News

ಇಸ್ರೋದಲ್ಲಿ ಕೆಲಸ ಮಾಡೋ ಆಸೆಯುಳ್ಳವರಿಗೆ ಭರ್ಜರಿ ಅವಕಾಶ, ಇಸ್ರೋದ 224 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ….!

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ದಲ್ಲಿ ಕೆಲಸ ಮಾಡೋ ಆಸೆ ನಿಮಗಿದ್ದರೇ ಇಲ್ಲಿದೆ ಸುರ್ವಣ ಅವಕಾಶ, ಇಸ್ರೋ ದಲ್ಲಿ ಖಾಲಿಯಿರುವ 224 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದ್ದು, ಫೆ.10 ರಿಂದ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಮಾರ್ಚ್ 1 ಕೊನೆಯ ದಿನಾಂಕವಾಗಿದೆ. ಹುದ್ದೆಗಳ ವಿವರಗಳನ್ನು ತಿಳಿಯಲು ಮುಂದೆ ಓದಿ.

ಇಸ್ರೋದಲ್ಲಿ 224 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದ್ದು, ಇಂಜನಿಯರ್‍, ತಾಂತ್ರಿಕ ಸಹಾಯಕರು, ಡ್ರಾಟ್ಸ್​  ಮೆನ್, ಡ್ರೈವರ್‍ ಸೇರಿದಂತೆ ಒಟ್ಟು 224 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಸೈಂಟಿಸ್ಟ್​​ ಇಂಜಿನಿಯರ್​ -5, ಟೆಕ್ನಿಕಲ್​ ಸಹಾಯಕ – 55, ಸೈಂಟಿಫಿಕ್​​ ಸಹಾಯಕ -6, ಲೈಬ್ರರಿ ಅಸಿಸ್ಟಂಟ್​ – 1, ಟೆಕ್ನಿಷಿಯನ್​ ಬಿ ಮತ್ತು ಡ್ರಾಟ್ಸ್​ ಮ್ಯಾನ್​ ಬಿ – 142, ಫೈರ್​​ ಮ್ಯಾನ್​ ಎ -3, ಕುಕ್​​ – 4, ಡ್ರೈವರ್ -​ 8 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಇನ್ನೂ ವಿದ್ಯಾರ್ಹತೆಯ ವಿವರಗಳಿಗೆ ಬಂದರೇ, ಸೈಂಟಿಸ್ಟ್ ಇಂಜನೀಯರ್‍ ಹುದ್ದೆಗೆ ಬಿಇ, ಬಿಟೆಕ್, ಎಂಇ ಅಥವಾ ಎಂಟೆಕ್, ಎಂ.ಎಸ್.ಸಿ ಪದವಿ ಪಡೆದಿರಬೇಕು. ಟೆಕ್ನಿಕಲ್ ಸಹಾಯಕರ ಹುದ್ದೆಗೆ ಇಂಜನೀಯರಿಂಗ್ ಡಿಪ್ಲೋಮಾ ಪದವಿ, ಸೈಂಟಿಫಿಕ್ ಸಹಾಯಕ ಹುದ್ದೆಗೆ ಬಿ.ಎಸ್.ಸಿ ಪದವಿ, ಲೈಬ್ರೆರಿ ಸಹಾಯಕರ ಹುದ್ದೆಗೆ ಪದವಿ ಅಥವಾ ಸ್ನಾತಕೋತ್ತರ ಪದವಿ, ಟೆಕ್ನಿಷಿಯನ್ ಬಿ ಹಾಗೂ ಡ್ರಾಫ್ಟ್ ಮೆನ್ ಬಿ, ಫೈರ್‍ ಮೆನ್ ಎ, ಕುಕ್, ಡ್ರೈವರ್‍ ಹುದ್ದೆಗಳಿಗೆ 10ನೇ ತರಗತಿ ಅಥವಾ ಐಟಿಇಐ ಉತ್ತೀರ್ಣರಾಗಿರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಿದೆ.

ಇನ್ನೂ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವಂತಹ ಅಭ್ಯರ್ಥಿಗಳು ಕನಿಷ್ಟ 18 ಹಾಗೂ ಗರಿಷ್ಟ 35 ವರ್ಷ ಆಗಿರಬೇಕು ಪ.ಜಾತಿ ಹಾಗೂ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ. ಇನ್ನೂ ಶುಲ್ಕದ ವಿಚಾರಕ್ಕೆ ಬಂದರೇ, ಸೈಂಟಿಸ್ಟ್​​, ಇಂಜಿನಿಯರ್​​, ಟೆಕ್ನಿಕ್​ ಮತ್ತು ಸೈಂಟಿಫಿಕ್​ ಸಹಾಯಕರ ಹುದ್ದೆಗೆ ಅಭ್ಯರ್ಥಿಗಳು 250 ರೂಪಾಯಿ ಅರ್ಜಿ ಶುಲ್ಕ ಮತ್ತು 750 ರೂಪಾಯಿ ಪ್ರೊಸೆಸಿಂಗ್​ ಶುಲ್ಕ ಪಾವತಿಸಬೇಕು. ಉಳಿದ ಹುದ್ದೆಗಳಿ 100 ರೂ ಅರ್ಜಿ ಶುಲ್ಕ, 500 ಪ್ರೊಸೆಸಿಂಗ್ ಶುಲ್ಕ ಆಗಿದೆ. ಪ.ಜಾತಿ, ಪ,ಪಂಗಡ, ಮಹಿಳಾ ಹಾಗೂ ವಿಶೇಷಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು isro.gov.in ಈ ತಾಣಕ್ಕೆ ಭೇಟಿ ನೀಡಬಹುದಾಗಿದೆ.

Most Popular

To Top