Film News

ಮಕ್ಕಳಿಗೆ ಲಿಪ್ ಕಿಸ್ ಕೊಟ್ಟ ಬಾಲಿವುಡ್ ನಟಿ ಛವಿ ಮಿಟ್ಟಲ್, ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿರುವ ನೆಟ್ಟಿಗರು…!

ಸೋಷಿಯಲ್ ಮಿಡಿಯಾ ಹೆಚ್ಚು ಪ್ರಚಲಿತಕ್ಕೆ ಬಂದ ಬಳಿಕ ಕೆಲಸ ಸೆಲೆಬ್ರೆಟಿಗಳೂ ವಿಚಿತ್ರವಾದ ಕೆಲಸ ಗಳನ್ನು ಮಾಡುತ್ತಿರುತ್ತಾರೆ. ಇದೀಗ ಬಾಲಿವುಡ್ ನಟಿ ಛವಿ ಮಿಟ್ಟಲ್ ಮಾಡಿದ ಪೋಸ್ಟ್ ಕಾರಣದಿಂದ ಆಕೆಯನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಮಕ್ಕಳು ಎಂದರೇ ಎಲ್ಲರಿಗೂ ಇಷ್ಟವಿರುತ್ತದೆ. ಮಕ್ಕಳು ಕಂಡ ಕೂಡಲೇ ಅವರಿಗೆ ಪ್ರೀತಿಯಿಂದ ಮುತ್ತಿಡುವುದು, ಅವರೊಂದಿಗೆ ಆಟ ಆಡುವುದು ಮಾಡುತ್ತಿರುತ್ತಾರೆ. ಮಕ್ಕಳಿಗೆ ಎಲ್ಲರೂ ಕೆನ್ನೆಯ ಮೇಲೆ ಮುತ್ತಿಡುತ್ತಾರೆ. ಇದೀಗ ನಟಿ ಛವಿ ಮಿಟ್ಟಲ್ ಬೇಕೆಂತಲೇ ಮಗುವಿನ ತುಟಿಗೆ ಮುತ್ತಿಟ್ಟು ಟ್ರೋಲರ್‍ ಗಳಿಗೆ ಆಹಾರವಾಗಿದ್ದಾರೆ.

ಇತ್ತೀಚಿಗೆ ಬಾಲಿವುಡ್ ನಟಿ ಛವಿ ಮಿಟ್ಟಲ್ ತಮ್ಮ ಮಕ್ಕಳಿಗೆ ಲಿಪ್ ಕಿಸ್ ಕೊಡುವ ಪೊಟೋಗಳನ್ನು ತನ್ನ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದರು. ಇನ್ನೇನೂ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಕಾಣಿಸಿಕೊಂಡಿದ್ದೇ ತಡ ನೆಟ್ಟಿಗರು ಆಕೆಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು ಜೊತೆಗೆ ಆಕೆಯನ್ನು ಟ್ರೋಲ್ ಸಹ ಮಾಡಲು ಶುರು ಮಾಡಿದರು. ಮಕ್ಕಳಿಗೆ ಲಿಪ್ ಕಿಸ್ ಕೊಡುವುದು ಏನು, ಅವರಿಗೆ ಚಿಕ್ಕಂದಿನಿಂದದಲೇ ಇಂತಹುದು ಕಲಿಸೋದು ಸರಿಯೇ ಎಂದು ಕೆಲವರು ವಿಮರ್ಶೆಗಳನ್ನು ಮಾಡುತ್ತಿದ್ದಾರೆ. ಮತ್ತೆ ಕೆಲವರಂತೂ ಆರೋಗ್ಯದ ಪರವಾಗಿ ಯೋಚನೆ ಮಾಡುತ್ತಾ  ಮಕ್ಕಳಿಗೆ ನಿಮ್ಮಲ್ಲಿನ ಬ್ಯಾಕ್ಟೀರಿಯಾ ಗಳನ್ನು ಹಂಚುತ್ತಿದ್ದೀರಾ, ಆರೋಗ್ಯ ದೃಷ್ಟಿಯಿಂದ ಅದು ಸರಿಯಲ್ಲ ಎಂದು ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.

