ವಿಚ್ಚೇದನದ ರೂಮರ್ ಗಳ ಸಮಯದಲ್ಲೇ ನಿಹಾರಿಕಾ ಆಸಕ್ತಿಕರವಾದ ಪೋಸ್ಟ್ ವೈರಲ್….!

Follow Us :

ಕಳೆದರಡು ದಿನಗಳಿಂದ ಮೆಗಾ ಕುಟುಂಬದ ನಾಗಬಾಬು ಪುತ್ರಿ ನಿಹಾರಿಕಾ ಹಾಗೂ ಚೈತನ್ಯ ವಿಚ್ಚೇದನದ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇನ್ನೂ ಅವರ ಸಂಸಾರವನ್ನು ಸರಿಪಡಿಸಲು ಚಿರಂಜೀವಿಯವರು ಮುಂದಾಗಿದ್ದಾರೆ ಎಂಬ ಸುದ್ದಿಯೂ ಸಹ ಕೇಳಿಬಂದಿದೆ. ಆದರೆ ಈ ಬಗ್ಗೆ ಮೆಗಾ ಕುಟುಂಬದ ಯಾರೂ ಸಹ ರಿಯಾಕ್ಟ್ ಆಗಿಲ್ಲ. ಇನ್ನೂ ಈ ರೂಮರ್‍ ಹರಿದಾಡುತ್ತಿರುವ ಸಮಯದಲ್ಲೇ ನಿಹಾರಿಕಾ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಪೋಸ್ಟ್ ವೈರಲ್ ಆಗುತ್ತಿದೆ. ಅಷ್ಟಕ್ಕೂ ನಿಹಾರಿಕಾ ಹಂಚಿಕೊಂಡ ಪೋಸ್ಟ್ ಏನು ಎಂಬ ವಿಚಾರಕ್ಕೆ ಬಂದರೇ,

ನಟಿ ಕಂ ನಿರ್ಮಾಪಕಿ ನಿಹಾರಿಕಾ ಕೊಣಿದೆಲಾ ಹಾಗೂ ಚೈತನ್ಯ ಜೊನ್ನಲಗಡ್ಡ ರವರ ವಿವಾಹ ಅದ್ದೂರಿಯಾಗಿ ಎರಡು ವರ್ಷಗಳ ಹಿಂದೆ ಅದ್ದೂರಿಯಾಗಿ ನೆರವೇರಿತ್ತು. ಮದುವೆಯಾದ ಎರಡು ವರ್ಷಗಳ ನಂತರ ಈ ಜೋಡಿಯ ನಡುವೆ ವಿಬೇದಗಳು ಸೃಷ್ಟಿಯಾಗಿ ಅವರು ವಿಚ್ಚೇದನಕ್ಕೆ ಮುಂದಾಗಿದ್ದಾರೆ ಎಂಬ ರೂಮರ್‍ ಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ. ಈ ರೂಮರ್‍ ಗಳು ಹರಿದಾಡುತ್ತಿರುವ ಸಮಯದಲ್ಲೇ ನಿಹಾರಿಕಾ ಒಂದು ಪೋಸ್ಟ್ ಮಾಡಿದ್ದಾರೆ. ಇನ್ನೂ ಈ ಪೋಸ್ಟ್ ತಮ್ಮ ಮೇಲಿನ ರೂಮರ್‍ ಗಳಿಗೆ ಸಂಬಂಧಿಸಿದ ವಿಚಾರ ಅಲ್ಲ. ಜೊತೆಗೆ ವಿಚ್ಚೇದನದ ಬಗ್ಗೆ ಯಾವುದೇ ಸ್ಪಷ್ಟನೆ ಸಹ ನೀಡಿಲ್ಲ. ಆಕೆ ತನ್ನ ಪ್ರಾಜೆಕ್ಟ್ ಒಂದರ ಬಗ್ಗೆ ಪ್ರಮೋಷನಲ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.

