Film News

ಒಂದು ವರ್ಷ ಅನ್ನ ತಿಂದಿಲ್ಲ, ಅವರು ನನ್ನ ಡ್ರೈವರ್ ಆಗಿ ಬಳಸಿಕೊಂಡ್ರು, ಶಾಕಿಂಗ್ ಕಾಮೆಂಟ್ಸ್ ಮಾಡಿದ ನಾನಿ….!

ಸಿನಿರಂಗದಲ್ಲಿ ಯಾವುದೇ ಬ್ಯಾಕ್ ಗ್ರೌಂಡ್ ಇಲ್ಲದೇ ಸ್ಟಾರ್‍ ಆದವರಲ್ಲಿ ಕಡಿಮೆ ಮಂದಿ ಇರುತ್ತಾರೆ. ಸತತ ಶ್ರಮದಿಂದ ಅವರು ಸ್ಟಾರ್‍ ನಟರಾಗುತ್ತಾರೆ. ಈ ಸಾಲಿಗೆ ಟಾಲಿವುಡ್ ಸ್ಟಾರ್‍ ನ್ಯಾಚುರಲ್ ಸ್ಟಾರ್‍ ನಾನಿ ಸಹ ಒಬ್ಬರಾಗಿದ್ದಾರೆ. ನಾನಿ ಕೆರಿಯರ್‍ ಆರಂಭದಲ್ಲಿ ತುಂಬಾ ಸಂಕಷ್ಟಗಳನ್ನು ಎದುರಿಸಿದ್ದಾರಂತೆ. ಅನೇಕ ದಿನಗಳ ಕಾಲ ಊಟ, ನಿದ್ದೆಯಿಲ್ಲದೇ ಎಲ್ಲಾ ಅವಮಾನಗಳನ್ನು ದಾಟಿ ಅವಕಾಶಗಳಿಗಾಗಿ ಎದುರು ನೋಡುತ್ತಿದ್ದರಂತೆ. ತಾನು ಕೆರಿಯರ್‍ ಆರಂಭದಲ್ಲಿ ಎದುರಿಸಿದ ಸಮಸ್ಯೆಗಳ ಬಗ್ಗೆ ನಾನಿ ಸಂದರ್ಶನವೊಂದರಲ್ಲಿ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಸಿನಿರಂಗದಲ್ಲಿ ಬ್ಯಾಕ್ ಗ್ರೌಂಡ್ ಇದ್ದರೇ ಅಷ್ಟೊಂದು ಸಮಸ್ಯೆಗಳು ಎದುರಾಗುವುದಿಲ್ಲ. ಆದರೆ ಯಾವುದೇ ಬೆಂಬಲ ಇಲ್ಲದೇ ಸಿನಿರಂಗಕ್ಕೆ ಬಂದರೇ ಅನೇಕ ಸಮಸ್ಯೆಗಳನ್ನು, ಅವಮಾನಗಳನ್ನು ಎದುರಿಸಬೇಕಾಗುತ್ತದೆ. ಈ ಹಾದಿಯಲ್ಲೇ ನ್ಯಾಚುರಲ್ ಸ್ಟಾರ್‍ ನಾನಿ ಸಹ ಅವಕಾಶಗಳನ್ನು ಪಡೆದುಕೊಳ್ಳಲು ತುಂಬಾನೆ ಸಮಸ್ಯೆಗಳು, ಅವಮಾನಗಳನ್ನು ಎದುರಿಸಿದ್ದರಂತೆ. ನಾನಿ ಮೊದಲ ಬಾರಿಗೆ ದಸರಾ ಎಂಬ ಪ್ಯಾನ್ ಇಂಡಿಯಾ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾದ ಪ್ರಮೋಷನ್ ಕಾರ್ಯಕ್ರಮಗಳು ಸಹ ಭರದಿಂದ ಸಾಗಿದೆ. ಇದೀಗ ಧರಣಿ ವಿತ್ ರಾವಣಾಸುರ ಎಂಬ ಟೈಟಲ್ ನಡಿ ಮಾಸ್ ಮಹಾರಾಜ ಹಾಗೂ ನಾನಿ ಸ್ಪೇಷಲ್ ಚಿಟ್ ಚಾಟ್ ಮಾಡಿದ್ದರು. ಈ ವೇಳೆ ನಾನಿ ಅನುಭವಿಸಿದ ಅನೇಕ ಸಮಸ್ಯೆಗಳ ಬಗ್ಗೆ ಹೇಳಿಕೊಂಡಿದ್ದಾರೆ.

