರು ಮನೆ ಬಾಡಿಗೆಗೆ ನೀಡುತ್ತಿಲ್ಲವಂತೆ, ಮುಸ್ಲೀಂರಾಗಲಿ ಅಥವಾ ಹಿಂದೂಗಳಾಗಲಿ ಆಕೆಗೆ ಮನೆ ನೀಡುತ್ತಿಲ್ಲವಂತೆ. ಈ ಬಗ್ಗೆ ಸೋಷಿಯಲ್ ಮಿಡಿಯಾ ಮೂಲಕ ನೋವನ್ನು ಹಂಚಿಕೊಂಡಿದ್ದಾರೆ.

ನಟಿ ಉರ್ಫಿ ಮೊದಲು ಕಿರುತೆರೆಯಲ್ಲಿ ಕಾಣಿಸಿಕೊಂಡರೂ ಸಹ ಆಕೆ ಪಾಪ್ಯುಲರ್‍ ಆಗಿದ್ದು ಮಾತ್ರ ಹಿಂದಿ ವರ್ಷನ್ ನ ಬಿಗ್ ಬಾಸ್ ನಲ್ಲಿ. ಈ ಶೋ ಮೂಲಕ ಕ್ರೇಜ್ ಸಂಪಾದಿಸಿಕೊಂಡ ಈಕೆ ಶೋ ನಿಂದ ಹೊರಬಂದ ಬಳಿಕ ವಿಚಿತ್ರವಾದ ಬಟ್ಟೆಗಳ ಮೂಲಕ ಸದ್ದು ಮಾಡುತ್ತಿದ್ದಾರೆ. ಪ್ರತಿನಿತ್ಯ ಒಂದಲ್ಲ ಒಂದು ರೀತಿಯ ವಿಚಿತ್ರವಾದ ಬಟ್ಟೆಗಳನ್ನು ಧರಿಸಿ ಸೋಷಿಯಲ್ ಮಿಡಿಯಾದಲ್ಲಿ ಸೆನ್ಷೇಷನ್ ಕ್ರಿಯೇಟ್ ಮಾಡುತ್ತಿರುತ್ತಾರೆ. ಮೈಕೊರೆಯುವ ಚಳಿಯಲ್ಲೂ ಸಹ ಆಕೆ ತುಂಟು ಬಟ್ಟೆಯುಟ್ಟು ಎಲ್ಲರ ಗಮನ ಸೆಳೆಯುತ್ತಾಳೆ. ಕೈಗೆ ಸಿಗುವಂತಹ ವಸ್ತುಗಳನ್ನು ಬಳಸಿಕೊಂಡು ಖಾಸಗಿ ಅಂಗಾಂಗಗಳನ್ನು ಕವರ್‍ ಮಾಡಿಕೊಂಡು ಸಹ ಪೋಟೋಶೂಟ್ಸ್ ಹಂಚಿಕೊಳ್ಳುತ್ತಿರುತ್ತಾರೆ. ವಿಚಿತ್ರ ಬಟ್ಟೆಗಳ ಮೂಲಕ ಸದಾ ಖುಷಿಯಲ್ಲಿರುವ ಉರ್ಫಿಗೆ ಇದೀಗ ದೊಡ್ಡ ಸಂಕಷ್ಟ ಎದುರಾಗಿದೆಯಂತೆ. ಈ ಬಗ್ಗೆ ಆಕೆ ಸೋಷಿಯಲ್ ಮಿಡಿಯಾ ಮೂಲಕ ತನ್ನ ನೋವನ್ನು ಹಂಚಿಕೊಂಡಿದ್ದಾಳೆ.

ಇನ್ನೂ ನಟಿ ಉರ್ಫಿ ತನ್ನ ಸೋಷಿಯಲ್ ಮಿಡಿಯಾ ಖಾತೆಯ ಮೂಲಕ ಅಳಲನ್ನು ತೋಡಿಕೊಂಡಿದ್ದಾರೆ. ನನಗೆ ಯಾರೂ ಮನೆ ಬಾಡಿಗೆಗೆ ನೀಡಲು ಮುಂದೆ ಬರುತ್ತಿಲ್ಲ. ಮುಂಬೈಯಂತಹ ದೊಡ್ಡ ನಗರದಲ್ಲಿ ಆಕೆಗೆ ಯಾರು ಮನೆ ನೀಡುತಿಲ್ಲವಾದ್ದರಿಂದ ನನಗೆ ತುಂಬಾ ಸಮಸ್ಯೆಯಾಗಿದೆ ಎಂದು ಟ್ವಿಟರ್‍ ಮೂಲಕ ನೋವನ್ನು ತೋಡಿಕೊಂಡಿದ್ದಾರೆ. ನಾನು ಮುಸ್ಲಿಂ ಎಂಬ ಕಾರಣಕ್ಕೆ ಹಿಂದೂ ಮಾಲೀಕರು ಮನೆ ನೀಡುತ್ತಿಲ್ಲ. ಮುಸ್ಲೀಂರ ಮನೆಗೆ ಹೋದರೇ ನಾನು ಬಟ್ಟೆ ಹಾಕುವ ಪದ್ದತಿ ಸರಿಯಿಲ್ಲ ಎಂದು ಅವರೂ ಸಹ ಮನೆ ನೀಡುತ್ತಿಲ್ಲ. ಜೊತೆಗೆ ಕೆಲವರು ನನಗೆ ಬರುವಂತಹ ಬೆದರಿಕೆಗಳಿಗೆ ಹೆದರಿಕೊಂಡು ಮನೆ ನೀಡುತ್ತಿಲ್ಲ. ನನಗೆ ಎಲ್ಲೂ ಮನೆ ಸಿಗುತ್ತಿಲ್ಲ ನಾನು ಹೇಗೆ ಬಾಳಲಿ, ನಾನು ನಿರಾಶ್ರಿತಳಾಗಿದ್ದೇನೆ ಎಂದು ಉರ್ಫಿ ಟ್ವೀಟ್ ಮೂಲಕ ತನ್ನ ನೋವನ್ನು ಹಂಚಿಕೊಂಡಿದ್ದಾರೆ.

ಇನ್ನೂ ಉರ್ಫಿ ಏನೆ ಮಾಡಿದರೂ ಕ್ಷಣದಲ್ಲೆ ವೈರಲ್ ಆಗುತ್ತಿರುತ್ತದೆ. ಜೊತೆಗೆ ಆಕೆಯನ್ನು ಸಿಕ್ಕಾಪಟ್ಟೆ ಟ್ರೋಲ್ ಸಹ ಮಾಡುತ್ತಿರುತ್ತಾರೆ. ಇನ್ನೂ ಉರ್ಫಿ ಹಂಚಿಕೊಂಡ ಈ ಟ್ವೀಟ್ ಗೆ ಕೆಲವರು ಸಹಾನೂಭೂತಿ ತೋರುತ್ತಿದ್ದಾರೆ. ಮತ್ತೆ ಕೆಲವರು ಮೊದಲು ವಿಚಿತ್ರ ಬಟ್ಟೆಯನ್ನು ಹಾಕುವುದನ್ನು ಬಿಡು ಎಲ್ಲ ಸರಿಹೋಗುತ್ತದೆ ಎಂದು ಬುದ್ದಿವಾದ ಸಹ ಕೇಳುತ್ತಿದ್ದಾರೆ.

Most Popular

To Top