ಬಾಲಯ್ಯ ನ್ಯೂ ಲುಕ್ ಗೆ ಫಿದಾ ಆದ ಫ್ಯಾನ್ಸ್, ಯಂಗ್ ಲುಕ್ ನಲ್ಲಿ ಯಂಗ್ ನಟರನ್ನೂ ಮೀರಿಸಿದ ನಂದಮೂರಿ ಬಾಲಕೃಷ್ಣ……!

ಟಾಲಿವುಡ್ ಸ್ಟಾರ್‍ ಹಿರೋ ನಂದಮೂರಿ ಬಾಲಕೃಷ್ಣ ಸಿನೆಮಾ ಹಾಗೂ ರಾಜಕೀಯ ಎರಡರಲ್ಲೂ ಸಕ್ರೀಯರಾಗಿದ್ದಾರೆ.  ಸದ್ಯ ಬಾಲಕೃಷ್ಣ ಅಖಂಡ, ವೀರಸಿಂಹಾರೆಡ್ಡಿ ಹಾಗೂ ಭಗವಂತ್ ಕೇಸರಿ ಸಿನೆಮಾಗಳ ಮೂಲಕ ಹ್ಯಾಟ್ರಿಕ್ ಪಡೆದುಕೊಂಡರು. ಇದೇ ಹವಾ ಮೈಂಟೈನ್ ಮಾಡುತ್ತಾ ಬಾಲಯ್ಯ ಯಂಗ್ ಡೈರೆಕ್ಟರ್‍ ಬಾಬಿ ನಿರ್ದೇಶನದಲ್ಲಿ NBK109 ಸಿನೆಮಾ ಮಾಡುತ್ತಿದ್ದಾರೆ. ಈ ಸಿನೆಮಾದ ಮೇಲೆ ಈಗಾಗಲೇ ಭಾರಿ ನಿರೀಕ್ಷೆ ಸಹ ಮೂಡಿದೆ.

ನಿರ್ದೇಶಕ ಹಾಗೂ ಮೆಗಾಸ್ಟಾರ್‍ ಚಿರಂಜೀವಿ ಕಾಂಬಿನೇಷನ್ ನಲ್ಲಿ ತೆರೆಕಂಡ ವಾಲ್ತೇರು ವೀರಯ್ಯ ಸಿನೆಮಾ ಬ್ಲಾಕ್ ಬ್ಲಸ್ಟರ್‍ ಹಿಟ್ ಪಡೆದುಕೊಂಡಿದೆ ಇದೀಗ ಹ್ಯಾಟ್ರಿಕ್ ಗೆಲುವಿನಲ್ಲಿದ್ದ ಬಾಲಕೃಷ್ಣ ರವರ ಜೊತೆಗೆ ಬಾಬಿ ಸಿನೆಮಾ ಮಾಡುತ್ತಿರುವುದರಿಂದ ಸಿನೆಮಾದ ಮೇಲೆ ತುಂಬಾನೆ ನಿರೀಕ್ಷೆ ಹುಟ್ಟಿದೆ. ಇನ್ನೂ ನಿರ್ದೇಶಕ ಬಾಬಿ ಸಹ ಸಿನೆಮಾವನ್ನು ಸೈಲೆಂಟ್ ಆಗಿ ಶೂಟಿಂಗ್ ಮಾಡುತ್ತಿದ್ದಾರೆ. ಜೊತೆಗೆ ಭರದಿಂದ ಶೂಟಿಂಗ್ ಸಹ ನಡೆಯುತ್ತಿದೆ. ಈ ಸಿನೆಮಾ ಶೂಟಿಂಗ್ ನಡೆಯುತ್ತಿದೆ ಎಂಬ ಸುದ್ದಿ ಸಹ ಹೊರಬಾರದೆ ಮ್ಯಾನೇಜ್ ಮಾಡುತ್ತಿರುವುದು ವಿಶೇಷ ಎನ್ನಬಹುದಾಗಿದೆ. ಸಿನೆಮಾವನ್ನು ತುಂಬಾ ತ್ವರಿತವಾಗಿ ಪೂರ್ಣಗೊಳಿಸಬೇಕೆಂಬ ಉದ್ದೇಶ ಚಿತ್ರತಂಡದ್ದು ಎಂದು ಹೇಳಲಾಗಿದೆ. ಸಸ್ಪೆನ್ಸ್ ಇಂದ ಸಿನೆಮಾ ಶೂಟಿಂಗ್ ನಡೆಯುತ್ತಿದ್ದು, ಅರ್ಧಕ್ಕೂ ಹೆಚ್ಚು ಭಾಗ ಶೂಟಿಂಗ್ ಪೂರ್ಣಗೊಂಡಿದೆ ಎನ್ನಲಾಗಿದೆ. ಜೊತೆಗೆ ದಸರಾ ಹಬ್ಬಕ್ಕೂ ಮುಂಚೆಯೇ ಈ ಸಿನೆಮಾ ಬಿಡುಗಡೆ ಮಾಡಬೇಕೆಂಬ ಉದ್ದೇಶ ಸಹ ಇಟ್ಟುಕೊಂಡಿದ್ದಾರೆ ಎಂದೂ ಹೇಳಲಾಗುತ್ತಿದೆ.

