ಕೋಲಾರದ ಅಂತರಗಂಗೆ ಬೆಟ್ಟದಲ್ಲಿ ಪಾಕಿಸ್ಥಾನ ಬಾವುಟ ಬಿಡಿಸಿದ ಪಾಪಿಗಳು…..!

Follow Us :

ಹಿಂದೂ ಧಾರ್ಮಿಕ ಹಾಗೂ ಐತಿಹಾಸಿಕ ಸ್ಥಳ ಅಂತರಗಂಗೆ ಬೆಟ್ಟದಲ್ಲಿ ಕೆಲ ದುಷ್ಕರ್ಮಿಗಳು ವಿವಾದ ಸೃಷ್ಟಿಸಿದ್ದಾರೆ. ಕೋಲಾರ ಜಿಲ್ಲೆಗೆ ಸೇರಿದ ಅಂತರಗಂಗೆ ಬೆಟ್ಟದ ದೊಡ್ಡ ಬಂಡೆಯ ಮೇಲೆ ಯಾರೋ ಕಿಡಿಗೇಡಿಗಳು ಪಾಕಿಸ್ಥಾನದ ಧ್ವಜ ಬಿಡಿಸಿ ಅದರ ಮೇಲೆ 786 ಎಂಬ ಸಂಖ್ಯೆಯನ್ನು ಬರೆದು ಕೆಲವೊಂದು ಬರಗಳನ್ನು ಉರ್ದು ಭಾಷೆಯಲ್ಲಿ ಬರೆದು ವಿವಾದ ಸೃಷ್ಟಿಸಿದ್ದಾರೆ.

ಕರ್ನಾಟಕದ ಕೋಲಾರ ಜಿಲ್ಲೆಯ ಅಂತರಗಂಗೆ ಬೆಟ್ಟ ತುಂಬಾನೆ ಪ್ರಾಮುಖ್ಯತೆ ಪಡೆದುಕೊಂಡಿದೆ. ಹಿಂದೂಗಳ ಪವಿತ್ರ ಸ್ಥಳ ಎಂದೇ ಕರೆಯಲಾಗುತ್ತದೆ. ಈ ಬೆಟ್ಟದಲ್ಲಿ ಶ್ರೀ ವಿಶ್ವನಾಥಸ್ವಾಮಿಯ ದೇವಾಲಯವಿದ್ದು, ದೇವಾಲಯದಲ್ಲಿರುವ ನಂದಿ ವಿಗ್ರಹದ ಬಾಯಲ್ಲಿ ಸದಾ ನೀರು ಬರುತ್ತಿರುತ್ತದೆ. ಈ ಎಲ್ಲಾ ಕಾರಣಗಳಿಂದ ಈ ಸ್ಥಳ ಹಿಂದೂಗಳಿಗೆ ಅತ್ಯಂತ ಪವಿತ್ರವಾದ ಸ್ಥಳವಾಗಿದೆ. ಇನ್ನೂ ಈ ಪ್ರದೇಶದ ಅರಣ್ಯ ಇಲಾಖೆ ವ್ಯಾಪ್ತಿಗೆ ಸೇರುತ್ತದೆ. ದೇವಾಲಯ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಇನ್ನೂ ಈ ಭಾಗದ ಬೃಹತ್ ಬಂಡೆಯ ಮೇಲೆ ಮುಸ್ಲೀಂರ ಹಾಗೂ ಭಾರತೀಯರ ವಿರೋಧಿ ದೇಶವಾದ ಪಾಕಿಸ್ಥಾನವನ್ನು ಹೋಲುವಂತಹ ಬಾವುಟದ ಚಿತ್ರವನ್ನು ಬಿಡಿಸಿ ವಿಕೃತಿ ಮೆರೆದಿದ್ದಾರೆ.

ಇನ್ನೂ ಅಂತರಗಂಗೆ ಬೃಹತ್ ಬಂಡೆಯ ಮೇಲೆ ಹಸಿರು ಹಾಗೂ ಬಿಳಿ ಬಣ್ಣ ಬಳಸಿ ಪಾಕಿಸ್ಥಾನದ ಧ್ವಜ ಬಿಡಿಸಿದ್ದಾರೆ. ಅದರ ಮೇಲೆ 786 ಎಂದು ಬರೆದು ಕೆಲವು ಉರ್ದು ಪದಗಳನ್ನು ಕೂಡ ಬರೆದಿದ್ದಾರೆ. ಇನ್ನೂ ಘಟನಾ ಸ್ಥಳಕ್ಕೆ ಕೋಲಾರದ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಮುಂದಿನ ಕ್ರಮ ತೆಗೆದುಕೊಂಡಿದ್ದು, ಈ ಧಾರ್ಮಿಕ ಶಾಂತಿ ಕದಡುವಂತಹ ಕೆಲಸ ಮಾಡಿದ ಕಿಡಿಗೇಡಿಗಳನ್ನು ಪತ್ತೆಹಚ್ಚಲು ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.