ಆತ ಮೊದಲನೇ ನೋಟದಲ್ಲೇ ಸಾಯಿ ಪಲ್ಲವಿಯ ಹೃದಯ ಕದ್ದನಂತೆ, ಆತನಿಗೆ ಸಾಯಿಪಲ್ಲವಿ ಲವ್ ಲೆಟರ್ ಸಹ ಬರೆದಿದ್ದರಂತೆ….!

Follow Us :

ಸೌತ್ ಸಿನಿರಂಗದಲ್ಲಿ ಸಾಯಿ ಪಲ್ಲವಿ ಪ್ರತ್ಯೇಕವಾದ ಸ್ಥಾನವನ್ನು ಹೊಂದಿದ್ದಾರೆ.  ಸಿನಿರಂಗದಲ್ಲಿ ಗ್ಲಾಮರ್‍ ಗೆ ಯಾವುದೇ ಜಾಗ ನೀಡದೇ ಸಿನಿ ಜರ್ನಿಯನ್ನು ಸಾಗಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಆಕೆ ಶ್ಯಾಮ ಸಿಂಗರಾಯ್, ವಿರಾಟಪರ್ವ ಹಾಗೂ ಗಾರ್ಗಿ ಸಿನೆಮಾದ ಮೂಲಕ ಎಲ್ಲರನ್ನೂ ರಂಜಿಸಿದ್ದರು. ಸಹಜವಾದ ನಟನೆ, ನೃತ್ಯದ ಮೂಲಕ ಆಕೆ ತುಂಬಾನೆ ಕ್ರೇಜ್ ಪಡೆದುಕೊಂಡರು. ಸದ್ಯ ಆಕೆ ಕಾಲಿವುಡ್ ನಟ ಶಿವ ಕಾರ್ತಿಕೇಯನ್ ಜೊತೆಗೆ ಸಿನೆಮಾವೊಂದರಲ್ಲಿ ನಟಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಈ ಸಿನೆಮಾದ ಶೂಟಿಂಗ್ ಸಹ ಆರಂಭವಾಗಿದ್ದು, ಶೂಟಿಂಗ್ ಭರದಿಂದ ಸಾಗುತ್ತಿದೆ.

ಸಿನಿರಂಗದಲ್ಲಿ ಕೇವಲ ನಟನೆಯಿಂದ ಸ್ಟಾರ್‍ ಡಮ್ ಪಡೆದುಕೊಂಡವರಲ್ಲಿ ಕಡಿಮೆ ಮಂದಿಯೇ ಇರುತ್ತಾರೆ. ಅವರಲ್ಲಿ ಸಾಯಿ ಪಲ್ಲವಿ ಸಹ ಒಬ್ಬರಾಗಿದ್ದಾರೆ. ಪ್ರಸಕ್ತ ಕಾಲದ ಹಿರೋಯಿನ್ ಗಳಲ್ಲಿ ಸಾಯಿ ಪಲ್ಲವಿ ಪ್ರತ್ಯೇಕ ಎಂದು ಹೇಳಬಹುದಾಗಿದೆ. ಇನ್ನೂ ನಟಿ ಸಾಯಿ ಪಲ್ಲವಿ ತುಂಬಾ ಚೆನ್ನಾಗಿ ಡ್ಯಾನ್ಸ್ ಮಾಡುತ್ತಾರೆ. ನಟರಿಗೆ ಸಮನಾಗಿ ಆಕೆ ಹೆಜ್ಜೆ ಹಾಕಬಲ್ಲ ಪ್ರಾವೀಣ್ಯತೆ ಹೊಂದಿದ್ದಾರೆ. ಸಿನಿರಂಗದಲ್ಲಿ ಆಕೆ ತನ್ನದೇ ಆದ ಕ್ರೇಜ್ ಪಡೆದುಕೊಂಡಿದ್ದಾರೆ. ಕ್ಲೀನ್ ಅಂಡ್ ಗ್ರೀನ್ ಹಿರೋಯಿನ್ ಆಗಿ ಖ್ಯಾತಿ ಪಡೆದುಕೊಂಡಿದ್ದಾರೆ. ಆಕೆ ಪಾತ್ರಕ್ಕೆ ಪ್ರಾಧಾನ್ಯತೆ ಹಾಗೂ ತನಗೆ ಕಂಫರ್ಟ್ ಆಗಿದ್ದರೆ ಮಾತ್ರ ಆ ಸಿನೆಮಾಗಳನ್ನು ಒಪ್ಪಿಕೊಳ್ಳುತ್ತಾರೆ. ಗ್ಲಾಮರ್‍ ಶೋಗೆ ದೂರವಿದ್ದು, ಸಿನೆಮಾಗಳಲ್ಲಿ ಅವಕಾಶಗಳನ್ನು ಪಡೆದುಕೊಳ್ಳುತ್ತಿರುವ ನಟಿಯರ ಸಾಲಿಗೆ ಸಾಯಿ ಪಲ್ಲವಿ ಸೇರುತ್ತಾರೆ.

