Film News

ಟೂ ಮಚ್ ಬೋಲ್ಡ್ ಆಗಿ ಕಾಣಿಸಿಕೊಂಡ ಅಮಲಾಪಾಲ್, ಸಖತ್ ಟ್ರೋಲ್ ಆದ ಬೋಲ್ಡ್ ನಟಿ….!

ಸಿನಿರಂಗದಲ್ಲಿ ಅನೇಕ ನಟಿಯರು ಬಂದು ಹೋಗುತ್ತಿರುತ್ತಾರೆ. ಅವರ ಪೈಕಿ ಕೆಲ ನಟಿಯರು ಮಾತ್ರ ವಿಶೇಷವಾದ ಸಾಧನೆ ಮಾಡುವ ಮೂಲಕ ಖ್ಯಾತಿ ಪಡೆಯುತ್ತಾರೆ. ಈ ಸಾಲಿಗೆ ಮಲಯಾಳಂ ನಟಿ ಅಮಲಾ ಪಾಲ್ ಸಹ ಸೇರುತ್ತಾರೆ. ನಟಿ ಅಮಲಾ ಪಾಲ್ ಅತೀ ಕಡಿಮೆ ಸಮಯದಲ್ಲೇ ಎಲ್ಲರ ದೃಷ್ಟಿಗೆ ಬಿದ್ದು, ತಮ್ಮದೇ ಆದ ಸ್ಟಾರ್‍ ಡಮ್ ಸ್ವಂತ ಮಾಡಿಕೊಂಡಿದ್ದಾರೆ. ಬೋಲ್ಡ್ ಪಾತ್ರಗಳ ಮೂಲಕ ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದ್ದರು. ಇದೀಗ ಆಕೆ ತುಂಬಾನೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು, ಈ ಪೊಟೋಗಳ ಕಾರಣದಿಂದ ಆಕೆಯನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಲಾಗುತ್ತಿದೆ.

ಅದ್ಬುತವಾದ ಅಭಿನಯ, ಸೌಂದರ್ಯದೊಂದಿಗೆ ಅಮಲಾಪಾಲ್ ತನ್ನ ಸಿನಿ ಜರ್ನಿಯನ್ನು ಯಶಸ್ವಿಯಾಗಿ ಮುನ್ನೆಡೆಸುತ್ತಿದ್ದಾರೆ. ಗ್ಲಾಮರ್‍ ಪಾತ್ರಗಳಿಗೆ ದೂರವಾಗಿ ಬಲವಾದ ಕಥೆಯುಳ್ಳ ಸಿನೆಮಾಗಳನ್ನು ಆರಿಸಿಕೊಳ್ಳುತ್ತಿದ್ದಾರೆ. ಹಿಂದೆಗಿಂತಲೂ ಅಮಲಾಪಾಲ್ ಕ್ರೇಜ್ ಇದೀಗ ಹೆಚ್ಚಾಗಿದೆ. ಇದಕ್ಕೆ ಕಾರಣ ವಿಭಿನ್ನವಾದ ಸಿನೆಮಾಗಳನ್ನು ಆಯ್ಕೆ ಮಾಡಿಕೊಳ್ಳುವುದೇ ಕಾರಣ ಎನ್ನಬಹುದಾಗಿದೆ. ಜೊತೆಗೆ ಆಕೆ ಬೋಲ್ಡ್ ಆಗಿಯೂ ಸಹ ನಟಿಸುವ ಮೂಲಕ ಎಲ್ಲರ ಗಮನ ತನ್ನತ್ತ ತಿರುಗಿಸಿಕೊಂಡಿದ್ದರು. ಕ್ಯಾರೆಕ್ಟರ್‍ ಡಿಮ್ಯಾಂಡ್ ಮಾಡಿದರೇ ಆಕೆ ನ್ಯೂಡ್ ಆಗಿಯೂ ಕಾಣಿಸಿಕೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ ಅಮಲಾ ಪಾಲ್. ಆಮೆ ಎಂಬ ಸಿನೆಮಾದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡ ಅಮಲಾಪಾಲ್ ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದ್ದರು.

ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ಅಮಲಾಪಾಲ್ ವಿವಿಧ ರೀತಿಯ ಡ್ರೆಸ್ ಗಳಲ್ಲಿ ಮೈಂಡ್ ಬ್ಲಾಕ್ ಪೋಸ್ ಗಳನ್ನು ನೀಡುತ್ತಿರುತ್ತಾರೆ. ಜೊತೆಗೆ ವಿವಾದಗಳಲ್ಲಿ ಸಹ ಸಿಲುಕುತ್ತಿರುತ್ತಾರೆ. ಇದೀಗ ಮತ್ತೊಮ್ಮೆ ಆಕೆ ನೆಟ್ಟಿಗರಿಗೆ ಆಹಾರವಾಗಿದ್ದಾರೆ. ಹಣಕ್ಕಾಗಿ ಅಷ್ಟೊಂದು ಕೀಳು ಮಟ್ಟಕ್ಕೆ ಇಳಿಯುತ್ತೀಯಾ ಎಂದು ಆಕೆಯನ್ನು ಸಖತ್ ಟ್ರೋಲ್ ಮಾಡುತ್ತಿದ್ದಾರೆ. ಅಮಲಾಪಾಲ್ ಗ್ಯಾಂಬ್ಲಿಂಗ್ ಕ್ರೀಡೆಯಾದ ಕ್ಯಾಸಿನೋ ಬ್ರಾಂಡ್ ಒಂದನ್ನು ಪ್ರಮೋಟ್ ಮಾಡುತ್ತಾ ಕಂಪನಿಯ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಆ ಸಂಸ್ಥೆ ಕೆಲವೊಂದು ಮಾಡಲ್ ಗಳನ್ನು ಆಯ್ಕೆ ಮಾಡಿ ತಮ್ಮ ಬ್ರಾಂಡ್ ಪ್ರಮೋಟ್ ಮಾಡಿಸಿದ್ದರು. ಈ ವೇಳೆ ಆಕೆ ಎಲ್ಲೋ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕ್ಯಾಸಿನೋ ಆಡುತ್ತಿರುವ ದೃಶ್ಯಗಳು, ಪುಲ್ ಮೂಡ್ ನಲ್ಲಿ ಅಸಭ್ಯವಾಗಿ ಕಾಣಿಸುವಂತೆ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ಇನ್ನೂ ಅಮಲಾಪಾಲ್ ರವರ ಈ ಅವತಾರಕ್ಕೆ ನೆಟ್ಟಿಗರು ಕಿಡಿಕಾರಿದ್ದಾರೆ. ಹಣ ಸಂಪಾದನೆಗಾಗಿ ಅಷ್ಟೊಂದು ಕೀಳು ಮಟ್ಟಕ್ಕೆ ಇಳಿಯುತ್ತೀರಾ ಎಂದು ಆಕೆಯನ್ನು ಟ್ರೋಲ್ ಮಾಡುತ್ತಿದ್ದಾರೆ. ಇನ್ನೂ ಅಮಲಾಪಾಲ್ ಸಹ ಬೋಲ್ಡ್ ಆಗಿಯೇ ಇರುತ್ತಾರೆ. ಏನೇ ವಿಚಾರ ಇದ್ದರೂ ನೇರವಾಗಿಯೇ ಆಕೆ ಹೇಳುತ್ತಾರೆ. ಅಂತಹ ಟ್ರೋಲ್ ಗಳಿಗೆ ಆಕೆ ಕಿವಿ ಸಹ ಗೊಡುವುದಿಲ್ಲ. ತನ್ನ ಕೆಲಸ ತಾನು ಎಂಬಂತೆ ಮಾಡಿಕೊಂಡು ಸಾಗುತ್ತಿರುತ್ತಾರೆ.

Most Popular

To Top