ಈ ವೇಳೆ ನಟ ನಾನಿ ಮಾತನಾಡುತ್ತಾ, ನಾನು ನಟನಾಗಿ ಸಿನೆಮಾ ರಂಗದಲ್ಲಿ ಅವಕಾಶಗಳಿಗಾಗಿ ತುಂಬಾ ಪ್ರಯತ್ನಗಳನ್ನು ಮಾಡಿದೆ. ಅನೇಕ ಕಚೇರಿಗಳಿಗೆ ಅಲೆದಾಡಿದ್ದೆ. ಸಣ್ಣ ಪಾತ್ರ ನೀಡಲು ಸಹ ಯಾರೂ ಪೋನ್ ಮಾಡಿಲ್ಲ. ಅದೇ ಸಮಯದಲ್ಲಿ ನಾನು ಕೆಲವರ ಮೇಲೆ ನಂಬಿಕೆಯಿಡಬೇಕಾಯಿತು. ಅವಕಾಶಗಳು ಬದಲಿಗೆ ನನ್ನನ್ನು ಕೆಲವು ದಿನಗಳ ಕಾಲ ಡ್ರೈವರ್‍ ಆಗಿ ಬಳಸಿಕೊಂಡರು. ಆ ಮೂಲಕ ಸಮಯ, ಹಣ ಸಹ ವ್ಯರ್ಥವಾಯಿತು. ಬಳಿಕ ನಟನಾಗುವ ಬದಲು ಡೈರೆಕ್ಟರ್‍ ಆಗೋಣ ಎಂದು ಅಲ್ಲೂ ಸಹ ಪ್ರಯತ್ನಗಳನ್ನು ಮಾಡಿದೆ. ಎಲ್ಲೂ ಸಹ ಅವಕಾಶ ಬಾರದ ಕಾರಣ ಖ್ಯಾತ ನಿರ್ದೇಶಕ ಬಾಪುರವರ ಬಳಿ ಅವಕಾಶ ಪಡೆಯಲು ಪ್ರತಿನಿತ್ಯ ಅವರ ಮನೆಯ ಸುತ್ತಾ ಇರುತ್ತಿದೆ. ಒಂದು ವರ್ಷದ ಬಳಿಕ ನನ್ನನ್ನು ಕ್ಲಾಪ್ ಡೈರೆಕ್ಟರ್‍ ಆಗಿ ತೆಗೆದುಕೊಂಡರು. ಆ ಸಮಯದಲ್ಲಿ ಒಂದು ವರ್ಷದ ಕಾಲ ಮದ್ಯಾಹ್ನ ಊಟ ಸಹ ಮಾಡಲಿಲ್ಲ. ಅದರಿಂದ ನಾನು ತುಂಬಾ ಸಣ್ಣ ಆಗಿಬಿಟ್ಟೆ. ಬಳಿಕ ಅಷ್ಟಾ ಚಮ್ಮಾ ಎಂಬ ಸಿನೆಮಾದ ಮೂಲಕ ನನಗೆ ನಟನಾಗಿ ಆ ದೇವರು ಅವಕಾಶ ಕೊಟ್ಟರು ಎಂದರು.

ಇನ್ನೂ ನಾನಿ ಕೆರಿಯರ್‍ ನಲ್ಲಿ ದಸರಾ ಸಿನೆಮಾ ಮೊದಲ ಪ್ಯಾನ್ ಇಂಡಿಯಾ ಸಿನೆಮಾ ಆಗಿ ಬಿಡುಗಡೆಯಾಗಲಿದೆ. ಈ ಸಿನೆಮಾದ ಇದೇ ಮಾ.30 ರಂದು ಅದ್ದೂರಿಯಾಗಿ ತೆರೆಗೆ ಬರಲಿದೆ. ಈ ಸಿನೆಮಾ ತೆಲುಗು ಸೇರಿದಂತೆ ಕನ್ನಡ, ಹಿಂದಿ, ತಮಿಳು ಹಾಗೂ ಮಲಯಾಳಂ ನಲ್ಲಿ ಬಿಡುಗಡೆಯಾಗಲಿದೆ. ಸದ್ಯ ನಾನಿ NANI30 ಎಂಬ ಸಿನೆಮಾದಲ್ಲೂ ಸಹ ನಟಿಸಲಿದ್ದಾರೆ.

Most Popular

To Top