Film News

ತುಂಬು ಗರ್ಭಿಣಿಯಾಗಿದ್ದುಕೊಂಡು ಮಾಡಬಾರದ ಕೆಲಸ ಮಾಡಿದ ನಟಿ ಪೂರ್ಣ, ಆಕ್ರೋಷಗೊಂಡ ನೆಟ್ಟಿಗರು…..!

ಮಲಯಾಳಂ ಸಿನೆಮಾಗಳ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಪೂರ್ಣ ಸೌತ್ ಸಿನಿರಂಗದಲ್ಲಿ ಬೇಡಿಕೆಯುಳ್ಳ ನಟಿಯಾಗಿದ್ದರು. ಜೊತೆಗೆ ಆಕೆ ಇದೀಗ ಸೆಕೆಂಡ್ ಇನ್ನಿಂಗ್ಸ್ ಸಹ ಪ್ರಾರಂಭಿಸಿದ್ದು, ಸಾಲು ಸಾಲು ಸಿನೆಮಾಗಳನ್ನು ಮಾಡುತ್ತಿದ್ದಾರೆ. ಸಿನೆಮಾ ರಂಗದಲ್ಲಿ ಬ್ಯುಸಿಯಿರುವ ಈಕೆ ಕೊಟ್ಯಾಧಿಪತಿ ಉದ್ಯಮಿಯೊಂದಿಗೆ ಸಿಕ್ರೇಟ್ ಆಗಿ ಮದುವೆಯಾದರು. ಇದೀಗ ಆಕೆಯ ಸೀಮಂತ ಶಾಸ್ತ್ರ ಅದ್ದೂರಿಯಾಗಿ ನಡೆದಿತ್ತು. ಇದೀಗ ಆಕೆ ತುಂಬು ಗರ್ಭಿಣಿಯಾಗಿದ್ದು, ಗರ್ಭಿಣಿಯಾಗಿ ಮಾಡಬಾರದ ಕೆಲಸ ಮಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ನಟಿ ಪೂರ್ಣ ಇದೀಗ ಒಂಭತ್ತು ತಿಂಗಳ ತುಂಬು ಗರ್ಭಿಣಿ. ಆಕೆ ಕಳೆದ ವರ್ಷ ಗರ್ಭಿಣಿಯಾದ ವಿಚಾರವನ್ನು ಸೋಷಿಯಲ್ ಮಿಡಿಯಾ ಮೂಲಕ ಹಂಚಿಕೊಂಡಿದ್ದರು. ಇನ್ನೂ ಕಳೆದ 2022 ಜೂನ್ ಮಾಹೆಯಲ್ಲಿ ದುಬೈ ಮೂಲದ ಆಸಿಫ್ ಅಲಿ ಎಂಬ ಉದ್ಯಮಿಯನ್ನು ಆಕೆ ಮದುವೆಯಾದರು. ಅತ್ಯಂತ ಹತ್ತಿರದವರ ಸಮ್ಮುಖದಲ್ಲಿ ಮದುವೆ ದುಬೈನಲ್ಲೇ ನಡೆಯಿತು. ಮೊದಲಿಗೆ ನಿಶ್ಚಿತಾರ್ಥ ಮಾಡಿಕೊಂಡ ಪೂರ್ಣ ಮದುವೆ ವಿಚಾರವನ್ನು ಸುಮಾರು ದಿನಗಳ ಕಾಲ ಸೀಕ್ರೇಟ್ ಆಗಿಯೇ ಇಟ್ಟಿದ್ದರು. ಕೆಲವೊಂದು ಕಾರಣಗಳಿಂದ ಮದುವೆ ಅತ್ಯಂತ ಹತ್ತಿರದವರ ಸಮ್ಮುಖದಲ್ಲಿ ನಡೆಯಿತು ಎಂದು ಪೂರ್ಣ ಈ ಹಿಂದೆ ಹೇಳಿದ್ದರು.

ಇನ್ನೂ ಮದುವೆಯಾದ ಕೂಡಲೇ ಮಕ್ಕಳನ್ನು ಪಡೆಯಲು ಪ್ಲಾನ್ ಮಾಡಿಕೊಂಡ ಈ ಜೋಡಿ ಕಳೆದ ವರ್ಷ ಗರ್ಭಿಣಿಯಾಗಿದ್ದಾಗಿ ಸೋಷಿಯಲ್ ಮಿಡಿಯಾ ಮೂಲಕ ತಿಳಿಸಿದರು. ಇನ್ನೇನು ಕೆಲವೇ ದಿನಗಳ ಪೂರ್ಣ ಮಗುವಿಗೆ ಜನ್ಮ ನೀಡಲಿದ್ದಾರೆ. ತುಂಬು ಗರ್ಭಿಣಿಯಾಗಿದ್ದು ಕೊಂಡು ಪೂರ್ಣ ಹಾಡೊಂದಕ್ಕೆ ಡ್ಯಾನ್ಸ್ ಮಾಡಿದ್ದು, ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ದಸರಾ ಸಿನೆಮಾದಲ್ಲಿ ಪೂರ್ಣ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನೆಮಾದಲ್ಲಿ ಚಮ್ಮಿಲ ಅಂಗಿಲೇಸಿ ಎಂಬ ಹಾಡಿಗೆ ನೃತ್ಯ ಮಾಡಿದ್ದಾರೆ. ಈ ವಿಡಿಯೋ ಅನ್ನು ಆಕೆ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಜೊತೆಗೆ ಬೇಸರ ಸಹ ವ್ಯಕ್ತಪಡಿಸಿದ್ದಾರೆ.

ತುಂಬು ಗರ್ಭಿಣಿಯಾಗಿದ್ದು ಈ ರೀತಿಯ ಕೆಲಸ ಮಾಡುವುದು ಸರಿಯೇ, ಅಂತಹ ಕೆಲಸ ಮಾಡಬಾರದು ಎಂದು ಗೊತ್ತಿಲ್ಲವೇ ಎಂದು ಕಾಮೆಂಟ್ ಮೂಲಕ ವಿಮರ್ಶೆ ಮಾಡುತ್ತಿದ್ದಾರೆ. ಇದು ಅತ್ಯಂತ ಪ್ರಮಾದಕರವಾದ ಕೆಲಸವಾಗಿದೆ. ಆಕೆ ಕ್ಷೇಮವಾಗಿ ಮಗುವಿಗೆ ಜನ್ಮ  ನೀಡಬೇಕು ಎಂದು ಅಭಿಮಾನಿಗಳು ಕೋರುತ್ತಿದ್ದಾರೆ. ಜೊತೆಗೆ ಮುಂದೆ ಈ ರೀತಿಯ ಕೆಲಸ ಮಾಡದಂತೆ ಸಲಹೆಗಳನ್ನು ಸಹ ನೀಡುತ್ತಿದ್ದಾರೆ.

Most Popular

To Top