ದೇವಾಲಯಕ್ಕೆ ತೆರಳಿದ ನಯನ್ ವಿಕ್ಕಿ ದಂಪತಿ, ಭಕ್ತರ ವರ್ತನೆ ಬೇಸರ ವ್ಯಕ್ತಪಡಿಸಿ ಜೋಡಿ ವಿಡಿಯೋ ವೈರಲ್….!

Follow Us :

ಸೌತ್ ಸಿನಿರಂಗದ ಸ್ಟಾರ್‍ ಜೋಡಿ ನಯನತಾರಾ ಹಾಗೂ ವಿಘ್ನೇಶ್ ಸದ್ಯ ಮದುವೆಯ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಸೆರಗೋಸಿ ಪದ್ದತಿಯ ಮೂಲಕ ಮಗುವನ್ನು ಪಡೆದುಕೊಂಡ ಈ ಜೋಡಿ ಸದಾ ಸುದ್ದಿಯಲ್ಲೇ ಇರುತ್ತಾರೆ. ಮದುವೆಯಾದಾಗಿನಿಂದ ಸದಾ ಸುದ್ದಿಯಲ್ಲೇ ಇರುವ ಈ ಜೋಡಿ ಇದೀಗ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಇತ್ತೀಚಿಗಷ್ಟೆ ದೇವಾಲಯಕ್ಕೆ ಹೋದ ಈ ಜೋಡಿಗೆ ಕಹಿ ಘಟನೆ ಎದುರಾಗಿದೆ. ಪೂಜೆಯ ಮಧ್ಯೆಯೇ ಎದ್ದು ಬಂದ ಘಟನೆ ನಡೆದಿದೆ.

ಸೌತ್ ಲೇಡಿ ಸೂಪರ್‍ ಸ್ಟಾರ್‍ ನಯನತಾರಾ ಹಾಗೂ ಖ್ಯಾತ ನಿರ್ದೇಶಕ ವಿಘ್ನೇಶ್ ಶಿವನ್ ಸುಮಾರು ವರ್ಷಗಳ ಕಾಲ ಪ್ರೀತಿಸಿ ಕಳೆದ ವರ್ಷದ ಜೂನ್ ಮಾಹೆಯಲ್ಲಿ ಸಪ್ತಪದಿ ತುಳಿದು ಒಂದಾದರು. ಅವರ ಮದುವೆ ಸಮಾರಂಭ ಅನೇಕ ಗಣ್ಯರು ಹಾಗೂ ಸಿನೆಮಾ ಸೆಲೆಬ್ರೆಟಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ಮದುವೆ ನಡೆಯಿತು. ಇನ್ನೂ ಮದುವೆಯಾದಾಗಿನಿಂದ ಒಂದಲ್ಲ ಒಂದು ರೀತಿಯ ವಿವಾದಕ್ಕೆ ಸಿಲುಕುತ್ತಿದ್ದರು. ಬಳಿಕ ಸೆರಗೋಸಿ ಮೂಲಕ ಮಕ್ಕಳನ್ನು ಪಡೆದುಕೊಂಡ ಈ ಜೋಡಿ ಇದರಿಂದಲೂ ಸಹ ವಿವಾದಕ್ಕೆ ಗುರಿಯಾದರು. ಸೆರಗೋಸಿ ಮೂಲಕ ಕಾನೂನಿಗೆ ವಿರುದ್ದ ವಾಗಿ ಮಕ್ಕಳನ್ನು ಪಡೆದುಕೊಂಡಿದ್ದಾರೆ ಎಂಬ ಆರೋಪ ಇವರ ಮೇಲೆ ಕೇಳಿಬಂದಿತ್ತು. ಬಳಿಕ ತಾವು ಕಾನೂನಿನ ಮೂಲಕವೇ ಮಕ್ಕಳನ್ನು ಪಡೆದುಕೊಂಡಿದ್ದಾಗಿ ಹೇಳಿ ವಿವಾದದಿಂದ ದೂರವಾದರು. ಇದೀಗ ದೇವಾಲಯಕ್ಕೆ ಈ ಜೋಡಿ ತೆರಳಿದ್ದು ಈ ಸಮಯದಲ್ಲಿ ಈ ಜೋಡಿಗೆ ಕಿರಿಕಿರಿ ಎದುರಾಗಿದೆ.

