ಆ ದೃಶ್ಯ ನೋಡಿದ್ರೇ ಈಗಲೂ ಭಯ ಆಗುತ್ತೆ ಎಂದ ಸದಾ, ಆ ಸೀನ್ ನನ್ನ ಕೈಯಲ್ಲಿ ಬಲವಂತವಾಗಿ ಮಾಡಿಸಿದ್ರು ಎಂದ ನಟಿ….!

Follow Us :

ಸಿನಿರಂಗದಲ್ಲಿ ಮಹಿಳಾ ಕಲಾವಿದರು, ನಟಿಯರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಅದರಲ್ಲೂ ಅನೇಕರು ಅವರ ಕೆರಿಯರ್‍ ನಲ್ಲಿ ಲೈಂಗಿಕ ಕಿರುಕುಳದಂತಹ ಸಮಸ್ಯೆಗಳನ್ನು ಸಹ ಎದುರಿಸಿದ್ದು, ಅನೇಕ ಬಾರಿ ಈ ಬಗ್ಗೆ ಕೆಲ ನಟಿಯರು ಹೇಳಿಕೊಂಡಿದ್ದಾರೆ. ಜೊತೆಗೆ ಕೆಲವೊಂದು ದೃಶ್ಯಗಳಲ್ಲಿ ನಟಿಸಲು ಇಷ್ಟವಿಲ್ಲದೇ ಇದ್ದರು ನಟಿಸಬೇಕಾದ ಕಷ್ಟಗಳನ್ನು ಸಹ ಎದುರಿಸುತ್ತಿದ್ದಾರೆ. ಇದೀಗ ಸೀನಿಯರ್‍ ನಟಿ ಸದಾ ಸಹ ಅಂತಹುದೇ ಸಮಸ್ಯೆಯನ್ನು ಎದುರಿಸಿದ್ದರಂತೆ. ಈ ಬಗ್ಗೆ ಸದಾ ನೀಡಿದ ಹೇಳಿಕೆಗಳು ವೈರಲ್ ಆಗುತ್ತಿವೆ.

ಸೌತ್ ಸಿನಿರಂಗದಲ್ಲಿ ಕೆಲವು ವರ್ಷಗಳ ಕಾಲ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದ ನಟಿಯರಲ್ಲಿ ಸದಾ ಸಹ ಒಬ್ಬರಾಗಿದ್ದಾರೆ.. ತೆಲುಗಿನ ಖ್ಯಾತ ನಿರ್ದೇಶಕ ತೇಜ ನಿರ್ದೇಶನದಲ್ಲಿ ಮೂಡಿಬಂದ ಜಯಂ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಜಯಂ ಸಿನೆಮಾದ ಮೂಲಕ ದೊಡ್ಡ ಕ್ರೇಜ್ ದಕ್ಕಿಸಿಕೊಂಡ ಸದಾಗೆ ಸಾಲು ಸಾಲು ಸಿನೆಮಾಗಳಲ್ಲಿ ನಟಿಸುವ ಅವಕಾಶಗಳನ್ನು ಗಿಟ್ಟಿಸಿಕೊಂಡರು. ಇದೀಗ ಸದಾ ಕೆಲವೊಂದು ಕಾಮೆಂಟ್ಸ್ ಮಾಡಿದ್ದು, ಆಕೆಯ ಕಾಮೆಂಟ್ ಗಳು ವೈರಲ್ ಆಗುತ್ತಿವೆ. ಸಿನೆಮಾ ಒಂದರಲ್ಲಿ ದೃಶ್ಯವೊಂದರಲ್ಲಿ ನಟಿಸಲು ನಿರ್ದೇಶಕ ಆಕೆಯ ಮೇಲೆ ಒತ್ತಡ ಹೇರಿದ್ದರಂತೆ. ಅಷ್ಟಕ್ಕೂ ಆ ನಿರ್ದೇಶಕ ಯಾರು, ಆ ಸಿನೆಮಾ ಯಾವುದು ಎಂಬ ವಿಚಾರಕ್ಕೆ ಬಂದರೇ,

