13 ವರ್ಷದಿಂದ ತನ್ನ ಕ್ಲಾಸ್ ಮೇಟ್ ಜೊತೆಗೆ ಪ್ರೀತಿಯಲ್ಲಿದ್ದಾರಂತೆ ಕೀರ್ತಿ ಸುರೇಶ್, ವೈರಲ್ ಆಯ್ತು ರೂಮರ್…!

Follow Us :

ನಟಿ ಕೀರ್ತಿ ಸುರೇಶ್ ಗೆ ಸೌತ್ ಸಿನಿರಂಗದಲ್ಲಿ ತುಂಬಾನೆ ಕ್ರೇಜ್ ಇದೆ. ಈ ಹಿಂದೆ ಹೋಮ್ಲಿ ಬ್ಯೂಟಿಯಾಗಿ ಕ್ರೇಜ್ ಪಡೆದುಕೊಂಡ ಕೀರ್ತಿ, ಇತ್ತಿಚಿಗೆ ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರ್‍ ಡೋಸ್ ಸಹ ಏರಿಸಿದ್ದಾರೆ. ನಟನೆಯ ಜೊತೆಗೆ ಸೌಂದರ್ಯವನ್ನು ಸಹ ಹೊಂದಿರುವ ನಟಿ ಕೀರ್ತಿ ಸಿನಿರಂಗದಲ್ಲಿ ಬೇಡಿಕೆಯಿರುವಂತಹ ನಟಿಯಾಗಿದ್ದಾರೆ. ಇನ್ನೂ ಇತ್ತೀಚಿಗೆ ಕೀರ್ತಿ ಸುರೇಶ್ ರವರ ಬಗ್ಗೆ ಅನೇಕ ರೂಮರ್‍ ಗಳು ಕೇಳಿಬರುತ್ತಿವೆ. ಇದೀಗ ಆಕೆ ಕ್ಲಾಸ್ ಮೇಟ್ ನನ್ನು ಪ್ರೀತಿಸಿ ಆತನನ್ನೇ ಮದುವೆಯಾಗಲಿದ್ದಾರೆ ಎಂಬ ರೂಮರ್‍ ಸಖತ್ ವೈರಲ್ ಆಗುತ್ತಿದೆ.

ಮಲಯಾಳಂ ಮೂಲದ ನಟಿ ಕೀರ್ತಿ ಸುರೇಶ್ ಅನೇಕ ಸಿನೆಮಾಗಳ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡ ನಟಿಯಾಗಿದ್ದಾರೆ. ಸಿನಿರಂಗದಲ್ಲಿ ಸಾಕಷ್ಟು ಸೋಲುಗಳನ್ನು ಕಂಡರೂ ಸಹ ಎದೆಗುಂದದೇ ತಮ್ಮ ಪ್ರಯತ್ನವನ್ನು ಮುಂದುವರೆಸಿ ಸಾಧನೆ ಮಾಡಿದ್ದಾರೆ. ಇನ್ನೂ ಇತ್ತೀಚಿಗೆ ಆಕೆಯ ಮೇಲಿನ ರೂಮರ್‍ ಗಳು ಜೋರಾಗಿ ಹರಿದಾಡುತ್ತಿವೆ. ಈ ಹಿಂದೆ ಖ್ಯಾತ ಮ್ಯೂಸಿಕ್ ಡೈರೆಕ್ಟರ್‍ ಅನಿರುದ್ ಜೊತೆಗೆ ಲವ್ವಿ ಡವ್ವಿ ನಡೆಸುತ್ತಿದ್ದಾರೆ ಎಂದು ಕೇಳಿಬಂದಿತ್ತು. ಇದಿಗ ತಮಿಳು ಸ್ಟಾರ್‍ ನಟ ವಿಜಯ್ ಜೊತೆಗೆ ಅಪೈರ್‍ ನಡೆಯುತ್ತಿದೆ. ಈ ವಿಚಾರ ತಿಳಿದ ವಿಜಯ್ ಪತ್ನಿ ಸಂಗೀತ ಆತನಿಂದ ವಿಚ್ಚೇದನ ಪಡೆದುಕೊಳ್ಳುತ್ತಿದ್ದಾರೆ. ಕೀರ್ತಿ ಸುರೇಶ್ ರನ್ನು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಇದೀಗ ಕೀರ್ತಿ ಸುರೇಶ್ ಬಗ್ಗೆ ಮತ್ತೊಂದು ಸುದ್ದಿ ವೈರಲ್ ಆಗುತ್ತಿದೆ.

ನಟಿ ಕೀರ್ತಿ ಸುರೇಶ್ ಸುಮಾರು ಹದಿಮೂರು ವರ್ಷಗಳಿಂದ ತನ್ನ ಬಾಲ್ಯದ ಕ್ಲಾಸ್ ಮೇಟ್ ಒಬ್ಬರನ್ನು ಪ್ರೀತಿಸುತ್ತಿದ್ದಾರಂತೆ. ಆ ಕ್ಲಾಸ್ ಮೇಟ್ ಕೇರಳ ಮೂಲದ ದೊಡ್ಡ ಉದ್ಯಮಿಯಂತೆ. ಇನ್ನೂ ಅವರಿಬ್ಬರ ಬಗ್ಗೆ ಎರಡೂ ಕುಟುಂಬಗಳಿಗೂ ತಿಳಿದಿದೆಯಂತೆ. ಶೀಘ್ರದಲ್ಲೇ ಈ ಜೋಡಿಯ ಮದುವೆ ಸಹ ನಡೆಯಲಿದ್ದು, ಶೀಘ್ರದಲ್ಲೇ ಅಧಿಕಾರಯುತವಾಗಿ ಪ್ರಕಟನೆ ಸಹ ಹೊರಬರಲಿದೆ ಎನ್ನಲಾಗುತ್ತಿದ್ದು, ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನೂ ಈ ಸುದ್ದಿ ಎಷ್ಟರ ಮಟ್ಟಿಗೆ ನಿಜವೋ ಸುಳ್ಳೋ ತಿಳಿಯದು, ಆದರೆ ಸುದ್ದಿ ಮಾತ್ರ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನೂ ಸಿನಿಮಾಗಳಲ್ಲಿ ಕೀರ್ತಿ ಬ್ಯುಸಿಯಾಗಿದ್ದಾರೆ. ಸರ್ಕಾರು ವಾರಿ ಪಾಟ ಸಿನೆಮಾದ ಬಳಿಕ ಆಕೆಗೆ ಮತಷ್ಟು ಅವಕಾಶಗಳು ಹರಿದು ಬರುತ್ತಿವೆ ಎನ್ನಲಾಗಿದೆ.

ಇನ್ನೂ ಕೀರ್ತಿ ಸುರೇಸ್ ಮೆಗಾಸ್ಟಾರ್‍ ಚಿರಂಜೀವಿ ಅಭಿನಯಿಸುತ್ತಿರುವ ಭೋಳಾಶಂಕರ್‍ ಸಿನೆಮಾದಲ್ಲಿ ಚಿರಂಜೀವಿಯವರಿಗೆ ತಂಗಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನೂ ನಾನಿ ಅಭಿನಯದ ದಸರಾ ಸಿನೆಮಾದಲ್ಲೂ ಸಹ ಕೀರ್ತಿ ಸುರೇಶ್ ನಾನಿಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ಇನ್ನೂ ಜಯಂ ರವಿ ಜೊತೆಗೆ ಸೈರನ್ ಎಂಬ ತಮಿಳು ಸಿನೆಮಾ ಸೇರಿದಂತೆ ಆಕೆ ಮತಷ್ಟು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ.