ಒಟಿಟಿಯಲ್ಲಿ ಅಸಭ್ಯ ಕಟೆಂಟ್ ಹೆಚ್ಚಾಗಲು ಆರ್.ಜಿ.ವಿ ಕಾರಣ ಎಂದ ಸಲ್ಮಾನ್, ಸಂಚಲನಾತ್ಮಕ ಆರೋಪ ಮಾಡಿದ ಸಲ್ಲು ಭಾಯ್…!

ಸಿನೆಮಾಗಳಿಗೆ ಸೆನ್ಸಾರ್‍ ಇದ್ದು, ಕೆಲವೊಂದು ಅಸಭ್ಯಕರವಾದ ಕಟೆಂಟ್ ಗಳನ್ನು ತೆಗೆದು ಹಾಕಲಾಗುತ್ತದೆ. ಆದರೆ ಒಟಿಟಿ ಗಳಿಗೆ ಅಂತಹ ಸೆನ್ಸಾರ್‍ ಇಲ್ಲದ ಕಾರಣ ಅಸಭ್ಯವಾದ ದೃಶ್ಯಗಳು ಹಾಗೂ ಮಾತುಗಳೂ ಸಹ ಒಟಿಟಿಯಲ್ಲಿ ಬಿಡುಗಡೆಯಾಗುವ ಸಿರೀಸ್ ಗಳಲ್ಲಿ…

ಸಿನೆಮಾಗಳಿಗೆ ಸೆನ್ಸಾರ್‍ ಇದ್ದು, ಕೆಲವೊಂದು ಅಸಭ್ಯಕರವಾದ ಕಟೆಂಟ್ ಗಳನ್ನು ತೆಗೆದು ಹಾಕಲಾಗುತ್ತದೆ. ಆದರೆ ಒಟಿಟಿ ಗಳಿಗೆ ಅಂತಹ ಸೆನ್ಸಾರ್‍ ಇಲ್ಲದ ಕಾರಣ ಅಸಭ್ಯವಾದ ದೃಶ್ಯಗಳು ಹಾಗೂ ಮಾತುಗಳೂ ಸಹ ಒಟಿಟಿಯಲ್ಲಿ ಬಿಡುಗಡೆಯಾಗುವ ಸಿರೀಸ್ ಗಳಲ್ಲಿ ಹೆಚ್ಚಾಗಿರುತ್ತವೆ. ಒಟಿಟಿಗೂ ಸೆನ್ಸಾರ್‍ ಅಗತ್ಯ ಎಂದು ಈಗಾಗಲೇ ಕೂಗೊಂದು ಶುರುವಾಗಿದೆ. ಇತ್ತೀಚಿಗೆ ಬಿಡುಗಡೆಯಾದ ರಾಣಾ ನಾಯುಡು ವೆಬ್ ಸಿರೀಸ್ ಮೇಲೆ ಅನೇಕರು ವಿರೋಧಗಳನ್ನು ವ್ಯಕ್ತಪಡಿಸಿದ್ದಾರೆ. ಇದೀಗ ಬಾಲಿವುಡ್ ಸ್ಟಾರ್‍ ನಟ ಒಟಿಟಿಯಲ್ಲಿ ಅಸಭ್ಯ ಕಟೆಂಟ್ ಹೆಚ್ಚಾಗಲು ರಾಮ್ ಗೋಪಾಲ್ ವರ್ಮಾ ಕಾರಣ ಎಂದು ಸಂಚಲನಾತ್ಮಕ ಆರೋಪಗಳನ್ನು ಮಾಡಿದ್ದಾರೆ.

ಇತ್ತೀಚಿಗೆ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುವಂತಹ ಕೆಲವೊಂದು ಸಿರೀಸ್ ಗಳಲ್ಲಿ ತುಂಬಾನೆ ಅಸಭ್ಯಕರವಾದ ಕಟೆಂಟ್ ಇರುತ್ತದೆ. ಇದರಿಂದ ಮಿತಿಮೀರಿದ ಶೃಂಗಾರ, ಹಿಂಸೆಯಿಂದ ಕೂಡಿರುವಂತಹ ಕೆಲವೊಂದು ಸಿನೆಮಾಗಳು ಯುವಜನತೆಯ ಮೇಲೆ ದುಷ್ಪರಿಣಾಮ ಬೀರಬಹುದು ಎಂದು ಅನೇಕರು ಒಟಿಟಿಗೂ ಸೆನ್ಸಾರ್‍ ನಿಯಮ ಜಾರಿ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಅದರಲ್ಲೂ ಇತ್ತಿಚಿಗೆ ತೆರೆಕಂಡ ರಾಣಾ ನಾಯಡು ಸಿರೀಸ್ ಮೇಲೂ ತೀವ್ರ ವಿರೋಧ ಉಂಟಾಗಿತ್ತು. ಇದೀಗ ಈ ಒಟಿಟಿಯಲ್ಲಿನ ಅಸಭ್ಯಕರವಾದ ಕಟೆಂಟ್ ಬಗ್ಗೆ ಬಾಲಿವುಡ್ ಸ್ಟಾರ್‍ ನಟ ಸಲ್ಮಾನ್ ಖಾನ್ ರಿಯಾಕ್ಟ್ ಆಗಿದ್ದಾರೆ. ಸಲ್ಲು ಭಾಯ್ ತೆಲುಗು ನಿದೇರ್ಶಕ ರಾಮ್ ಗೋಪಾಲ್ ವರ್ಮಾರವರ ಮೇಲೆ ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ.

