Film News

ಆ ಭಯ ನನ್ನು ತುಂಬಾ ಕಾಡಿತ್ತು, ತಾನು ಅನುಭವಿಸಿದ ಮಾನಸಿಕ ಸಂಘರ್ಷಣೆಯ ಬಗ್ಗೆ ಮಾಹಿತಿ ಹಂಚಿಕೊಂಡ ಸಾಯಿ ಪಲ್ಲವಿ…..!

ಕೆಲವು ನಟಿಯರು ಕಡಿಮೆ ಸಿನೆಮಾಗಳಲ್ಲಿ ನಟಿಸಿದರೂ ಸಹ ಭಾರಿ ಫಾಲೋಯಿಂಗ್ ಪಡೆದುಕೊಂಡಿರುತ್ತಾರೆ. ಅಂತಹ ನಟಿಯರಲ್ಲಿ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ಸಹ ಒಬ್ಬರಾಗಿದ್ದಾರೆ. ಸೌತ್ ಸಿನಿ ರಸಿಕರಲ್ಲಿ ತನ್ನದೇ ಆದ ಮುದ್ರೆಯನ್ನು ಹಾಕಿದ್ದಾರೆ. ಆಕೆ ಫಿದಾ, ಎಂ.ಸಿ.ಎ, ಶ್ಯಾಮ ಸಿಂಗರಾಯ್, ಲವ್ ಸ್ಟೋರಿ ಸಿನೆಮಾಗಳು ಭಾರಿ ಹಿಟ್ ಗಳಿಸಿಕೊಟ್ಟಿದೆ. ಈ ಸಿನೆಮಾಗಳಲ್ಲಿ ಆಕೆಯ ಪಾತ್ರ ತುಂಬಾನೆ ರಂಜಿಸಿದೆ. ಇನ್ನೂ ಮಲಯಾಳಂ ಮೂಲದ ನಟಿ ಸಾಯಿ ಪಲ್ಲವಿ ಇದೀಗ ಅನುಭವಿಸಿದ ಮಾನಸಿಕ ಹಿಂಸೆಯ ಬಗ್ಗೆ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಮಲಯಾಳಂನ ಪ್ರೇಮಂ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಸಾಯಿ ಪಲ್ಲವಿ ಯಾವುದೇ ಸಿನೆಮಾ ತಕ್ಷಣ ಒಪ್ಪುವುದಿಲ್ಲ. ಅದು ಸ್ಟಾರ್‍ ಸಿನೆಮಾ ಆದರೂ ಸಹ ಆಕೆ ಮಾತ್ರ ಕಥೆಗೆ ಹಾಗೂ ಪಾತ್ರಕ್ಕೆ ಪ್ರಾಧಾನ್ಯತೆಯಿರುವ ಸಿನೆಮಾವನ್ನೇ ಆಯ್ಕೆ ಮಾಡುತ್ತಾರೆ. ಇನ್ನೂ ಸ್ಕಿನ್ ಶೋಗೆ ದೂರ ವಿರುತ್ತಾರೆ. ಇನ್ನೂ ಆಕೆಗೆ ಡಿಮ್ಯಾಂಡ್ ಇದ್ದರೂ ಸಹ ಹೆಚ್ಚು ಸಂಭಾವನೆ ಸಹ ಡಿಮ್ಯಾಂಡ್ ಮಾಡುವುದಿಲ್ಲ. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿರುವ ಸಾಯಿ ಪಲ್ಲವಿ ಇದೀಗ ಕೆರಿಯರ್‍ ಆರಂಭದಲ್ಲಿ ಮಾನಸಿಕ ಸಂಘರ್ಷಕ್ಕೆ ಗುರಿಯಾಗಿದ್ದಾರಂತೆ. ತನ್ನ ಮೇಲೆ ತನಗೆ ನಂಬಿಕೆ ಇರುತ್ತಿರಲಿಲ್ಲವಂತೆ. ತನ್ನ ಡ್ರೆಸ್ಸಿಂಗ್, ಮುಖದ ಮೇಲೆ ಮೊಡವೆಗಳು, ವಾಯ್ಸ್ ಕಾರಣದಿಂದ ನನ್ನನ್ನು ಪ್ರೇಕ್ಷಕರು ಒಪ್ಪುತ್ತಾರಾ ಎಂಬ ಭಯ, ಮತ್ತೊಂದು ಕಡೆ ನಿರ್ದೇಶಕರು ಅವಕಾಶ ಕೊಡುತ್ತಾರಾ ಎಂಬ ಅನುಮಾನಗಳು ಆಕೆಯನ್ನು ಕಾಡುತ್ತಿರುತ್ತಂತೆ.

