Film News

ತನ್ನ ವಿರುದ್ದ ಕಾಮೆಂಟ್ ಮಾಡಿದ ನೆಟ್ಟಿಗನಿಗೆ ಚಪ್ಪಲಿ ತೋರಿಸಿದ ಬಿಗ್ ಬಾಸ್ ಬ್ಯೂಟಿ ಅಷುರೆಡ್ಡಿ…!

ತೆಲುಗು ಸಿನಿರಂಗದ ನಟಿ ಅಷುರೆಡ್ಡಿ ಬಿಗ್ ಬಾಸ್ ಮೂಲಕ ಫೇಂ ಸಂಪಾದಿಸಿಕೊಂಡಿದ್ದಾರೆ. ಆಕೆ ವಿವಾದಗಳ ಕಾರಣದಿಂದಲೇ ಹೆಚ್ಚು ಸುದ್ದಿಯಾಗಿದ್ದಾರೆ ಎಂದರೇ ತಪ್ಪಾಗಲಾರದು. ಆಕೆ ತನ್ನ ಇನ್ಸ್ಟಾಗ್ರಾಂ ನಲ್ಲಿ ಮಾಡುವಂತಹ ಕೆಲವೊಂದು ಪೋಸ್ಟ್ ಗಳು ಅನೇಕ ವಿವಾದಗಳಿಗೆ ಕಾರಣ ಸಹ ಆಗುತ್ತಿವೆ. ಇನ್ನೂ ಆಕೆಗೆ ಕಾಮೆಂಟ್ ಮಾಡಿದ ನೆಟ್ಟಿಗನೊಬ್ಬನಿಗೆ ಚಪ್ಪಲಿ ತೋರಿಸಿದ್ದಾರೆ. ಅಷ್ಟಕ್ಕೂ ಅಷುರೆಡ್ಡಿ ನೆಟ್ಟಿಗನಿಗೆ ಚಪ್ಪಲಿ ತೋರಿಸಿದ್ದು ಯಾಕೆ, ಆ ನೆಟ್ಟಿಗ ಏನು ಹೇಳಿದ್ದ ಎಂಬ ವಿಚಾರಕ್ಕೆ ಬಂದರೇ,

ನಟಿ ಅಷುರೆಡ್ಡಿ ಯನ್ನು ಜೂನಿಯರ್‍ ಸಮಂತಾ ಎಂತಲೇ ಕರೆಯಲಾಗುತ್ತದೆ. ಆಕೆ ಸೋಷಿಯಲ್ ಮಿಡಿಯಾದಲ್ಲಿ ಪುಲ್ ಬ್ಯುಸಿಯಾಗಿರುತ್ತಾರೆ. ಬಾಲಿವುಡ್ ಐಟಂ ಸಾಂಗ್ ಮಾಡುವಂತಹ ನಟಿಯರೂ ಸಹ ಮಾಡದ ಮಾದರಿಯಲ್ಲಿ ಬೋಲ್ಡ್ ಆಕಿ ಸ್ಕಿನ್ ಶೋ ಮಾಡುತ್ತಿರುತ್ತಾರೆ. ಇನ್ನೂ ಆಕೆಯ ಈ ಪೊಟೋಗಳಿಗೆ ಅನೇಕರು ವಿಮರ್ಶೆಗಳನ್ನು ಸಹ ಮಾಡುತ್ತಿರುತ್ತಾರೆ. ಅದರಲ್ಲೂ ಕೆಲವರಂತೂ ಕೆಟ್ಟ ಕೆಟ್ಟ ಕಾಮೆಂಟ್ ಗಳನ್ನು ಸಹ ಮಾಡುತ್ತಿರುತ್ತಾರೆ. ತುಂಬಾ ಕೆಟ್ಟದಾದ ಪದಗಳಿಂದಲೂ ಸಹ ಆಕೆಯ ಪೋಸ್ಟ್ ಗಳಿಗೆ ಕಾಮೆಂಟ್ ಹಾಕುತ್ತಿರುತ್ತಾರೆ. ಇನ್ನೂ ಆಕೆಯ ವಿರುದ್ದ ಬರುವಂತಹ ವಿಮರ್ಶೆಗಳಿಗೆ ಆಗಾಗ ಅಷುರೆಡ್ಡಿ ಸಹ ಕೌಂಟರ್‍ ನೀಡುತ್ತಿರುತ್ತಾರೆ. ಈ ಹಿಂದೆ ಸಹ ವಿಮರ್ಶೆಗಳನ್ನು ಮಾಡಿವರಿಗಾಗಿ ವಿಡಿಯೋ ಮೂಲಕ ಕೌಂಟರ್‍ ನೀಡಿದ್ದರು. ಕಾಮದಿಂದ ಕಣ್ಣು ಮುಚ್ಚಿಹೋಗಿವೆಯೇ, ನಾಚಿಕೆ ಮಾನ ಮರ್ಯಾದೆ ಇಲ್ಲ ಎಂಬ ಡಬ್ ಸ್ಮಾಷ್ ವಿಡಿಯೋ ಮೂಲಕ ಕೌಂಟರ್‍ ನೀಡಿದ್ದರು.