ಇದೀಗ ಈ ಸಿನೆಮಾದಿಂದ ಬಾಲಕೃಷ್ಣ ರವರ ಲುಕ್ ಲೀಕ್ ಆಗಿದೆ. ಶೂಟಿಂಗ್ ಸೆಟ್ ನಿಂದ ಬಾಲಯ್ಯನ ಲುಕ್ ಹೊರ ಬಂದಿದೆ. ಈ ಪೊಟೋದಲ್ಲಿ ಬಾಲಕೃಷ್ಣ ತುಂಬಾನೆ ಯಂಗ್ ಆಗಿ ಸ್ಟೈಲಿಷ್ ಆಗಿ ಕಾಣಿಸುತ್ತಿದ್ದಾರೆ. ಯಂಗ್ ಅಂಡ್ ಸ್ಟೈಲಿಷ್ ಆಗಿ ಬಾಲಕೃಷ್ಣ ಯಂಗ್ ನಟರಿಗೂ ಪೈಪೋಟಿ ಎಂಬಂತೆ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ವೈಟ್ ಶರ್ಟ್ ಬ್ಲಾಕ್ ಪ್ಯಾಂಟ್ ಧರಿಸಿ ತುಂಬಾ ಸ್ಟೈಲಿಷ್ ಆಗಿ ಸ್ಟೈಲಿಷ್ ಗ್ಲಾಸ್ ಶರ್ಟ್ ಗೆ ನೇತಾಕಿದ್ದಾರೆ. ತಲೆ ಮೇಲೆ ಟೋಪಿ ಇಟ್ಟಿದ್ದಾರೆ. ಅಭಿಮಾನಿಗಳು ಆಕರ್ಷಿಸುವಂತೆ ಈ ಲುಕ್ಸ್ ಇದೆ ಎನ್ನಬಹುದಾಗಿದೆ. ಈ ಪೊಟೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಜೊತೆಗೆ ಬಾಲಯ್ಯ ಅಭಿಮಾನಿಗಳು ಸಿನೆಮಾದಲ್ಲಿ ಹೇಗೆ ಕಾಣಿಸಲಿದ್ದಾರೆ ಎಂದು ಸಹ ಕುತೂಹಲ ಹೆಚ್ಚಿಸಿಕೊಂಡಿದ್ದಾರೆ.

ಈ ಸಿನೆಮಾದಲ್ಲಿ ಡ್ರಾಮಾ ಹಾಗೂ ಎಮೋಷನ್ ನಿಂದ ಕೂಡಿದ ಸಿನೆಮಾ ಎನ್ನಲಾಗುತ್ತಿದೆ. ಜೊತೆಗೆ ಸಿನೆಮಾದಲ್ಲಿ ಮೊದಲಿಗೆ ತ್ರಿಷಾ ಬಾಲಯ್ಯನಿಗೆ ಜೋಡಿಯಾಗಲಿದ್ದಾರೆ ಎನ್ನಲಾಗಿತ್ತು. ಇದೀಗ ಪ್ರಿಯಮಣಿ ಅಂತಿಮ ಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಈ ಸಿನೆಮಾದ ಟೈಟಲ್ ಹಾಗೂ ಫಸ್ಟ್ ಲುಕ್ ಗಾಗಿ ಅಭಿಮಾನಿಗಳು ಈಗರ್‍ ಆಗಿ ಕಾಯುತ್ತಿದ್ದಾರೆ.