ಇದೀಗ ಸಾಯಿಪಲ್ಲವಿಗೆ ಸಂಬಂಧಿಸಿದ ಶಾಕಿಂಗ್ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ಆಕೆಯ ಬಗ್ಗೆ ಇಲ್ಲಿಯವರೆಗೂ ತಾನು ಡೇಟಿಂಗ್ ನಲ್ಲಿರುವ ಬಗ್ಗೆ ಆಗಲಿ, ಲವ್ ಮಾಡುತ್ತಿರುವ ಬಗ್ಗೆ ಆಗಲಿ ಯಾವುದೇ ಸುದ್ದಿಯಾಗಲಿ ರೂಮರ್‍ ಆಗಲಿ ಇರಲಿಲ್ಲ. ಇದೀಗ ಆಕೆ ತನ್ನ ಸ್ಕೂಲ್ ಡೇಸ್ ನಲ್ಲಿ ಒಬ್ಬ ಹುಡುಗನನ್ನು ಪ್ರೀತಿಸಿದ್ದರಂತೆ. ಆತನನ್ನು ನೋಡಿದ ಕೂಡಲೇ ಪ್ರೀತಿಗೆ ಬಿದ್ದಿದ್ದರಂತೆ. ಆತನನ್ನು ಸೀರಿಯಸ್ ಆಗಿ ಲವ್ ಮಾಡಿದ್ದರಂತೆ. ಜೊತೆಗೆ ಆತನಿಗೆ ಪ್ರೀತಿಯಿಂದ ಲವ್ ಲೆಟರ್‍ ಸಹ ಬರೆದಿದ್ದರಂತೆ. ಆದರೆ ಆ ಲೆಟರ್‍ ಆತನಿಗೆ ಕೊಡಲು ಭಯವಾಗಿ ತನ್ನ ಪುಸ್ತಕದಲ್ಲಿಟ್ಟುಕೊಂಡಿದ್ದರಂತೆ. ಇನ್ನೂ ಆ ಪತ್ರ ತನ್ನ ತಾಯಿಗೆ ಸಿಕ್ಕಿ, ಸಾಯಿ ಪಲ್ಲವಿಗೆ ಆಕೆಯ ತಾಯಿ ಒಡೆದಿದ್ದರಂತೆ. ಬಳಿಕ ಆಕೆ ಪ್ರೀತಿಯ ಸುದ್ದಿಗೆ ಹೋಗಲಿಲ್ಲವಂತೆ. ಇಂದಿಗೂ ಸಹ ಆಕೆ ತನ್ನ ತಾಯಿಗೆ ತಿಳಿಯದೇ ಏನು ಮಾಡುವುದಿಲ್ಲವಂತೆ ಈ ಎಲ್ಲಾ ವಿಚಾರಗಳನ್ನು ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಸಾಯಿಪಲ್ಲವಿ ಹೇಳಿಕೊಂಡಿದ್ದಾರೆ.

ಇನ್ನೂ ಸಾಯಿ ಪಲ್ಲವಿ ಕೊನೆಯದಾಗಿ ವೀರಾಟಪರ್ವಂ ಎಂಬ ಸಿನೆಮಾದ ಮೂಲಕ ಕಾಣಿಸಿಕೊಂಡಿದ್ದರು. ಈ ಸಿನೆಮಾ ಅಂದುಕೊಂಡಷ್ಟು ಸಕ್ಸಸ್ ಆಗಲಿಲ್ಲ. ಇನ್ನೂ ಸಾಯಿಪಲ್ಲವಿ ಶಿವಕಾರ್ತಿಕೇಯನ್ ಜೊತೆ ಸಿನೆಮಾ ಒಂದರಲ್ಲಿ ನಟಿಸುತ್ತಿದ್ದಾರೆ. ಆಗಾಗ ಆಕೆಯ ಮದುವೆಯ ಬಗ್ಗೆ ಕೆಲವು ಸುದ್ದಿಗಳು ಕೇಳಿಬರುತ್ತಿವೆ.