ನಯನ್ ಹಾಗೂ ವಿಘ್ನೇಶ್ ಪ್ರೀತಿಗೆ ಅಡಿಪಾಯ ಹಾಕಿದ್ದು ಆ ಸ್ಟಾರ್ ಹಿರೋ ಅಂತೆ, ಆತ ಯಾರು ಗೊತ್ತಾ?

Follow Us :

ಸೌತ್ ಸಿನಿರಂಗದ ಮೋಸ್ಟ್ ಬ್ಯೂಟಿಪುಲ್ ಜೋಡಿಗಳಲ್ಲಿ ಒಂದಾದ ನಯನತಾರಾ-ವಿಘ್ನೇಶ್ ಸದ್ಯ ವೈವಾಹಿಕ ಜೀವನದ ಜೊತೆಗೆ ಸಿನೆಮಾ ಕೆರಿಯರ್‍ ಸಹ ಸಾಗಿಸುತ್ತಿದ್ದಾರೆ. ಕಳೆದ 2022 ಜೂನ್ 9 ರಂದು ಈ ಜೋಡಿಯ ಮದುವೆ ಅದ್ದೂರಿಯಾಗಿ ನೆರವೇರಿತ್ತು. ನಟಿ ನಯನತಾರಾ ಮದುವೆಯಾದ ಬಳಿಕವೂ ಸಹ ಕ್ರೇಜಿ ಪ್ರಾಜೆಕ್ಟ್ ಗಳಲ್ಲಿ ನಟಿಸುತ್ತಾ ಪುಲ್ ಬ್ಯುಸಿಯಾಗಿದ್ದಾರೆ. ಅತ್ತ ವಿಘ್ನೇಶ್ ಸಹ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕೆಲವು ತಿಂಗಳುಗಳ ಹಿಂದೆಯಷ್ಟೆ ಈ ಜೋಡಿ ಸೆರಗೋಸಿ ಪದ್ದತಿಯ ಮೂಲಕ ಅವಳಿ ಮಕ್ಕಳನ್ನು ಪಡೆದುಕೊಂಡರು. ಈ ಕಾರಣದಿಂದ ಈ ಜೋಡಿ ತುಂಬಾನೆ ಸುದ್ದಿಯಾಗಿದ್ದರು.

ಲೇಡಿ ಸೂಪರ್‍ ಸ್ಟಾರ್‍ ನಯನತಾರಾ ಹಾಗೂ ವಿಘ್ನೇಶ್ ಸುಮಾರು ವರ್ಷಗಳಿಂದ ಪ್ರೀತಿಸಿ ಬಳಿಕ ಅದ್ದೂರಿಯಾಗಿ ಮದುವೆಯಾದರು. ಅವರು ಮದುವೆಯಾದಾಗಿನಿಂದ ಒಂದಲ್ಲ ಒಂದು ಕಾರಣಕ್ಕಾಗಿ ವಿವಾದದಲ್ಲಿ ಸಿಲುಕುತ್ತಿದ್ದರು. ತಿರುಮಲ ದಲ್ಲಿ ಚಪ್ಪಲಿ ಧರಿಸಿದ್ದಾರೆ ಎಂದು ಭಕ್ತರ ಆಕ್ರೋಷಕ್ಕೆ ಕಾರಣವಾಗಿದ್ದರು. ಬಳಿಕ ಈ ಬಗ್ಗೆ ಬಹಿರಂಗ ಕ್ಷಮೆಯನ್ನು ಸಹ ಕೋರಿದ್ದರು. ಬಳಿಕ ಸೆರಗೋಸಿ ಪದ್ದತಿಯ ಮೂಲಕ ಮಕ್ಕಳನ್ನು ಪಡೆದುಕೊಂಡಿರುವುದಾಗಿ ಘೋಷಣೆ ಮಾಡಿದರು. ಈ ಜೋಡಿ ಮಕ್ಕಳನ್ನು ಕಾನೂನಿನ ಪ್ರಕಾರ ಪಡೆದುಕೊಂಡಿಲ್ಲ ಎಂದು ದೊಡ್ಡ ವಿವಾದಕ್ಕೆ ಗುರಿಯಾಗಿತ್ತು. ಬಳಿಕ ತಾವು ಕಾನೂನಿನಡಿಯಲ್ಲಿ ಮಕ್ಕಳನ್ನು ಪಡೆದುಕೊಂಡಿದ್ದಾಗಿ ತಿಳಿಸಿದರು. ಮೊದಲನೇ ಮಗನ ಹೆಸರು ಉಯಿರ್‍ ರುದ್ರೋನಿಲ್ ಎನ್.ಶಿವನ್ ಹಾಗೂ  ಎರಡನೇ ಮಗನ ಹೆಸರು ಉಲಗ್ ಧೈವಾಗ್ ಎನ್.ಶಿವನ್ ಎಂದು ಹೆಸರಿಟ್ಟಿದ್ದಾರೆ. ಇದೀಗ ಈ ನಯನತಾರಾ ಹಾಗೂ ವಿಘ್ನೇಶ್ ರವರ ಪ್ರೀತಿಗೆ ಆ ಸ್ಟಾರ್‍ ನಟ ಎಂಬ ಸುದ್ದಿ ಇದೀಗ ವೈರಲ್ ಆಗುತ್ತಿದೆ.

