ಮಹಾಕಾಳಿ ಅವತಾರದಲ್ಲಿ ಪುಷ್ಪಾ-2 ಅಲ್ಲು ಅರ್ಜುನ್, ವೈರಲ್ ಆದ ಲೀಕ್ಡ್ ಪೊಟೋ….!

Follow Us :

ದೇಶದ ಸಿನಿರಂಗದಲ್ಲೇ ಸಂಚಲನ ಮೂಡಿಸಿದ ಪುಷ್ಪಾ ಸಿನೆಮಾ ಭಾರಿ ಸಕ್ಸಸ್ ಜೊತೆಗೆ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ. ಸಿನೆಮಾ ಬಿಡುಗಡೆಯಾಗಿ ತಿಂಗಳುಗಳೇ ಕಳೆದಿದ್ದು, ಇನ್ನೂ ಈ ಸಿನೆಮಾದ ಹಾಡುಗಳು ಹಾಗೂ ಡೈಲಾಗ್ ಗಳು ಜನರ ಬಾಯಲ್ಲೇ ಇದೆ. ಇದೀಗ ಪುಷ್ಪಾ-2 ಸಿನೆಮಾಗಾಗಿ ಇಡೀ ದೇಶದಲ್ಲಿರುವ ಪುಷ್ಪಾ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ ಎಂದರೇ ತಪ್ಪಾಗಲಾರದು. ಇದೀಗ ಪುಷ್ಪಾ ಸಿನೆಮಾದ ವೇರ್‍ ಈಜ್ ಪುಷ್ಪಾ ಹೆಸರಿನಲ್ಲಿ ವಿಡಿಯೋ ಒಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಜೊತೆಗೆ ಮಹಾಕಾಳಿ ಅವತಾರದಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳಲ್ಲಿ ಮತಷ್ಟು ನಿರೀಕ್ಷೆ ಹೆಚ್ಚಾಗಿದೆ.

ಪುಷ್ಪಾ ಸಿನೆಮಾ ಬಿಡುಗಡೆಯಾಗಿ ಭಾರಿ ಸಕ್ಸಸ್ ಕಂಡುಕೊಂಡ ಬಳಿಕ ಪುಷ್ಪಾ-2 ಸಿನೆಮಾದ ಮೇಲೆ ಭಾರಿ ನೀರಿಕ್ಷೆ ಹುಟ್ಟಿದೆ. ಪುಷ್ಪಾ-2 ಅಪ್ಡೇಟ್ ಗಾಗಿ ಅಭಿಮಾನಿಗಳು ತುಂಬಾ ಕಾಯುತ್ತಿದ್ದರು. ಇದೀಗ ಪುಷ್ಪಾ-2 ಸಿನೆಮಾದ ವಿಡಿಯೋ ಒಂದು ಬಿಡುಗಡೆಯಾಗಿದೆ. ಈ ವಿಡಿಯೋದಲ್ಲಿ ಪುಷ್ಪಾ ಎಂಟು ಬುಲೆಟ್ ಗಳ ಗಾಯವಾಗಿದ್ದು, ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ, ಪುಷ್ಪಾ ಸತ್ತಿರಬಹುದು, ಪೊಲೀಸರು ಡ್ರಾಮಾ ಮಾಡುತ್ತಿದ್ದಾರೆ, ಪುಷ್ಪಾ ವಿದೇಶಗಳಿಗೆ ಓಡಿಹೋಗಿದ್ದಾರೆ ಎಂದು ಈ ವಿಡಿಯೋದಲ್ಲಿ ಹೇಳಲಾಗುತ್ತಿದೆ. ಬಳಿಕ ಕ್ಯಾಮೆರಾ ರೆಕಾರ್ಡ್‌ನಲ್ಲಿ ಪುಷ್ಪಾ ಕಾಣಿಸಿಕೊಂಡ ಬಳಿಕ ಜನರು ಸಂತೋಷ ಪಡುತ್ತಾರೆ. ಬಳಿಕ ಪುಷ್ಪಾ ಬಂದು ಇದು ಪುಷ್ಪಾ ರೂಲ್ ಎಂದು ಹೇಳುತ್ತಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಜೊತೆಗೆ ಟ್ರೆಂಡಿಂಗ್ ಸಹ ಆಗುತ್ತಿದೆ.

