News

ವಿಮಾ ನಿಗಮದಲ್ಲಿ ನರ್ಸಿಂಗ್ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ, ನಸಿಂಗ್ ಅಧಿಕಾರಿಯಾಗಲು ಒಳ್ಳೆಯ ಅವಕಾಶ….!

ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿ ನೌಕರರ ರಾಜ್ಯ ವಿಮಾ ನಿಗಮದಲ್ಲಿ ಖಾಯಂ ಆಧಾರದ ಮೇಲೆ ನರ್ಸಿಂಗ್ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 1930 ಹುದ್ದೆಗಳು ಖಾಲಿಯಿದ್ದು, ಕೇಂದ್ರ ಲೋಕಸೇವಾ ಆಯೋಗ (UPSC) ಅಧಿಸೂಚನೆ ಹೊರಡಿಸಿದೆ. ಮಾ.7 ರಿಂದ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಬಿ.ಎಸ್.ಸಿ ನರ್ಸಿಂಗ್ ವಿದ್ಯಾರ್ಥಿಗಳಿಗೆ UPSC ಗುಡ್ ನ್ಯೂಸ್ ಕೊಟ್ಟಿದೆ. ನೌಕರರ ರಾಜ್ಯ ವಿಮಾ ನಿಗಮದಲ್ಲಿ ಖಾಲಿಯಿರುವ ನರ್ಸಿಂಗ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಖಾಲಿ ಹುದ್ದೆಗಳ ವಿವರಗಳಿಗೆ ಬಂದರೇ, UR-892, EWS-193, OBC-446, SC-235, ST-164, ಅಂಗವಿಕಲ ವರ್ಗದಲ್ಲಿ 168 ಒಟ್ಟು 1930 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ವಿದ್ಯಾರ್ಹತೆಯ ವಿವರಗಳಿಗೆ ಬಂದರೇ, ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳು B.Sc (Hons) ನರ್ಸಿಂಗ್/ B.Sc ನರ್ಸಿಂಗ್/ ಪೋಸ್ಟ್ ಬೇಸಿಕ್ B.Sc ನರ್ಸಿಂಗ್ ಉತ್ತೀರ್ಣರಾಗಿರಬೇಕು. ಅಲ್ಲದೆ ರಾಜ್ಯ ನರ್ಸಿಂಗ್ ಕೌನ್ಸಿಲ್‌ನಲ್ಲಿ ನರ್ಸ್ ಆಗಿ  ನೋಂದಾಯಿಸಿಕೊಳ್ಳಬೇಕು. ಅಥವಾ ಜನರಲ್ ನರ್ಸಿಂಗ್ ಮಿಡ್ ವೈಫರಿಯಲ್ಲಿ ಡಿಪ್ಲೊಮಾ ಕೋರ್ಸ್. ಅಲ್ಲದೆ 50 ಹಾಸಿಗೆಗಳ ಆಸ್ಪತ್ರೆಯಲ್ಲಿ ಕನಿಷ್ಠ ಒಂದು ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು.

ಇನ್ನೂ ವಯೋಮಿತಿಯ ವಿವರಗಳಿಗೆ ಬಂದರೇ, ಮಾರ್ಚ್ 27, 2024 ರಂತೆ SC/ST 35 ವರ್ಷ, ಅಂಗವಿಕಲರಿಗೆ 40 ವರ್ಷ, OBC 33 ವರ್ಷ, ಸಾಮಾನ್ಯ ಮತ್ತು EWS ಅಭ್ಯರ್ಥಿಗಳಿಗೆ ಅಭ್ಯರ್ಥಿಗಳ ವಯಸ್ಸು 30 ವರ್ಷಗಳನ್ನು ಮೀರಬಾರದು. ಮಹಿಳೆಯರು, ಎಸ್‌ಸಿ, ಎಸ್‌ಟಿ ಮತ್ತು ಅಂಗವಿಕಲ ಅಭ್ಯರ್ಥಿಗಳು ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಉಳಿದ ಅಭ್ಯರ್ಥಿಗಳು 25 ರೂಪಾಯಿ ಅರ್ಜಿ ಶುಲ್ಕವನ್ನು ಪಾವತಿಸಬೇಕಿದೆ. ಲಿಖಿತ ಪರೀಕ್ಷ, ಪ್ರಮಾಣಪತ್ರ ಪರಿಶೀಲನೆ ವೈದ್ಯಕೀಯ ಪರೀಕ್ಷೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಮಾ.7 ರಿಂದ ಅರ್ಜಿ ಸಲ್ಲಿಸಬಹುದಾಗಿದ್ದು, ಮಾ.27 ಕೊನೆಯ ದಿನಾಂಕವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ UPSC ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬಹುದಾಗಿದೆ.

Most Popular

To Top