ಇನ್ನೂ ನಟಿ ನಯನತಾರಾ ಹಾಗೂ ವಿಘ್ನೇಶ್ ನಡುವೆ ಪ್ರೀತಿ ಹುಟ್ಟಲು ಓರ್ವ ಸ್ಟಾರ್‍ ಹಿರೋ ಕಾರಣವಂತೆ. ಹೀಗಂತಾ ನಿರ್ದೇಶಕ ವಿಘ್ನೇಶ್ ಶಿವನ್ ಹೇಳಿದ್ದಾರೆ. ಅಷ್ಟಕ್ಕೂ ಆ ನಟ ಬೇರೆ ಯಾರೂ ಅಲ್ಲ ಸ್ಟಾರ್‍ ನಟ ಧನುಷ್. ಹೌದು ಈ ಸುದ್ದಿಯನ್ನು ಸ್ವತಃ ವಿಘ್ನೇಶ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ವಿಘ್ನೇಶ್ ನಯನತಾರಾ ಜೊತೆಗೆ ಲವ್, ರಿಲೇಷನ್ ಶಿಪ್, ಮದುವೆ ಮೊದಲಾದ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ನನ್ನ ಮೊದಲ ಸಿನೆಮಾ ನಾನುಮ್ ರೌಡಿ ಧಾನ್ ಎಂಬ ಸಿನೆಮಾದ ಕಥೆಯನ್ನು ಧನುಷ್ ರವರೇ ನಯನತಾರಾಗೆ ಹೇಳುವಂತೆ ಸೂಚಿಸಿದ್ದರು. ಮೊದಲು ಸಿನೆಮಾ ಸ್ಕ್ರಿಪ್ಟ್ ಇಷ್ಟವಾಗಲಿಲ್ಲ ಎಂದಿದ್ದ ವಿಜಯಸೇತುಪತಿ ನಯನ್ ಒಪ್ಪಿಗೆ ಕೊಟ್ಟಿದ್ದಾರೆ ಎಂದು ಹೇಳಿದ ಕೂಡಲೇ ಆಲೋಚನೆ ಮಾಡದೇ ಒಪ್ಪಿಕೊಂಡಿಬಿಟ್ಟರು. ಈ ಸಿನೆಮಾ ಕಾರಣದಿಂದ ನಯನತಾರಾ ಜೊತೆಗೆ ಹೆಚ್ಚು ಸಮಯ ಕಳೆಯಬೇಕಾಯ್ತು. ತಿಳಿಯದೇ ನಮ್ಮಿಬ್ಬರ ನಡುವೆ ಪ್ರೀತಿ ಹುಟ್ಟಿಕೊಂಡಿತ್ತು. ಒಂದು ರೀತಿಯಲ್ಲಿ ನಮ್ಮ ಪ್ರೀತಿಗೆ ಬುನಾದಿ ಹಾಕಿದ್ದು ಧನುಷ್ ಎಂದೇ ಹೇಳಬಹುದಾಗಿದೆ ಎಂದು ವಿಘ್ನೇಶ್ ಹೇಳಿದ್ದಾರೆ.