Film News

ನಿವೇದಿತಾ ಅಂಡ್ ಚಂದನ್ ಪೋಷಕರಾಗಲಿದ್ದಾರೆ, ಗುಡ್ ನ್ಯೂಸ್ ಕೊಟ್ಟ ಜೋಡಿ…!

ಚಂದನವನದಲ್ಲಿ ಕ್ಯೂಟ್ ಕಪಲ್ ಆಗಿ ತುಂಬಾನೆ ಗಮನ ಸೆಳೆದ ಜೋಡಿಯಲ್ಲಿ ನಿವೇದಿತಾ ಹಾಗೂ ಚಂದನ್ ಶೆಟ್ಟಿ ಸಹ ಒಂದಾಗಿದೆ. ಇವರಿಬ್ಬರೂ ಸೋಷಿಯಲ್ ಮಿಡಿಯಾದಲ್ಲಿ ಜೋರಾಗಿಯೇ ಸದ್ದು ಮಾಡುತ್ತಿರುತ್ತಾರೆ. ಸದಾ ಇನ್ಸ್ಟಾಗ್ರಾಂ ನಲ್ಲಿ ಆಕೆಯ ಅಪ್ಡೇಟ್ ಪ್ರತಿನಿತ್ಯ ಇದ್ದೇ ಇರುತ್ತದೆ. ನಿವೇದಿತಾ ಹಾಗೂ ಚಂದನ್ ಬಿಗ್ ಬಾಸ್ ಮೂಲಕ ಎಲ್ಲರಿಗೂ ಪರಿಚಿತರಾದರು. ಮದುವೆಯಾಗಿ ಸುಮಾರು ತಿಂಗಳುಗಳ ಬಳಿಕ ನಿವೇದಿತಾ ಗುಡ್ ನ್ಯೂಸ್ ಕೊಟ್ಟಿದ್ದಾರೆ.  ಈ ಕ್ರೇಜಿ ಜೋಡಿ ಶೀಘ್ರದಲ್ಲೆ ಮೊದಲ ಮಗುವನ್ನು ಪಡೆದುಕೊಳ್ಳಲಿದ್ದಾರೆ.

ಖ್ಯಾತ ಗಾಯಕ ಚಂದನ್ ಶೆಟ್ಟಿ ಹಾಗೂ ಕಿರುತೆರೆ ನಟಿ ನಿವೇದಿತಾ ಗೌಡ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ವಿಡಿಯೋ ಮೂಲಕ ರಿವೀಲ್ ಮಾಡಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ಈ ಜೋಡಿ ಸ್ಪೇಷಲ್ ವಿಡಿಯೋ ಮೂಲಕ ತಾವು ಮಗುವನ್ನು ಪಡೆದುಕೊಳ್ಳುತ್ತಿರುವ ಬಗ್ಗೆ ಸುದ್ದಿ ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ. ಈ ಹಿಂದೆ ಅನೇಕ ಬಾರಿ ನಿವೇದಿತಾಗೆ ತಾವು ಎಂದು ತಾಯಿಯಾಗುವುದು ಎಂದು ಕೇಳುತ್ತಲೇ ಇದ್ದರು. ಆ ಪ್ರಶ್ನೆಗೆ ಇದಿಗ ನಿವಿ ಉತ್ತರ ನೀಡಿದ್ದಾರೆ. ಇನ್ನೂ ತನ್ನ ಇನ್ಸ್ಟಾ ಖಾತೆಯ ಮೂಲಕ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ನೋಡಿದ ನಿವಿ ಅಭಿಮಾನಿಗಳು ಖುಷಿಯಾಗಿದ್ದು, ಶುಭಾಷಯಗಳನ್ನು ಸಹ ಕೋರುತ್ತಿದ್ದಾರೆ.

ಇನ್ನೂ ನಿವಿ ಹಂಚಿಕೊಂಡ ವಿಡಿಯೋದಲ್ಲಿ Fat+her ಎಂದರೇ ಏನು ಎಂದು ನಿವೇದಿತಾಗೆ ಚಂದನ್ ಶೆಟ್ಟಿ ಕೇಳಿದ್ದಾರೆ. ಅದಕ್ಕೆ ಫಾದರ್‍ ಎಂದು ಉತ್ತರವಾಗಿದ್ದು, ಅಭಿಮಾನಿಗಳು ನಿವಿ ತಾಯಿಯಾಗುತ್ತಿದ್ದಾರೆ ಎಂದು ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಇನ್ನೂ ಅಭಿಮಾನಿಗಳೂ ಸಹ ಈ ಜೋಡಿಗೆ ಶುಭಾಷಯಗಳನ್ನು ಹರಿಬಿಡುತ್ತಿದ್ದಾರೆ. ಇನ್ನೂ ಕಿರುತೆರೆಯ ನಟಿಯರಲ್ಲಿ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿರುವವರಲ್ಲಿ ನಿವೇದಿತಾ ಟಾಪ್ ಸ್ಥಾನದಲ್ಲಿರುತ್ತಾರೆ. ನಿವೇದಿತಾ ಹಾಗೂ ಚಂದನ್ ಇಬ್ಬರೂ  ಅನೇಕ ರೀಲ್ಸ್ ಗಳನ್ನು ಮಾಡುತ್ತಿರುತ್ತಾರೆ. ಜೊತೆಗೆ ನಿವೇದಿತಾ ಸ್ವಂತ ಯೂಟ್ಯೂಬ್ ಚಾನಲ್ ಸಹ ಹೊಂದಿದ್ದು, ಅದರಲ್ಲೂ ಸಹ ಅನೇಕ ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳಿಗೆ ಹತ್ತಿರವಾಗಿರುತ್ತಾರೆ.  ಇದೀಗ ನಿವಿ ಹಂಚಿಕೊಂಡ ಹೊಸ ವಿಡಿಯೋ ಎಲ್ಲಾ ಕಡೆ ವೈರಲ್ ಆಗುತ್ತಿದೆ. ಆದರೆ ಇದೊಂದು ಫನ್ನಿ ವಿಡಿಯೋ ಎಂದು ಸಹ ಕ್ಯಾಪ್ಷನ್ ಹಾಕಿದ್ದಾರೆ.

ಇನ್ನೂ ನಿವೇದಿತಾ ಹಂಚಿಕೊಂಡ ಕೆಲವೊಂದು ವಿಡಿಯೋಗಳ ಕಾರಣದಿಂದ ಆಕೆಯನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿರುತ್ತಾರೆ. ಆದರೆ ಅದ್ಯಾವುದಕ್ಕೂ ಆಕೆ ತಲೆಗೆಡಿಸಿಕೊಳ್ಳದೇ ತನ್ನ ಕೆಲಸ ತಾನು ಎಂಬಂತೆ ಸಾಗುತ್ತಿದ್ದಾರೆ. ಇನ್ನೂ ಇನ್ನೂ ಶೀಘ್ರದಲ್ಲೇ ಈಕೆ ತೆಲುಗು ಸಿನೆಮಾದ ಮೂಲಕ ಬೆಳ್ಳಿತೆರೆಗೂ ಸಹ ಪರಿಚಯವಾಗಲಿದ್ದಾರೆ.

Most Popular

To Top