ಬಾಲಿವುಡ್ ಸ್ಟಾರ್‍ ಸಲ್ಮಾನ್ ಖಾನ್ 68ನೇ ಫಿಲ್ಮ್ ಫೇರ್‍ ಅವಾರ್ಡ್ ಫಂಕ್ಷನ್ ನಲ್ಲಿ ಭಾಗಿಯಾಗಿದ್ದರು. ಈ ವೇಳೆ ಆತ ಒಟಿಟಿ ಯಲ್ಲಿ ಅಶ್ಲೀಲತೆಯ ಬಗ್ಗೆ ಮಾತನಾಡಿದ್ದಾರೆ. ರಾಮ್ ಗೋಪಾಲ್ ವರ್ಮಾ ರವರ ಕಾರಣದಿಂದಲೇ ಒಟಿಟಿಯಲ್ಲಿ ಅಂತಹ ಕೆಟ್ಟ ಕಂಟೆಂಟ್ ಗಳು ಶುರುವಾಗಿದೆ ಎಂದು ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ರಾಮ್ ಗೋಪಾಲ್ ವರ್ಮಾ ಅಡಲ್ಟ್ ಕಟೆಂಟ್ ಇರುವಂತಹ ಸಿನೆಮಾಗಳನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಿದರು. ಸಿನೆಮಾ ಪ್ರೇಕ್ಷಕರೂ ಸಹ ಹಂತ ಹಂತವಾಗಿ ಅಂತಹುದೇ ಕಟೆಂಟ್ ಗೆ ಅಡ್ಜಸ್ಟ್ ಆದರು. ನಾನು ಸುಮಾರು ಮೂರು ದಶಕಗಳಿಂದ ಸಿನಿರಂಗದಲ್ಲಿ ಇದ್ದೇನೆ. ಯಾವುದೇ ಸಿನೆಮಾದಲ್ಲಿ ನಾನು ಅಶ್ಲೀಲ ಸಿನೆಮಾಗಳಲ್ಲಿ ನಟಿಸಿಲ್ಲ. ಇಂದಿನ ಆಧುನಿಕ ಯುಗದಲ್ಲಿ ಚಿಕ್ಕಮಕ್ಕಳ ಕೈಯಲ್ಲೂ ಸಹ ಮೊಬೈಲ್ ಇರುತ್ತದೆ. ಅವರು ಅಂತಹ ಕಟೆಂಟ್ ನೋಡಿದರೇ ತುಂಬಾ ಅಪಾಯ. ಈ ಹಿನ್ನೆಲೆಯಲ್ಲಿ ಒಟಿಟಿಗೂ ಸಹ ಸೆನ್ಸಾರ್‍ ನಿಯಮಗಳು ಇರಬೇಕೆಂದರು.

ಇನ್ನೂ ಸಲ್ಮಾನ್ ಖಾನ್ ರವರು ಆರ್‍.ಜಿ.ವಿ ಮೇಲೆ ಮಾಡಿದಂತಹ ಕಾಮೆಂಟ್ ಗಳು ವೈರಲ್ ಆಗುತ್ತಿವೆ. ವಿವಿಧ ರೀತಿಯ ಅಭಿಪ್ರಾಯಗಳೂ ಸಹ ವ್ಯಕ್ತವಾಗುತ್ತಿವೆ. ಇನ್ನೂ ಸಲ್ಮಾನ್ ಖಾನ್ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಎಂಬ ಸಿನೆಮಾದಲ್ಲಿ ನಟಿಸಿದ್ದಾರೆ. ಈ ಸಿನೆಮಾ ರಂಜಾನ್ ಹಬ್ಬದ ಅಂಗವಾಗಿ ಏ.21 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಈ ಸಿನೆಮಾದಲ್ಲಿ ವೆಂಕಟೇಶ್ ಸಹ ನಟಿಸಿದ್ದಾರೆ. ರಾಮ್ ಚರಣ್ ಸಹ ಒಂದು ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.