NHAI ನಲ್ಲಿ ಖಾಲಿಯಿರುವ 49 ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ….!

Follow Us :

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ನಲ್ಲಿ ಖಾಲಿಯಿರುವ ಡೆಪ್ಯುಟಿ ಜನರಲ್ ಮ್ಯಾನೇಜರ್‍, ಮ್ಯಾನೇಜರ್‍ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. 49 ಡೆಪ್ಯುಟಿ ಜನರಲ್ ಮ್ಯಾನೇಜರ್‍ ಹಾಗೂ ಮ್ಯಾನೇಜರ್‍ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಫೆ.2 ರೊಳಗೆ ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ.

ಭಾರತ ಸರ್ಕಾರದಲ್ಲಿ ಹುದ್ದೆ ಮಾಡಲು ಬಯಸುವಂತಹ ಅಭ್ಯರ್ಥಿಗಳು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ. ಆಸಕ್ತರು ಫೆ.2ರೊಳಗಾಗಿ ಆನ್ ಲೈನ್ ಹಾಗೂ ಆಫ್ ಲೈನ್ ನಲ್ಲೂ ಅರ್ಜಿ ಸಲ್ಲಿಸಬೇಕಾಗಿದೆ. ಉಪ ಪ್ರಧಾನ ವ್ಯವಸ್ಥಾಪಕರು (ತಾಂತ್ರಿಕ)-27 (ವೇತನ ರೂ.78800-209200/-), ಮ್ಯಾನೇಜರ್‍ (ತಾಂತ್ರಿಕ) 22 (ವೇತನ ರೂ.67700-208700/-) ಹುದ್ದೆಗಳು ಖಾಲಿಯಿದೆ. ಇನ್ನೂ ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಸಿವಿಲ್ ಇಂಜನಿಯರಿಂಗ್ ನಲ್ಲಿ ಪದವಿ ಪೂರ್ಣಗೊಳಿಸರಬೇಕು. ಅಭ್ಯರ್ಥಿಯ ಗರಿಷ್ಟ ವಯಸ್ಸು 56 ವರ್ಷದೊಳಗಿರಬೇಕು. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮಗಳಂತೆ ವಯೋಮಿತಿಯಲ್ಲಿ ಸಡಿಲಿಗೆ ಸಹ ಇದೆ. ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಪ್ರಾಧಿಕಾರದ ವೆಬ್ ಸೈಟ್ nhai.gov.in ರಲ್ಲಿ ಜ.4 ರಿಂದ ಫೆ.2 ರವೆರೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಸಲ್ಲಿಸಿದ ಅರ್ಜು ನಮೂನೆಯ ಹಾರ್ಡ್ ಪ್ರತಿಯನ್ನು ಸ್ವಯಂ ದೃಢೀಕರಿಸಿದ ಸಂಬಂಧಿತ ದಾಖಲೆಗಳೊಂದಿಗೆ ಫೆ.19 ರೊಳಗೆ ಡೆಪ್ಯುಟಿ ಜನರಲ್ ಮ್ಯಾನೇಜರ್ (ತಾಂತ್ರಿಕ): DGM (HR & Admn-III)-NG, ನ್ಯಾಷನಲ್ ಹೈವೇಸ್ ಅಥಾರಿಟಿ ಆಫ್ ಇಂಡಿಯಾ, ಪ್ಲಾಟ್ ನಂ.ಜಿ-5&6, ಸೆಕ್ಟರ್-10, ದ್ವಾರಕಾ, ನವದೆಹಲಿ-110075 ಹಾಗೂ ಮ್ಯಾನೇಜರ್ (ತಾಂತ್ರಿಕ): DGM (HR & Admn-I)-SKM, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಪ್ಲಾಟ್ ನಂ.G-5&6, ಸೆಕ್ಟರ್-10, ದ್ವಾರಕಾ, ನವದೆಹಲಿ-110075 ವಿಳಾಸಗಳಿಗೆ ಕಳುಹಿಸಿಕೊಡಬೇಕಿದೆ.