ಇನ್ನೂ ಈ ಭಯದಿಂದ ಆಕೆ ಏನೇ ಮಾಡಬೇಕಾದರೂ ಸಂಕೋಚ ಪಡುತ್ತಿದ್ದರಂತೆ. ಆದರೆ ಪ್ರೇಮಂ ನಿರ್ದೇಶಕ ತನ್ನ ಮೇಲೆ ನಂಬಿಕೆಯಿಟ್ಟು ಆ ಪಾತ್ರಕ್ಕೆ ಆಯ್ಕೆ ಮಾಡಿದ್ದಾರಂತೆ. ಬಳಿಕ ಪ್ರೇಮಂ ಬಿಡುಗಡೆಯಾದ ಬಳಿಕ ಆಕೆಗೆ ತನ್ನ ಮೇಲೆ ನಂಬಿಕೆ ಬಂತಂತೆ. ಆಕೆಯಲ್ಲಿ ವಿಶ್ವಾಸ ಸಹ ಹೆಚ್ಚಾಯಿತ್ತಂತೆ. ಇನ್ನೂ ಪ್ರೇಮಂ ಸಿನೆಮಾ ನೋಡುತ್ತಾ ಸಿಳ್ಳೆಗಳು, ಕೇಕೆಗಳು ಹಾಕಿದ ಪ್ರೇಕ್ಷಕರು, ಈ ಸಂತೊಷದ ಕ್ಷಣಗಳನ್ನು ನಾನು ಎಂದಿಗೂ ಮರೆಯುವುದಿಲ್ಲ. ಇನ್ನೂ ತುಂಬಾ ಸಿನೆಮಾಗಳಲ್ಲಿ ನಾನು ಮೇಕಪ್ ಇಲ್ಲದೇ ನಟಿಸಿದ್ದೇನೆ. ಜೊತೆಗೆ ನಿರ್ದೇಶಕರೂ ಸಹ ನನಗೆ ಮೇಕಪ್ ಹಾಕುವಂತೆ ಒತ್ತಾಯ ಸಹ ಮಾಡುತ್ತಿರಲಿಲ್ಲ. ನಾನು ಮೇಕಪ್ ಇಲ್ಲದೇ ನಟಿಸಿದ ಹಿನ್ನೆಲೆಯಲ್ಲಿ ಪ್ರೇಕ್ಷಕರು ನನ್ನನ್ನು ತುಂಬಾ ಅಭಿಮಾನಿಸುತ್ತಿರಬಹುದು ಎಂದು ಸಾಯಿ ಪಲ್ಲವಿ ಹೇಳಿದ್ದಾರೆ.

ಇನ್ನೂ ಇತ್ತೀಚಿಗೆ ಸಾಯಿ ಪಲ್ಲವಿ ಸಿನೆಮಾಗಳಿಂದ ದೂರ ಉಳಿದಿದ್ದಾರೆ. ಇದರಿಂದ ಆಕೆಯ ಅಭಿಮಾನಿಗಳು ನಿರಾಸೆ ಪಡುತ್ತಿದ್ದಾರೆ. ಜೊತೆಗೆ ಆಕೆ ಮದುವೆಯಾಗಲಿದ್ದಾರೆ, ಡಾಕ್ಟರ್‍ ವೃತ್ತಿಯನ್ನು ಮಾಡಲಿದ್ದಾರೆ ಎಂಬ ಸುದ್ದಿಗಳು ಕೇಳಿಬಂದವು. ಆದರೆ ಸಾಯಿ ಪಲ್ಲವಿ ಈ ಸುದ್ದಿಯನ್ನು ತಳ್ಳಿಹಾಕಿದ್ದಾರೆ. ಇನ್ನೂ ಒಳ್ಳೆಯ ಕಥೆಯಿರುವ ಸಿನೆಮಾ ಬಂದಾಗ ನಾನು ತಪ್ಪದೇ ಮಾಡುತ್ತೇನೆ ಎಂದು ಹೇಳಿದ್ದಾರೆ. ಆಕೆ ಕೊನೆಯದಾಗಿ ವಿರಾಟಪರ್ವಂ ಹಾಗೂ ಗಾರ್ಗಿ ಎಂಬ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.

Most Popular

To Top