ಇನ್ನೂ ಇತ್ತೀಚಿಗೆ ನಯನ್ ಹಾಗೂ ವಿಕ್ಕಿ ದಂಪತಿ ಕುಂಭಕೋಣಂ ಬಳಿಯ ಅವರ ಮನೆದೇವರಾದ ಮೇಲವಳತ್ತೂರ್‍ ಶ್ರೀ ಕಂಚಿ ಕಾಮಾಕ್ಷಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ದೇವರಿಗೆ ವಿಶೇಷ ಪೂಜೆಗಳನ್ನು ನೆರವೇರಿಸಿದರು. ಸದ್ಯ ಈ ಸಂಬಂಧ ಕೆಲ ಪೊಟೋಗಳು ವಿಡಿಯೋಗಳು ವೈರಲ್ ಆಗಿದೆ. ಇನ್ನೂ ನಯನತಾರಾ ಸೆಲೆಬ್ರೆಟಿಯಾದ ಕಾರಣ ಪೊಲೀಸರಿಗೂ ಸಹ ಸೆಕ್ಯೂರಿಟಿ ಕಲ್ಪಿಸುವುದು ತುಂಬಾ ಕಷ್ಟದ ಕೆಲಸ ಆಗಿರುತ್ತದೆ. ದೇವಾಲಯದಲ್ಲಿ ಪೂಜೆ ಸಮಯದಲ್ಲಿ ಕೆಲವೊಂದು ಆಸಕ್ತಿಕರವಾದ ಪರಿಣಾಮ ಎದುರಾಗಿದೆ. ದೇವಾಲಯದಲ್ಲಿ ನಯನತಾರಾ ಪೂಜೆ ಮಾಡುತ್ತಿದ್ದರೇ ದೇವಾಲಯದ ಹೊರಗೆ ಭಕ್ತರು ಸಹ ಜಮಾಯಿಸಿದ್ದರು. ಪದೇ ಪದೇ ನಯನತಾರಗೆ ತುಂಬಾ ಕಿರಿಕಿರಿ ಉಂಟು ಮಾಡಿದ್ದಾರೆ. ಪ್ರಶಾಂತವಾಗಿ ಪೂಜೆಯನ್ನು ಸಹ ಮಾಡಲು ಆಗದಂತೆ ಮಾಡಿದ ಹಿನ್ನೆಲೆಯಲ್ಲಿ ನಯನತಾರಾ ಆಗ್ರಹ ವ್ಯಕ್ತಪಡಿಸಿದ್ದಾರೆ. ದೇವಾಲಯದ ಬಳಿಕ ಬಂದು ಭಕ್ತರನ್ನು ಮಾತನಾಡಿದ್ದಾರೆ. ನಾವು ಸಹ ನಿಮ್ಮಂತೆ ದೇವರ ದರ್ಶನಕ್ಕೆ ಬಂದಿದ್ದೀವಿ. ಐದು ನಿಮಿಷ ಪೂಜೆ ಮುಗಿಯುತ್ತದೆ. ಐದು ನಿಮಿಷ ನಿಮಗೆ ಇರಲು ಸಾಧ್ಯವಾಗುತ್ತಿಲ್ಲವೇ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಬಳಿಕ ವಿಘ್ನೇಶ್ ಸಹ ಬಂದು ಭಕ್ತರ ಮನವೊಲಿಸಲು ಪ್ರುತ್ನ ಮಾಡಿದ್ದಾರೆ. ಕೆಲವರು ಅವರನ್ನು ಅರ್ಥ ಮಾಡಿಕೊಂಡು ಹೋಗಿ ಪೂಜೆ ಮಾಡಿಕೊಳ್ಳಿ ಮೇಡಂ ಎಂದು ಹೇಳಿದ್ದಾರೆ. ಇನ್ನೂ ಈ ದೃಶ್ಯಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಇನ್ನೂ ಮದುವೆಯಾದರೂ ಸಹ ನಯನತಾರಾ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಜವಾನ್ ಸಿನೆಮಾದಲ್ಲಿ ಶಾರುಖ್ ಜೊತೆಗೆ ನಯನತಾರಾ ನಟಿಸುತ್ತಿದ್ದು, ಈ ಸಿನೆಮಾದಲ್ಲಿ ಆಕೆ ಬಿಕಿನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ. ಜೊತೆಗೆ ಭಾರಿ ಸಂಭಾವನೆಯನ್ನು ಸಹ ಈ ಸಿನೆಮಾಗಾಗಿ ಪಡೆಯುತ್ತಿದ್ದಾರಂತೆ.