ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮಿಗಳಿಗೆ ಭಾರತ ರತ್ನ ಕೊಡುವಂತೆ ಕರ್ನಾಟಕ ಸಿಎಂ ಹಾಗೂ ಡಿಸಿಎಂ ಆಗ್ರಹ….!

Follow Us :

ಬಿಜೆಪಿ ಪಕ್ಷದ ಹಿರಿಯ ನಾಯಕ ಬಿಜೆಪಿ ಭೀಷ್ಮ ಎಂದೇ ಕರೆಯಲಾಗುವ ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿರವರಿಗೆ ಭಾರತ ರತ್ನ ನೀಡಿ ಗೌರವಿಸಲಾಗಿದೆ. ದೇಶದ ಅತ್ಯುನ್ನತ ನಾಗರೀಕ ಗೌರವಕ್ಕೆ ಅರ್ಹ ವ್ಯಕ್ತಿಯನ್ನು ಆಯ್ಕೆ ಮಾಡಲಾಗಿದೆ ಎಂದು ಬಿಜೆಪಿ ನಾಯಕರು ಸಂಭ್ರಮಿಸುತ್ತಿದ್ದಾರೆ. ವಿರೋಧ ಪಕ್ಷದ ನಾಯಕರು ಸಹ ಸ್ವಾಗತಿಸಿದ್ದಾರೆ. ಈ ನಡುವೆ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರಿಗೂ ಭಾರತ ರತ್ನ ನೀಡುವಂತೆ ಕರ್ನಾಟಕ ರಾಜ್ಯದ ಸಿಎಂ ಹಾಗೂ ಡಿಸಿಎಂ ಆಗ್ರಹಿಸಿದ್ದಾರೆ.

ಮಾಜಿ ಉಪಪ್ರಧಾನಿ ಎಲ್.ಕೆ.ಅಡ್ವಾನಿಯವರಿಗೆ ಭಾರತ ರತ್ನ ನೀಡಿರುವ ಬಗ್ಗೆ ಕರ್ನಾಟಕ ಸಿಎಂ ಸಿದ್ದರಾಮಯ್ಯ ಸಹ ರಿಯಾಕ್ಟ್ ಆಗಿದ್ದಾರೆ. ಅಡ್ವಾಣಿಯವರಿಗೆ ಭಾರತ ರತ್ನ ಕೊಡಲಿ ಪಾಪ ಬೇಡ ಎಂದು ಹೇಳಿದವರು ಯಾರು, ಆದರೆ ನಾವು ಸಿದ್ದಗಂಗ ಮಂಠದ ಶಿವಕುಮಾರ ಸ್ವಾಮೀಜಿಗಳಿಗೂ ಭಾರತ ರತ್ನ ನೀಡಿ ಅಂತ ಪತ್ರ ಬರೆದಿದ್ದೆ. ಆದರೆ ಕೊಟ್ಟಿಲ್ಲ ಅಂತ ಸಿಎಂ ಬೇಸರ ವ್ಯಕ್ತಪಡಿಸಿದ್ದಾರೆ. ಜೊತೆಗೆ ಡಿಸಿಎಂ ಡಿ.ಕೆ.ಶಿವಕುಮಾರ್‍ ಸಹ ಪ್ರತಿಕ್ರಿಯಿಸಿದ್ದಾರೆ. ಅಡ್ವಾಣಿಯವರು ನಮ್ಮ ದೇಶದ ಹಿರಿಯ ರಾಜಕಾರಣಿ, ಅವರಿಗೆ ಭಾರತ ರತ್ನ ನೀಡಬೇಕು ಎಂದು ಕೇಂದ್ರ ಸರ್ಕಾರ ತೀರ್ಮಾನ ತೆಗೆದುಕೊಂಡಿದ್ದು, ಅದಕ್ಕೆ ನಮ್ಮ ತಕರಾರಿಲ್ಲ. ಆದರೆ  ತುಮಕೂರಿನ ಸಿದ್ದಗಂಗಾ ಮಠದ ಡಾ.ಶಿವಕುಮಾರ್‍ ಸ್ವಾಮೀಜಿಯವರಿಗೂ ಸಹ ಭಾರತರತ್ನ ನೀಡಬೇಕಿತ್ತು. ಸಿದ್ದಗಂಗಾ ಶ್ರೀಗಳು ಅನ್ನದಾಸೋಹಕ್ಕೆ ಹೆಸರುವಾಸಿಯಾದವರು. ಅವರಿಗೂ ಗೌರವ ನೀಡಬೇಕು ಎನ್ನುವ ಒತ್ತಾಯ ಇದೆ. ನಮ್ಮ ಸರ್ಕಾರ ಸಹ ಶ್ರೀಗಳಿಗೆ ಭಾರತ ರತ್ನ ನೀಡಿ ಎಂದು ಪತ್ರ ಬರೆದಿತ್ತು ಎಂದು ಹೇಳಿದ್ದಾರೆ.

ಇನ್ನೂ ಬಿಜೆಪಿ ಭೀಷ್ಮ ಎಲ್.ಕೆ.ಅಡ್ವಾಣಿಯವರಿಗೆ ಭಾರತ ರತ್ನ ನೀಡಿರುವುದು ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಸೇರಿದಂತೆ ಅನೇಕರು ಸಂಭ್ರಮಿಸಿದ್ದಾರೆ. ಅಡ್ವಾಣಿಯವರಿಗೆ ಶುಭಾಷಯಗಳ ಸುರಿಮಳೆಗೈದಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಅಡ್ವಾಣಿಯವರಿಗೆ ಹೂ ಗುಚ್ಚ ನೀಡಿ ಭೇಟಿ ನೀಡಿದ್ದರು. ರಾಷ್ಟ್ರಪತಿ ದ್ರೌಪದಿ ಮುರ್ಮು ರವರೂ ಸಹ ಅಡ್ವಾಣಿಯವರನ್ನು ಅಭಿನಂದಿಸಿದ್ದಾರೆ.