ನಟಿ ಸದಾ ಗೆ ಬಿಗೆಸ್ಟ್ ಹಿಟ್ ಕೊಟ್ಟ ಸಿನೆಮಾ ಜಯಂ ಎಂದು ಹೇಳಬಹುದು. ಈ ಸಿನೆಮಾದ ಮೂಲಕ ಆಕೆ ಓವರ್‍ ನೈಟ್ ಸ್ಟಾರ್‍ ಆದರು. ಜಯಂ ಸಿನೆಮಾ ಇಂಡಸ್ಟ್ರಿ ಹಿಟ್ ಪಡೆದುಕೊಂಡು ಸದಾ ಸ್ಟಾರ್‍ ಆದರು. ಈ ಸಿನೆಮಾದಲ್ಲಿನ ಲವ್ ಸ್ಟೋರಿ ಅನೇಕರಿಗೆ ತುಂಬಾ ಹತ್ತಿರವಾಗಿದೆ. ಈ ಸಿನೆಮಾದಲ್ಲಿ ಯಂಗ್ ಹಿರೋ ನಿತಿನ್ ಸಿನೆಮಾದ ನಾಯಕನಾಗಿ, ನಟ ಗೋಪಿಚಂದ್ ವಿಲನ್ ಆಗಿ ನಟಿಸಿದ್ದರು. ಈ ಸಿನೆಮಾದ ದೃಶ್ಯವೊಂದರಲ್ಲಿ ಸದಾ ರನ್ನು ಗೋಪಿಚಂದ್ ನಾಲಿಗೆಯಿಂದ ಕೆನ್ನೆಯನ್ನು ನೆಕ್ಕುವ ದೃಶ್ಯ ಇರುತ್ತದೆ. ಈ ದೃಶ್ಯದಲ್ಲಿ ನಟಿಸಲು ಸದಾ ಹಿಂದೇಟು ಹಾಕಿದ್ದರಂತೆ. ಈ  ದೃಶ್ಯದಲ್ಲಿ ನಾನು ನಟಿಸುವುದಿಲ್ಲ. ಬೇಕಾದರೇ ನನ್ನನ್ನು ಸಿನೆಮಾದಿಂದ ತೆಗೆದು ಬಿಡಿ ಎಂದು ಸಹ ನಿರ್ದೇಶಕ ತೇಜ ರವರಲ್ಲಿ ಕೇಳಿಕೊಂಡಿದ್ದರಂತೆ. ಆದರೆ ತೇಜ ಮಾತ್ರ ಆಕೆಯ ಮಾತನ್ನು ಕೇಳದೇ ಈ ದೃಶ್ಯ ಮಾಡಿದರಷ್ಟೆ ಸಿನೆಮಾಗೆ ಹೈಲೈಟ್ ಆಗುತ್ತದೆ ಎಂದು ಒತ್ತಡ ಹೇರಿದ್ದರಂತೆ.

ಇನ್ನೂ ಸದಾ ಕಿರಿಕಿರಿ ಅನುಭವಿಸುತ್ತಿದ್ದನ್ನು ಕಂಡ ಗೋಪಿಚಂದ್ ಸಹ ಬಿಟ್ಟು ಬಿಡಿ ಸರ್‍ ಆಕೆ ತುಂಬಾ ಸಮಸ್ಯೆ ಪಡುತ್ತಿದ್ದಾರೆ ಎಂದು ಹೇಳಿದ್ದರಂತೆ. ಆದರೂ ಸಹ ತೇಜಾ ಕೇಳಿಲ್ಲವಂತೆ. ಬಳಿಕ ಸೆಟ್ ನಲ್ಲಿದ್ದ ಕೆಲವರು ಆಕೆಯನ್ನು ಒಪ್ಪಿಸಿ ನಟಿಸುವಂತೆ ಮಾಡಿದ್ದರಂತೆ. ಈ ದೃಶ್ಯದ ಶೂಟಿಂಗ್ ಬಳಿಕ ಸದಾ ಮನೆಗೆ ಹೋಗಿ ಬಿಕ್ಕಿ ಬಿಕ್ಕಿ ಅತ್ತಳಂತೆ. ಜೊತೆಗೆ ಹತ್ತು ಬಾರಿ ಮುಖ ತೊಳೆದುಕೊಂಡರಂತೆ. ಈ ದೃಶ್ಯ ನೋಡಿದರೇ ಈಗಲೂ ಸಹ ಆಕೆ ಭಯ ಪಟ್ಟು ದೃಶ್ಯವನ್ನು ಸ್ಕಿಪ್ ಮಾಡುತ್ತಾರಂತೆ. ಸದ್ಯ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.