ನಿಹಾರಿಕಾ ಕೊಣಿದೆಲಾ ಸಿನೆಮಾಗಳಲ್ಲಿ ನಟಿಯಾಗಿ ಸಕ್ಸಸ್ ಕಾಣದ ಹಿನ್ನೆಲೆಯಲ್ಲಿ ಆಕೆ ನಿರ್ಮಾಣದತ್ತ ಮುಖ ಮಾಡಿದರು. ದಿ ಪಿಂಕ್ ಎಲೆಫೆಂಟಾ ಎಂಬ ನಿರ್ಮಾಣ ಸಂಸ್ಥೆಯ ಮೂಲಕ ವೆಬ್ ಸಿರೀಸ್ ಗಳನ್ನು  ನಿರ್ಮಾಣ ಮಾಡುತ್ತಿದ್ದರು. ಈ ಹಾದಿಯಲ್ಲೇ ಶೀಘ್ರದಲ್ಲೇ ಡಿಸ್ನಿ ಪ್ಲಸ್ ಹಾಟ್ ಸ್ಟಾರ್‍ ನಲ್ಲಿ ಸ್ಟ್ರೀಮಿಂಗ್ ಆಗಲಿರುವ ಪ್ರಾಜೆಕ್ಟ್ ಗೆ ಸಂಬಂಧಿಸಿದ ಪ್ರೋಮೋ ಒಂದನ್ನು ನಿಹಾರಿಕಾ ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಡೆಡ್ ಫಿಕ್ಸಲ್ಸ್ ಎಂಬ ಟೈಟಲ್ ನಡಿ ಈ ಪ್ರಾಜೆಕ್ಟ್ ತೆರೆಗೆ ಬರಲಿದೆ. ಇನ್ನೂ ಈ ಸಿರೀಸ್ ಅನ್ನು ನಿಹಾರಿಕಾ ನಿರ್ಮಾಣ ಮಾಡುವುದರ ಜೊತೆಗೆ ನಟಿಸುತ್ತಿದ್ದಾರೆ ಎಂದು ಸಹ ಹೇಳಲಾಗುತ್ತಿದೆ. ಇನ್ನೂ ನಿಹಾರಿಕಾ ತಮ್ಮ ಮೇಲಿನ ರೂಮರ್‍ ಗಳು ಹಾಗೂ ವಿಚ್ಚೇದನದ ಬಗ್ಗೆ ರಿಯಾಕ್ಟ್ ಆಗುತ್ತಾರೆ ಎಂದು ಅಭಿಮಾನಿಗಳು ಊಹೆ ಮಾಡಿದ್ದರು. ಆದರೆ ಆಕೆ ತಮ್ಮ ಪ್ರಾಜೆಕ್ಟ್ ಬಗ್ಗೆ ಅಪ್ಡೇಟ್ ನೀಡಿದ್ದಾರೆ.

ಇನ್ನೂ ಇದರಿಂದ ಅವರ ವಿಚ್ಚೇದನದ ಬಗ್ಗೆ ಮತಷ್ಟು ಅನುಮಾನಗಳು ಸೃಷ್ಟಿಯಾಗಿದೆ. ಈ ಬಗ್ಗೆ ಮೆಗಾ ಕುಟುಂಬದಿಂದ ಯಾರೂ ಸಹ ರಿಯಾಕ್ಟ್ ಆಗದ ಹಿನ್ನೆಲೆಯಲ್ಲಿ ನಿಹಾರಿಕಾ ಹಾಗೂ ಚೈತನ್ಯ ಬೇರೆಯಾಗುತ್ತಿರುವ ವಿಚಾರದಲ್ಲಿ ನಿಜ ಇರಬಹುದು ಎಂದೂ ಸಹ ಅನೇಕರು ಭಾವಿಸುತ್ತಿದ್ದಾರೆ.  ಇನ್ನೂ ಕೆಲವು ದಿನಗಳ ಹಿಂದೆಯಷ್ಟೆ ನಿಹಾರಿಕಾ ಹಾಗೂ ಚೈತನ್ಯ ಸೋಷಿಯಲ್ ಮಿಡಿಯಾದಲ್ಲಿ ಒಬ್ಬರನ್ನೊಬ್ಬರೂ ಅನ್ ಫಾಲೋ ಮಾಡಿಕೊಂಡರು. ಚೈತನ್ಯ ಸಹ ತಮ್ಮ ಮದುವೆಯ ಪೊಟೋಗಳನ್ನು ಡಿಲೀಟ್ ಮಾಡಿ ರೂಮರ್‍ ಗಳು ಹರಿದಾಡಲು ಕಾರಣವಾದರು. ಇನ್ನೂ ಈ ಬಗ್ಗೆ ಯಾವಾಗ ಯಾರು ರಿಯಾಕ್ಟ್ ಆಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.