ಈ ಹಾದಿಯಲ್ಲೇ ನೆಟ್ಟಿಗನೋರ್ವ ಅಷುರೆಡ್ಡಿ ಕುರಿತು ಮಾಡಿದ ಕಾಮೆಂಟ್ ಒಂದಕ್ಕೆ ಸ್ಟ್ರಾಂಗ್ ಕೌಂಟರ್‍ ನೀಡಿದ್ದಾರೆ. ಇತ್ತೀಚಿಗೆ ಅಷುರೆಡ್ಡಿ ಲೈವ್ ಸೆಷನ್ ನಲ್ಲಿ ಭಾಗಿಯಾಗಿದ್ದರು. ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡುತ್ತಿದ್ದರು. ಈ ಸಮಯದಲ್ಲಿ ನೆಟ್ಟಿಗನೋರ್ವ ಅಷುರೆಡ್ಡಿಗೆ ಪ್ರಶ್ನೆ ಕೇಳುತ್ತಾ ಈ ನಡುವೆ ನಿನ್ನ ಓವರ್‍ ಆಕ್ಷನ್ ತುಂಬಾ ಆಗಿದೆ, ನಿನಗೆ ಅದು ಅರ್ಥ ಆಗುತ್ತಿಲ್ಲವೇ ಎಂದಿದ್ದಾನೆ. ಇದಕ್ಕೆ ಅಷುರೆಡ್ಡಿ ಕೌಂಟರ್‍ ನೀಡುತ್ತಾ ಹೌದು ಈ ನಡುವೆ ಜಾಸ್ತಿಯಾಗಿಲ್ಲ ಕಡಿಮೆಯಾಗಿದೆ ಎಂದು ಚಪ್ಪಲಿ ಎಮೋಜಿಯನ್ನು ಪೋಸ್ಟ್ ಮಾಡಿದ್ದಾರೆ. ಆ ಮೂಲಕ ಆ ನೆಟ್ಟಿಗನಿಗೆ ಚಪ್ಪಲಿಯನ್ನು ತೋರಿಸಿದ್ದಾರೆ ಅಷುರೆಡ್ಡಿ. ಆಕೆ ನೀಡಿದ ಕೌಂಟರ್‍ ಗೆ ಯಾವುದೇ ರಿಪ್ಲೆ ಕೊಡದೇ ಆ ನೆಟ್ಟಿಗ ಸಹ ಸೈಲೆಂಟ್ ಆಗಿದ್ದಾನೆ. ಅಷುರೆಡ್ಡಿ ತನಗೆ ಇಷ್ಟಬಂದಂತೆ ಬದುಕುತ್ತಿರುತ್ತಾರೆ. ಪಾಪ್ಯುಲಾರಿಟಿಗಾಗಿ ಎಂತಹುದೇ ಕೆಲಸ ಮಾಡಲು ಸಹ ಸಿದ್ದವಾಗಿರುತ್ತಾರೆ. ಇದಕ್ಕೆ ರಾಮ್ ಗೋಪಾಲ್ ವರ್ಮಾ ಜೊತೆಗೆ ನಡೆದ ಸಂದರ್ಶನ ಒಳ್ಳೆಯ ಉದಾಹರಣೆ ಎನ್ನಬಹುದಾಗಿದೆ.

ಇನ್ನೂ ನಟಿ ಅಷುರೆಡ್ಡಿ ಕಿರುತೆರೆಯಿಂದ ಕೊಂಚ ದೂರವಾಗಿದ್ದಾರೆ. ಸದ್ಯ ಆಕೆಗೆ ಬೆಳ್ಳಿಪರದೆಯಲ್ಲಿ ಹೆಚ್ಚು ಅವಕಾಶಗಳು ಬರುತ್ತಿದ್ದು, ನಟಿಯಾಗಿ ಫೇಂ ಸಂಪಾದಿಸುವ ಪ್ರಯತ್ನದಲ್ಲಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದ ಮೂಲಕವೂ ಸಹ ಅಷುರೆಡ್ಡಿ ಸಖತ್ ಸದ್ದು ಮಾಡುತ್ತಿರುತ್ತಾರೆ. ಸೋಷಿಯಲ್ ಮಿಡಿಯಾ ಮೂಲಕ ಹಾಟ್ ಅಂಡ್ ಬೋಲ್ಡ್ ಪೊಟೋಶೂಟ್ಸ್ ಮೂಲಕ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ.

Most Popular

To Top