Film News

ಆ ಯೂಟ್ಯೂಬರ್ ಜೊತೆಗೆ ಡೇಟಿಂಗ್ ನಲ್ಲಿದ್ದಾರೆಯೇ ನಿಹಾರಿಕಾ ಕೊಣಿದೆಲಾ, ವೈರಲ್ ಆದ ಪೊಟೋ….!

ಇತ್ತೀಚಿಗಷ್ಟೆ ತೆಲುಗು ಮೆಗಾ ಕುಟುಂಬದ ನಿಹಾರಿಕಾ ಕೊಣಿದೆಲಾ ವಿಚ್ಚೇದನ ಪಡೆದುಕೊಂಡರು. ನಿಹಾರಿಕಾ ಹಾಗೂ ಚೈತನ್ಯ ಜೊನ್ನಲಗಡ್ಡ ಇಬ್ಬರೂ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಚೇದನ ಪಡೆದುಕೊಂಡರು. ವಿಚ್ಚೇದನಕ್ಕೂ ಮುಂಚೆಯಿಂದಲೇ ನಿಹಾರಿಕಾ ಪತಿಯಿಂದ ದೂರವೇ ಇದ್ದರು. ನಿಹಾರಿಕಾ ಒಂದಲ್ಲ ಒಂದು ರೀತಿಯಲ್ಲಿ ಸದಾ ಸುದ್ದಿಯಾಗಿಯೇ ಇದ್ದಾರೆ. ಜೊತೆಗೆ ವೇಕೇಷನ್ ಗಳಿಗೆ ಹಾರುತ್ತಾ ಹಾಟ್ ಪೊಟೋಶೂಟ್ಸ್ ಸಹ ಹಂಚಿಕೊಂಡು ಎಲ್ಲರನ್ನೂ ಶಾಕ್ ಆಗಿವಂತೆ ಮಾಡುತ್ತಿದ್ದಾರೆ. ಇದೀಗ ನಿಹಾರಿಕಾ ಯೂಟ್ಯೂಬರ್‍ ಒಬ್ಬರ ಜೊತೆಗೆ ಡೇಟಿಂಗ್ ನಲ್ಲಿದ್ದಾರೆಂಬ ರೂಮರ್‍ ಒಂದು ವೈರಲ್ ಆಗುತ್ತಿದೆ.

ಮೆಗಾ ಕುಟುಂಬದ ಏಕೈಕ ನಟಿ ನಿಹಾರಿಕಾ ಕೊಣಿದೆಲಾ ಸಿನೆಮಾಗಳಲ್ಲಿ ಎಂಟ್ರಿ ಕೊಟ್ಟು ನಟಿಯಾಗಿ ಕೆಲವೊಂದು ಸಿನೆಮಾಗಳಲ್ಲಿ ಕಾಣಿಸಿಕೊಂಡರೂ ಸಹ ಆಕೆ ಅಂದುಕೊಂಡಷ್ಟು ಸಕ್ಸಸ್ ಕಾಣದೆ ವಿಫಲರಾದರು. ಬಳಿಕ ವೆಬ್ ಸಿರೀಸ್ ಹಾಗೂ ನಿರ್ಮಾಣದತ್ತ ಮುಖ ಮಾಡಿದರು. ಇನ್ನೂ ಆಕೆ ಸಿನೆಮಾಗಳಲ್ಲಿ ಟ್ರೆಡಿಷನಲ್ ಆಗಿಯೇ ಕಾಣಿಸಿಕೊಂಡಿದ್ದರು. ಇನ್ನೂ ಕೆಲವು ದಿನಗಳಿಂದ ನಿಹಾರಿಕಾಗೆ ಸಂಬಂಧಿಸಿದ ವೈಯುಕ್ತಿಕ ವಿಚಾರಗಳು ಸಖತ್ ವೈರಲ್ ಆಗುತ್ತಿವೆ. ಕೆರಿಯರ್‍ ಮೇಲೆ ಸಂಪೂರ್ಣ ಪೋಕಸ್ ಇಟ್ಟಿರುವ ಆಕೆ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಇದೀಗ ಆಕೆ ಖ್ಯಾತ ಯೂಟ್ಯೂಬರ್‍ ನಿಖಿಲ್ ಎಂಬಾತನೊಂದಿಗೆ ಲವ್ ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಆತನೊಂದಿಗೆ ಕ್ಲೋಜ್ ಆಗಿರುವ ಪೊಟೋ ಒಂದನ್ನು ಹಂಚಿಕೊಂಡಿದ್ದು, ರೂಮರ್‍ ವೈರಲ್ ಆಗುತ್ತಿದೆ.

