ನಿಹಾರಿಕಾ ಸ್ನೇಹಿತೆಯನ್ನೇ ಮದುವೆಯಾಗಲಿದ್ದಾರಂತೆ ನಿಹಾರಿಕಾ ಮಾಜಿ ಪತಿ ಚೈತನ್ಯ, ವೈರಲ್ ಆದ ಸುದ್ದಿ…….!

Follow Us :

ಇತ್ತೀಚಿಗಷ್ಟೆ ತೆಲುಗು ಮೆಗಾ ಕುಟುಂಬದ ನಿಹಾರಿಕಾ ಕೊಣಿದೆಲಾ ವಿಚ್ಚೇದನ ಪಡೆದುಕೊಂಡರು. ನಿಹಾರಿಕಾ ಹಾಗೂ ಚೈತನ್ಯ ಜೊನ್ನಲಗಡ್ಡ ಇಬ್ಬರೂ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಚೇದನ ಪಡೆದುಕೊಂಡರು. ವಿಚ್ಚೇದನಕ್ಕೂ ಮುಂಚೆಯಿಂದಲೇ ನಿಹಾರಿಕಾ ಪತಿಯಿಂದ ದೂರವೇ ಇದ್ದರು. ನಿಹಾರಿಕಾ ಒಂದಲ್ಲ ಒಂದು ರೀತಿಯಲ್ಲಿ ಸದಾ ಸುದ್ದಿಯಾಗಿಯೇ ಇದ್ದಾರೆ. ಸದ್ಯ ಚೈತನ್ಯ ಜೊನ್ನಲಗಡ್ಡ ನಿಹಾರಿಕಾ ಸ್ನೇಹಿತೆಯನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿಯೊಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಮೆಗಾ ಕುಟುಂಬದ ಏಕೈಕ ನಟಿ ನಿಹಾರಿಕಾ ಮೊದಲಿಗೆ ಆಂಕರ್‍ ಆಗಿ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು. ಬಳಿಕ ನಟಿಯಾಗಿ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದ್ದರು.  ಆದರೆ ಆಕೆ ಅಂದುಕೊಂಡಷ್ಟು ಸಕ್ಸಸ್ ಕಾಣಲಿಲ್ಲ ಎಂದೇ ಹೇಳಬಹುದು. ಬಳಿಕ ಆಕೆಗೆ ಚೈತನ್ಯ ಜೊನ್ನಲಗಡ್ಡ ಎಂಬಾತನೊಂದಿಗೆ ಮದುವೆ ಮಾಡಿಕೊಟ್ಟರು. ಈ ಮದುವೆ ರಾಜಸ್ಥಾನದಲ್ಲಿ ಅದ್ದೂರಿಯಾಗಿ ನೆರವೇರಿತು. ಮದುವೆಯಾದ ಬಳಿಕ ಇಬ್ಬರೂ ಸಂತೋಷದಿಂದ ಜೀವನ ಸಾಗಿಸುತ್ತಿದ್ದರು. ಆದರೆ ಕೆಲವೊಂದು ವಿಬೇದಗಳ ಕಾರಣದಿಂದ ಮದುವೆಯಾದ ಎರಡು ವರ್ಷದಲ್ಲೇ ವಿಚ್ಚೇದನ ಪಡೆದುಕೊಂಡು ಬೇರೆಯಾದರು. ಅವರ ವಿಚ್ಚೇದನಕ್ಕೆ ನಿಖರವಾದ ಕಾರಣ ಏನು ಎಂಬುದು ಮಾತ್ರ ರಿವೀಲ್ ಆಗಿಲ್ಲ. ಸದ್ಯ ವಿಚ್ಚೇದನ ಪಡೆದುಕೊಂಡ ಬಳಿಕ ಇಬ್ಬರೂ ಅವರವರ ಕೆರಿಯರ್‍ ಮೇಲೆ ಪೋಕಸ್ ಇಟ್ಟಿದ್ದಾರೆ.

ಇನ್ನೂ ನಿಹಾರಿಕಾ ಸಿನೆಮಾಗಳಲ್ಲಿ ಮತ್ತೆ ಸಕ್ರೀಯರಾಗಿದ್ದಾರೆ. ನಟಿಯಾಗಿ ನಿರ್ಮಾಪಕಿಯಾಗಿಯೂ ಸಹ ಕೆರಿಯರ್‍ ಪುನಃ ಆರಂಭಿಸಿದ್ದಾರೆ. ಇದೀಗ ನಿಹಾರಿಕಾ ಮಾಜಿ ಪತಿ ಚೈತನ್ಯ ಬಗ್ಗೆ ಸುದ್ದಿಯೊಂದು ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಶೀಘ್ರದಲ್ಲೇ ಆತ ಎರಡನೇ ಮದುವೆಯಾಗಲಿದ್ದಾರೆ ಎನ್ನಲಾಗಿದೆ. ಆತ ಮದುವೆಯಾಗಲಿರೋದು ಬೇರೆ ಯಾರನ್ನೂ ಅಲ್ಲ, ನಿಹಾರಿಕಾ ಪ್ರಾಣ ಸ್ನೇಹಿತೆಯನ್ನಂತೆ. ಇನ್ನೂ ನಿಹಾರಿಕಾಗೆ ಆಕೆ ಅತ್ಯಂತ ತುಂಬಾ ಹತ್ತಿರದ ಸ್ನೇಹಿತೆಯಂತೆ. ಆಕೆ ನಿಹಾರಿಕಾ ಮದುವೆ ಸಂಭ್ರಮದಲ್ಲೂ ಸಹ ಭಾಗವಹಿಸಿದ್ದರಂತೆ. ಮದುವೆಯಾದ ಬಳಿಕ ನಿಹಾರಿಕಾ ತನ್ನ ಸ್ನೇಹಿತರನ್ನು ಚೈತನ್ಯಗೂ ಸಹ ಪರಿಚಯ ಮಾಡಿಸಿದ್ದರಂತೆ. ಅಂದಿನಿಂದ ಚೈತನ್ಯ ಹಾಗೂ ನಿಹಾರಿಕಾ ಸ್ನೇಹಿತೆಯ ನಡುವೆ ಪರಿಚಯ ಸಹ ಇದೆ ಎಂದು ಹೇಳಲಾಗಿದೆ.

ಸದ್ಯ ನಿಹಾರಿಕಾ ಸ್ನೇಹಿತೆಯನ್ನು ಚೈತನ್ಯ ಮದುವೆಯಾಗಲು ನಿರ್ಣಯ ತೆಗೆದುಕೊಂಡಿದ್ದಾರಂತೆ. ಆದರೆ ಆಕೆ ಸಿನೆಮಾ ರಂಗಕ್ಕೆ ಸೇರಿದ ಕುಟುಂಬದವಳಲ್ಲ ಎನ್ನಲಾಗಿದೆ. ಆದರೆ ನಿಹಾರಿಕಾಗೆ ಹತ್ತಿರದ ಸ್ನೇಹಿತೆ ಎಂದು ಹೇಳಲಾಗಿದೆ. ಸದ್ಯ ಈ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಮಾತ್ರ ಲಭ್ಯವಿಲ್ಲ ಎನ್ನಲಾಗಿದೆ.