ಇನ್ನೂ ಆಕೆಯ ಪೊಟೋಗಳಿಗೆ ಕೇವಲ ಕಾಮೆಂಟ್ ಗಳ ಮೂಲಕ ತರಾಟೆಗೆ ತೆಗೆದುಕೊಂಡಿದ್ದು ಮಾತ್ರಲ್ಲದೇ ಆಕೆಯನ್ನು ಟ್ರೋಲ್ ಸಹ ಮಾಡುತ್ತಿದ್ದಾರೆ. ಸಾಮಾನ್ಯ ನೆಟ್ಟಿಗರಿಂದ ಬಾಲಿವುಡ್ ಪ್ರಮುಖರೂ ಸಹ ಆಕೆಯ ಈ ಕೆಲಸಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನೀನು ಮಕ್ಕಳಿಗೆ ಮುತ್ತಿಟ್ಟಿದ್ದು ಸರಿ ಆದರೆ ಅದನ್ನು ಎಲ್ಲರಿಗೂ ತಿಳಿಯುವಂತೆ ಏತಕ್ಕೆ ಮಾಡಿದ್ದೀಯಾ ಎಂದು ಸಲಹೆ ನೀಡಿದ್ದಾರೆ. ಆದರೆ ಛವಿ ಮಿಟ್ಟಲ್ ಮಾತ್ರ ಇದ್ಯಾವುದನ್ನೂ ಸಹ ಲೆಕ್ಕಿಸದೇ ಮಕ್ಕಳಿಗೆ ಕಿಸ್ ಕೊಡುವ ಮತಷ್ಟು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಒಂದು ತಾಯಿ ತಮ್ಮ ಮಕ್ಕಳ ಮೇಲೆ ತೋರಿಸುವಂತಹ ಪ್ರೀತಿಗೆ ಇಂತಹ ಕಾಮೆಂಟ್ ಗಳು ಬರುತ್ತವೆ ಎಂದು ಊಹೆ ಸಹ ಮಾಡಿರಲಿಲ್ಲ. ನಾನು ನನ್ನ ಮಕ್ಕಳಿಗೆ ಮುತ್ತಿಡುವ ಮತಷ್ಟು ಪೊಟೋಗಳನ್ನು ಹಂಚಿಕೊಳ್ಳುತ್ತೇನೆ ಎಂದು ಮತಷ್ಟು ಪೊಟೋಗಳನ್ನು ಹಂಚಿಕೊಂಡಿದ್ದಾರೆ.

ನನ್ನ ಮಕ್ಕಳ ಮೇಲೆ ನನಗೆ ತುಂಬಾ ಪ್ರೀತಿಯಿದೆ. ಅದನ್ನು ಹೇಗೆ ತೋರಿಸಬೇಕು ಎಂಬುದು ತಿಳಿದಿಲ್ಲ. ಅದಕ್ಕಾಗಿಯೇ ನಾನು ಈ ರೀತಿಯಲ್ಲಿ ಪ್ರದರ್ಶನ ಮಾಡುತ್ತಿದ್ದೇನೆ. ಪ್ರೀತಿಯನ್ನು ತೋರಿಸುವುದು ಇದೊಂದು ರೀತಿಯ ಪದ್ದತಿ. ತಬ್ಬಿಕೊಳ್ಳುವ ಹಾಗೂ ಮುತ್ತಿಡುವ ಮೂಲಕ ನನ್ನ ಪ್ರೀತಿಯನ್ನು ತೋರಿಸುತ್ತೇನೆ. ನನ್ನ ವಿರುದ್ದ ಬಂದಂತಹ ಟ್ರೋಲರ್‍ ಗಳಿಗೆ ಸಪೋರ್ಟ್ ಮಾಡಿದವರಿಗೆ ಧನ್ಯವಾದಗಳು, ಇನ್ನೂ ಮಾನವೀಯತೆ ಬದುಕೇ ಇದೆ ಎಂದು ಹೇಳಿದ್ದಾರೆ.

Most Popular

To Top