ಖ್ಯಾತ ಯುಟ್ಯೂಬರ್‍ ನಿಖಿಲ್ ಅನೇಕ ಫೇಮಸ್ ಇಂಟರ್‍ ವ್ಯೂ ಗಳ ಮೂಲಕ ಫೇಮಸ್ ಆಗಿದ್ದಾರೆ. ಆತನೊಂದಿಗೆ ನಿಹಾರಿಕಾ ತುಂಬಾ ಹತ್ತಿರವಾಗಿದ್ದಾರೆ. ಈ ಹಿಂದೆ ಇಬ್ಬರೂ ಜೊತೆಯಾಗಿ ಕೆಲವೊಂದು ಸಂದರ್ಶನಗಳನ್ನು ಸಹ ಮಾಡಿದ್ದಾರೆ. ಈ ಹಿಂದೆ ತೆಲುಗಿನ ಖ್ಯಾತ ನಟ ಆಲಿ ಕಾರ್ಯಕ್ರಮದಲ್ಲಿ ಸಹ ಅವರಿಬ್ಬರೂ ಹೇಗೆಲ್ಲಾ ಎಂಜಾಯ್ ಮಾಡುತ್ತಿದ್ದೆವು ಎಂದು ಹೇಳಿದ್ದರು. ಇನ್ನೂ ಕೆಲವು ದಿನಗಳ ಹಿಂದೆಯಷ್ಟೆ ನಿಖಿಲ್ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ನಿಖಿಲ್ ಹುಟ್ಟುಹಬ್ಬದ ನಿಮಿತ್ತ ನಿಹಾರಿಕಾ ಆತನಿಗೆ ವಿಶ್ ಮಾಡಿದ್ದರು. ಕ್ಲೋಜ್ ಆಗಿರುವ ಪೊಟೋ ಒಂದನ್ನು ಹಂಚಿಕೊಂಡು ವಿಶ್ ಮಾಡಿದ್ದು, ಅವರಿಬ್ಬರ ನಡುವೆ ಡೇಟಿಂಗ್ ನಡೆಯುತ್ತಿದೆ ಎಂಬ ರೂಮರ್‍ ಹರಿದಾಡುತ್ತಿದೆ.

ಇನ್ನೂ ನಿಹಾರಿಕಾ ಸದ್ಯ ಸಿನೆಮಾಗಳ ಮೇಲೆ ಪುಲ್ ಪೋಕಸ್ ಇಟ್ಟಿದ್ದಾರೆ. ಜೊತೆಗೆ ತನ್ನ ಪಿಂಕ್ ಎಲಿಫೆಂಟಾ ಸಂಸ್ಥೆಯನ್ನು ಮತ್ತೆ ಶುರು ಮಾಡಿದ್ದಾರೆ. ಅದರ ಮೂಲಕ ಸಿನೆಮಾಗಳು ಹಾಗೂ ವೆಬ್ ಸಿರೀಸ್ ಗಳನ್ನು ನಿರ್ಮಾಣ ಮಾಡಲು ತೀರ್ಮಾನ ತೆಗೆದುಕೊಂಡಿದ್ದಾರೆ. ಇತ್ತಿಚಿಗಷ್ಟೆ ಆಕೆ ಡೆಡ್ ಪಿಕ್ಸೆಲ್ಸ್ ಎಂಬ ವೆಬ್ ಸಿರೀಸ್ ನಲ್ಲಿ ಕಾಣಿಸಿಕೊಂಡಿದ್ದರು.

Most Popular

To Top