ಇನ್ನೂ ಅಲ್ಲು ಅರ್ಜುನ್ ಹುಟ್ಟುಹಬ್ಬ ನಾಳೆ (ಏ.8) ಈ ಸಂದರ್ಭವಾಗಿ ಪುಷ್ಪಾ-2 ತಂಡದಿಂದ ಅಭಿಮಾನಿಗಳಿಗೆ ಭಾರಿ ಸರ್ಪ್ರೈಸ್ ಕಾದಿದೆ. ಕೆಲವೊಂದು ಮಾಹಿತಿಗಳ ಪ್ರಕಾರ ನಾಳೆ ಪುಷ್ಪಾ-2 ಸಿನೆಮಾದಲ್ಲಿನ ಅಲ್ಲು ಅರ್ಜುನ್ ಫಸ್ಟ್ ಲುಕ್ ರಿವೀಲ್ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ಇದೀಗ ಪುಷ್ಪಾ-2 ಸಿನೆಮಾದಲ್ಲಿನ ಅಲ್ಲು ಅರ್ಜುನ್ ಹೊಸ ಲುಕ್ ಒಂದು ಲೀಕ್ ಆಗಿದೆ. ಇದರಲ್ಲಿ ಅಲ್ಲು ಅರ್ಜುನ್ ಮೈಂಡ್ ಬ್ಲಾಕ್ ಆಗುವಂತೆ ಕಾಣಿಸಿಕೊಂಡಿದ್ದಾರೆ. ಮಹಾಕಾಳಿ ಅವತಾರದಲ್ಲಿ ರಗಡ್ ಲುಕ್ಸ್ ನಲ್ಲಿ ಬನ್ನಿ ಕಾಣಿಸಿಕೊಂಡಿದ್ದಾರೆ. ಅಕ್ಷರಶಃ ಮಹಾಕಾಳಿಯಂತೆ ಅಲಂಕಾರಗೊಂಡ ಬನ್ನಿ ಲುಕ್ಸ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಲುಕ್ಸ್ ನಲ್ಲಿ ಅಲ್ಲು ಅರ್ಜುನ್ ತುಂಬಾ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ನೆವರ್‍ ಬಿಪೋರ್‍ ಎಂಬಂತೆ ಬನ್ನಿ ಕಾಣಿಸಿಕೊಂಡಿದ್ದು, ಮಹಾಕಾಳಿಯಂತೆ ಘರ್ಜನೆ ಮಾಡುವಂತಿದೆ ಎನ್ನಲಾಗುತ್ತಿದೆ.

ಇನ್ನೂ ಅಲ್ಲು ಅರ್ಜುನ್ ರವರ ಈ ಲುಕ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ನಾಳೆ ಬಿಡುಗಡೆಯಾಗಲಿರುವ ಪೋಸ್ಟರ್‍ ಇದೆ ಎಂದು ಸೋಷಿಯಲ್ ಮಿಡಿಯಾದಲ್ಲಿ ಚರ್ಚೆಗಳು ನಡೆಯುತ್ತಿದೆ. ಈ ಬಗ್ಗೆ ನಾಳೆ ಸ್ಪಷ್ಟವಾದ ಚಿತ್ರಣ ಹೊರಬರಲಿದೆ. ಆದರೆ ಬನ್ನಿ ಫ್ಯಾನ್ಸ್ ಮಾತ್ರ ಅಲ್ಲು ಅರ್ಜುನ್ ಲುಕ್ಸ್ ನೋಡಿ ಫಿದಾ ಆಗಿದ್ದು, ಸಿನೆಮಾ ಯಾವಾಗ ಬಿಡುಗಡೆಯಾಗಲಿದೆ ಎಂಬ ಕಾತುರದಲ್ಲಿ ಇದ್ದಾರೆ.