ಕ್ಯೂಟ್ ಅಂಡ್ ಹಾಟ್ ಆಗಿ ಕಾಣಿಸಿಕೊಂಡ ಮಲ್ಲು ಬ್ಯೂಟಿ ಅಮಲಾಪಾಲ್, ತಾಯಿಯಾಗುವ ಸಂತೋಷದಲ್ಲಿ ಡಸ್ಕಿ ಬ್ಯೂಟಿ…..!

Follow Us :

ಮಲಯಾಳಂ ಮೂಲದ ನಟಿ ಅಮಲಾಪಾಲ್ ತಾಯಿಯಾಗುತ್ತಿರುವ ಸಂತೋಷದಲ್ಲಿದ್ದಾರೆ. ಇತ್ತೀಚಿಗೆ ಆಕೆ ಗ್ಲಾಮರ್‍ ರೋಲ್ಸ್ ಪಕ್ಕಕ್ಕಿಟ್ಟು ಕಥೆಗೆ ಪ್ರಾಧಾನ್ಯತೆ ಇರುವಂತಹ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಕಳೆದ ವರ್ಷ ನವೆಂಬರ್‍ ಮಾಹೆಯಲ್ಲಿ ಆಕೆ ತನ್ನ ಪ್ರಿಯಕರ ಜಗತ್ ದೇಸಾಯಿ ಎಂಬಾತನನ್ನು ಮದುವೆಯಾದರು. ಇದು ಅಮಲಾಪಾಲ್ ಗೆ ಎರಡನೇ ಮದುವೆಯಾಗಿದೆ. ಇದೀಗ ಆಕೆ ತಾಯಿಯಾಗುತ್ತಿದ್ದಾರೆ. ಈ ಸಂತಸದಲ್ಲೇ ತುಂಭಾ ಖುಷಿಯಾಗಿ ಪೋಸ್ ಕೊಟ್ಟಿದ್ದು, ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಹೊಸ ವರ್ಷದ ಸಮಯದಲ್ಲೇ ನಟಿ ಅಮಲಾಪಾಲ್ ಅಭಿಮಾನಿಗಳೊಂದಿಗೆ ಶುಭ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಆಕೆ ಮೊದಲ ತಾಯ್ತನದ ಸಂತೋಷದಲ್ಲಿದ್ದಾರೆ. ತಾನು ಗರ್ಭಿಣಿಯಾಗುತ್ತಿರುವ ವಿಚಾರವನ್ನು ಸೋಷಿಯಲ್ ಮಿಡಿಯಾದ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ತಮಿಳು ನಿರ್ದೇಶಕ ಎ.ಎಲ್.ವಿಜಯ್ ಜೊತೆಗೆ ವಿಚ್ಚೇದನ ಪಡೆದುಕೊಂಡ ಬಳಿಕ ಅಮಲಾಪಾಲ್ ಒಂಟಿಯಾಗಿಯೇ ಇದ್ದರು. ಬಳಿಕ ಆಕೆ ತಾನು ಮದುವೆಯಾಗಲಿರುವ ವ್ಯಕ್ತಿಯನ್ನು ಪರಿಚಯಿಸಿದ್ದರು. ಇದಾದ 1o ದಿನಗಳಲ್ಲೇ ಆತನನ್ನು ಮದುವೆಯಾದರು. ನವೆಂಬರ್‍ 5 ರಂದು ಅದ್ದೂರಿಯಾಗಿ ಮದುವೆಯಾದರು. ಮದುವೆಯ ವಿಡಿಯೋ ಹಾಗೂ ಪೊಟೋಗಳನ್ನು ಸೋಷಿಯಲ್  ಮಿಡಿಯಾದಲ್ಲಿ ಹಂಚಿಕೊಂಡಿದ್ದರು.

ಇನ್ನೂ ಮದುವೆಯಾದ ಎರಡೇ ತಿಂಗಳಲ್ಲಿ ಆಕೆ ಗರ್ಭಿಣಿಯಾದ ವಿಚಾರವನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದರು. ನಟಿ ಅಮಲಾಪಾಲ್ ಮೊದಲನೇ ವಿವಾಹವಾಗಿದ್ದು, ಆಗ ಗರ್ಭಿಣಿಯಾಗಿರಲಿಲ್ಲ ಎನ್ನಲಾಗಿದ್ದು, ಇದೀಗ ಆಕೆ ಮೊದಲ ತಾಯ್ತನದ ಅನುಭವ ಪಡೆದುಕೊಳ್ಳಲಿದ್ದಾರೆ. ಇದೀಗ ಆಕೆ ಸಂತೋಷದಲ್ಲಿ ತೇಲಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಹಾದಿಯಲ್ಲೇ ಇದೀಗ ಆಕೆ ತನ್ನ ಸೋಷಿಯಲ್ ಮಿಡಿಯಾದಲ್ಲಿ ಕ್ಯೂಟ್ ಆಗಿ ಪೋಸ್ ಕೊಟ್ಟಿದ್ದಾರೆ. ಈ ಪೊಟೋಗಳನ್ನು ನೋಡಿದರೇ ಆಕೆ ಎಷ್ಟು ಸಂತೋಷದಲ್ಲಿದ್ದಾರೆ ಎಂಬುದನ್ನು ತಿಳಿಯಬಹುದಾಗಿದೆ. ಕ್ಯೂಟ್ ಎಕ್ಸ್ ಪ್ರೆಷನ್ ಮೂಲಕ ತನ್ನ ಸಂತಸವನ್ನು ಹಂಚಿಕೊಂಡಿದ್ದಾರೆ. ಇನ್ನೂ ಆಕೆಯ ಈ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ನಟಿ ಅಮಲಾಪಾಲ್ ಕಳೆದ 2009 ರಲ್ಲಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಕೇರಳ ಮೂಲದ ನಟಿಯಾದ ಅಮಲಾಪಾಲ್ ತೆಲುಗು, ತಮಿಳು, ಕನ್ನಡ, ಮಲಯಾಳಂ ಹಾಗೂ ಹಿಂದಿ ಭಾಷೆಯ ಅನೇಕ ಸಿನೆಮಾಗಳಲ್ಲಿ ನಟಿಸಿ ತನ್ನದೇ ಆದ ಅಭಿಮಾನಿ ಬಳಗವನ್ನು ಸಹ ಪಡೆದುಕೊಂಡಿದ್ದಾರೆ. ಸಿನೆಮಾಗಳ ಜೊತೆಗೆ ಆಕೆ ಕೆಲವೊಂದು ವೆಬ್ ಸಿರೀಸ್ ಗಳಲ್ಲೂ ಸಹ ನಟಿಸಿದ್ದಾರೆ.