ಅವಳಿ ಮಕ್ಕಳೊಂದಿಗೆ ಸಂತೋಷದಿಂದ ಓನಂ ಆಚರಿಸಿದ ನಯನ್ ವಿಕ್ಕಿ ದಂಪತಿ, ವೈರಲ್ ಆದ ಪೊಟೋಸ್…..!

ಸೌತ್ ಲೇಡಿ ಸೂಪರ್‍ ಸ್ಟಾರ್‍ ನಟಿ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಸುಮಾರು ವರ್ಷಗಳ ಕಾಲ ಪ್ರೇಮ ಪಯಣ ಸಾಗಿಸಿ ಬಳಿಕ ಕಳೆದ ವರ್ಷ ಜೂನ್ 9 ರಂದು ಸಪ್ತಪದಿ ತುಳಿದರು. ಚೆನೈನ ಮಹಾಬಲಿಪುರಂ ನಲ್ಲಿ ಈ ಜೋಡಿಯ ಮದುವೆ ಅದ್ದೂರಿಯಾಗಿ ನೆರವೇರಿತು. ಅಕ್ಟೋಬರ್‍ ಮಾಹೆಯಲ್ಲೇ ಈ ಜೋಡಿ ಸೆರಗೋಸಿ ಪದ್ದತಿಯ ಮೂಲಕ ಅವಳಿ ಮಕ್ಕಳನ್ನು ಪಡೆದುಕೊಂಡರು. ಇದೀಗ ತಮ್ಮ ಮಕ್ಕಳೊಂದಿಗೆ ಓನಂ ಹಬ್ಬವನ್ನು ಮೊದಲ ಬಾರಿಗೆ ಆಚರಿಸಿಕೊಂಡಿದ್ದಾರೆ. ಸದ್ಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ನಯನತಾರಾ ಹಾಗೂ ವಿಘ್ನೇಶ್ ಸುಮಾರು ವರ್ಷಗಳಿಂದ ಪ್ರೀತಿಸಿ ಬಳಿಕ ಅದ್ದೂರಿಯಾಗಿ ಮದುವೆಯಾದರು. ಅವರು ಮದುವೆಯಾದಾಗಿನಿಂದ ಒಂದಲ್ಲ ಒಂದು ಕಾರಣಕ್ಕಾಗಿ ವಿವಾದದಲ್ಲಿ ಸಿಲುಕುತ್ತಿದ್ದರು. ತಿರುಮಲ ದಲ್ಲಿ ಚಪ್ಪಲಿ ಧರಿಸಿದ್ದಾರೆ ಎಂದು ಭಕ್ತರ ಆಕ್ರೋಷಕ್ಕೆ ಕಾರಣವಾಗಿದ್ದರು. ಬಳಿಕ ಈ ಬಗ್ಗೆ ಬಹಿರಂಗ ಕ್ಷಮೆಯನ್ನು ಸಹ ಕೋರಿದ್ದರು. ಬಳಿಕ ಸೆರಗೋಸಿ ಪದ್ದತಿಯ ಮೂಲಕ ಮಕ್ಕಳನ್ನು ಪಡೆದುಕೊಂಡಿರುವುದಾಗಿ ಘೋಷಣೆ ಮಾಡಿದರು. ಈ ಜೋಡಿ ಮಕ್ಕಳನ್ನು ಕಾನೂನಿನ ಪ್ರಕಾರ ಪಡೆದುಕೊಂಡಿಲ್ಲ ಎಂದು ದೊಡ್ಡ ವಿವಾದಕ್ಕೆ ಗುರಿಯಾಗಿತ್ತು. ಬಳಿಕ ತಾವು ಕಾನೂನಿನಡಿಯಲ್ಲಿ ಮಕ್ಕಳನ್ನು ಪಡೆದುಕೊಂಡಿದ್ದಾಗಿ ತಿಳಿಸಿದರು. ಮೊದಲನೇ ಮಗನ ಹೆಸರು ಉಯಿರ್‍ ರುದ್ರೋನಿಲ್ ಎನ್.ಶಿವನ್ ಹಾಗೂ  ಎರಡನೇ ಮಗನ ಹೆಸರು ಉಲಗ್ ಧೈವಾಗ್ ಎನ್.ಶಿವನ್ ಎಂದು ಹೆಸರಿಟ್ಟಿದ್ದಾರೆ.

ಇನ್ನೂ ವಿಘ್ನೇಶ್ ಶಿವನ್ ಆಗಿದ್ದಾಂಗೆ ತಮ್ಮ ಕುಟುಂಬದ ವಿಚಾರಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಮೊದಲ ಬಾರಿಗೆ ತಮ್ಮ ಮಕ್ಕಳೊಂದಿಗೆ ಓನಂ ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಮಕ್ಕಳು ಹುಟ್ಟಿದ ಬಳಿಕ ಮೊದಲ ಬಾರಿಗೆ ಓನಂ ಆಚರಿಸಿಕೊಂಡಿದ್ದು, ಕೆಲವೊಂದು ಪೊಟೋಗಳನ್ನು ವಿಘ್ನೇಶ್ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಉಯರ್‍ ಉಲಗನ್ ಜೊತೆಗೆ ಆಚರಿಸಿಕೊಳ್ಳುತ್ತಿರುವ ಮೊದಲ ಓನಂ ಇದು. ಎಲ್ಲರಿಗೂ ಓನಂ ಶುಭಾಷಯಗಳು ಎಂದು ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಇನ್ನೂ ಈ ಪೊಟೋಗಳು ತುಂಬಾನೆ ಬ್ಯೂಟಿಪುಲ್ ಆಗಿದೆ. ಆದರೆ ಈ ಜೋಡಿ ತಮ್ಮ ಮಕ್ಕಳ ಮುಖವನ್ನು ತೋರಿಸಿಲ್ಲ. ಮಕ್ಕಳು ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಬಾಳೆ ಎಲೆಯಲ್ಲಿ ಊಟ ಮಾಡುತ್ತಿರುವ ದೃಶ್ಯಗಳು ವೈರಲ್ ಆಗುತ್ತಿವೆ.

ಇನ್ನೂ ಈ ಪೊಟೋಗಳ ಜೊತೆಗೆ ನಯನತಾರಾ ಪತಿಯೊಂದಿಗೆ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ವೈಟ್ ಕಲರ್‍ ಸೀರೆಯಲ್ಲಿ ನಯನತಾರಾ ಕಾಣಿಸಿಕೊಂಡಿದ್ದು, ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಸದ್ಯ ನಯನತಾರಾ ಬಾಲಿವುಡ್ ಸ್ಟಾರ್‍ ನಟ ಶಾರುಖ್ ಖಾನ್ ಜೊತೆಗೆ ಜವಾನ್ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಶೀಘ್ರದಲ್ಲೇ ಈ ಸಿನೆಮಾ ತೆರೆಕಾಣಲಿದೆ.