ಸಿಂಗರ್ ಸುನಿತಾ ಶಾಕಿಂಗ್ ಕಾಮೆಂಟ್ಸ್, ನನ್ನ ಜೀವನ ಈ ರೀತಿ ನಾಶವಾಗುತ್ತೆ ಎಂದುಕೊಂಡಿರಲಿಲ್ಲ ಎಂದ ಗಾಯಕಿ…..!

ತೆಲುಗು ಸಿನಿರಂಗದ ಖ್ಯಾತ ಗಾಯಕಿ ಸುನಿತ ಸ್ಟಾರ್‍ ನಟಿಯರಂತೆ ದೊಡ್ಡ ಅಭಿಮಾನಿ ಬಳಗ ಸಹ ಇದೆ. ಹಾಡುಗಳನ್ನು ಹಾಡುವ ಮೂಲಕ ಹಾಗೂ ಕೆಲವು ಸಿನೆಮಾಗಳಿಗೆ ಡಬ್ಬಿಂಗ್ ಆರ್ಟಿಸ್ಟ್ ಆಗಿಯೂ ಸಹ ಕೆಲಸ ಮಾಡಿದ್ದಾರೆ. ಆಕೆ ಕಳೆದ 2021ರಲ್ಲಿ ರಾಮ್ ವೀರಪನೇನಿ ಎಂಬಾತನೊಂದಿಗೆ ಎರಡನೇ ಮದುವೆಯಾದರು. ರಾಮ್ ಗೋಪಾಲ್ ವರ್ಮಾ ರವರ ಗುಲಾಬಿ ಸಿನೆಮಾದ ಮೂಲಕ ಸಿಂಗರ್‍ ಆಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಈಕೆ ಅನೇಕ ಸೂಪರ್‍ ಸಿಟ್ ಹಾಡುಗಳ ಮೂಲಕ ಕಡಿಮೆ ಸಮಯದಲ್ಲೇ ಸ್ಟಾರ್‍ ಸಿಂಗರ್‍ ಆದರು. ಇದೀಗ ಆಕೆ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದು, ಆಕೆಯ ಕಾಮೆಂಟ್ ಇದೀಗ ಹಾಟ್ ಟಾಪಿಕ್ ಆಗಿದೆ.

ಇನ್ನು ಸೌತ್ ಸಿನಿರಂಗದಲ್ಲಿ ಅನೇಕ ಗಾಯಕಿಯರು ಬಂದರೂ ಸಹ ಸಿಂಗರ್‍ ಸುನಿತಾ ರವರ ಡಿಮ್ಯಾಂಡ್ ಮಾತ್ರ ಕಡಿಮಯಾಗಲಿಲ್ಲ. ಈ ಹಿಂದೆ ನೀಲಿ ನೀಲಿ ಆಕಾಶಂ ಎಂಬ ಹಾಡನ್ನು ಸಹ ಸುನಿತಾ ರವರೇ ಹಾಡಿದ್ದು, ಈ ಹಾಡು ಭಾರಿ ಸಂಚಲನ ಸೃಷ್ಟಿ ಮಾಡಿತ್ತು. ಸಿಂಗರ್‍ ಸುನಿತ ರವರಿಗೆ ಸ್ಟಾರ್‍ ನಟಿಯರಂತೆ ದೊಡ್ಡ ಅಭಿಮಾನಿ ಬಳಗ ಸಹ ಇದೆ. ಹಾಡುಗಳನ್ನು ಹಾಡುವ ಮೂಲಕ ಹಾಗೂ ಕೆಲವು ಸಿನೆಮಾಗಳಿಗೆ ಡಬ್ಬಿಂಗ್ ಆರ್ಟಿಸ್ಟ್ ಆಗಿಯೂ ಸಹ ಕೆಲಸ ಮಾಡಿದ್ದಾರೆ. ಇನ್ನೂ ಆಕೆಗೆ ಚಿಕ್ಕವಯಸ್ಸಿನಲ್ಲೇ ಮದುವೆಯಾಗಿದ್ದು, ಚಿಕ್ಕ ವಯಸ್ಸಿನಲ್ಲೇ ಇಬ್ಬರು ಮಕ್ಕಳ ತಾಯಿ ಸಹ ಆಗಿದ್ದಾರೆ. ಮದುವೆಯಾದ ಕೆಲವೇ ವರ್ಷಗಳಲ್ಲಿ ಆಕೆ ಪತಿಯೊಂದಿಗೆ ವಿಭೇದಗಳು ಹುಟ್ಟಿಕೊಂಡು ವಿಚ್ಚೇದನ ಪಡೆದುಕೊಂಡರು. ಬಳಿಕ ಆಕೆ ಎರಡು ಮಕ್ಕಳನ್ನು ತುಂಬಾ ಕಷ್ಟದಿಂದಲೇ ಬೆಳೆಸಿದ್ದಾರೆ. ಇನ್ನೂ ಮಕ್ಕಳ ಒಪ್ಪಿಗೆಯ ಮೇರೆಗೆ ಆಕೆ ಕಳೆದ 2021 ರಲ್ಲಿ ಮ್ಯಾಂಗೋ ಮಿಡಿಯಾ ಮುಖ್ಯಸ್ಥ ರಾಮ್ ವೀರಪನೇನಿ ಎಂಬಾತನೊಂದಿಗೆ ಮದುವೆಯಾದರು.

ಇನ್ನೂ ಸುನಿತಾ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಆಕೆಯ ಜೀವನ ಹೇಗಿತ್ತು ಎಂಬುದರ ಬಗ್ಗೆ ಹೇಳಿಕೊಂಡಿದ್ದಾರೆ. ನನ್ನ ಜೀವನದಲ್ಲಿ ನಡೆದಂತಹ ಘಟನೆಗಳ ಬಗ್ಗೆ ಎಲ್ಲರೂ ತಿಳಿದುಕೊಳ್ಳುವ ಅವಶ್ಯಕತೆಯಿಲ್ಲ. ಆದರೆ ಇತ್ತಿಚಿಗೆ ಸೋಷಿಲ್ ಮಿಡಿಯಾದಲ್ಲಿ ಕೆಲವರು ತಮಗೆ ಇಷ್ಟ ಬಂದಂತೆ ಬರೆಯುತ್ತಿದ್ದಾರೆ. ಇಷ್ಟ ಬಂದಂತೆ ರೂಮರ್‍ ಗಳನ್ನು ಕ್ರಿಯೇಟ್ ಮಾಡುತ್ತಿರುತ್ತಾರೆ. ಅದರಿಂದಾಗಿ ನಾವು ತುಂಬಾನೆ ಕಿರಿಕಿರಿ ಅನುಭವಿಸುತ್ತಿದ್ದೇವೆ. ಅದರಿಂದ ನಾನು ಹೇಳಬೇಕಾಗಿದೆ. ಮೊದಲನೆ ಪತಿಯೊಂದಿಗೆ ಬೇರೆಯಾದ ಬಳಿಕ ನಾನು ತುಂಬಾನೆ ಕಷ್ಟಗಳನ್ನು ಎದುರಿಸಿದ್ದೆ. ನನ್ನ ಮಕ್ಕಳ ಭವಿಷ್ಯತ್ತಿಗಾಗಿ ನಾನು ವಿಚ್ಚೇದನ ಪಡೆದುಕೊಂಡ ವಿಚಾರವನ್ನು ಬೇಗ ಮರೆಯಲು ಸಾಧ್ಯವಾಗಿತ್ತು ಎಂದಿದ್ದಾರೆ.

ಆದರೆ ಒಂದು ವಯಸ್ಸಿಗೆ ಬಂದ ಬಳಿಕ ನಾನು ಒಂಟಿಯಾಗಿ ಉಳಿದೆ ಎಂದು ಅನ್ನಿಸಿತ್ತು. ನನ್ನ ಜೀವನ ಸಂಪೂರ್ಣವಾಗಿ ನಾಶವಾಗಿತ್ತು ಎಂದೆನ್ನಿಸಿತ್ತು. ಆ ಸಮಯಲ್ಲಿ ರಾಮ್ ವೀರಪ್ಪನೇನಿ ನನಗೆ ಪರಿಚಯವಾದರು. ಸ್ನೇಹಿತರಾಗಿ ಬಳಿಕ ಇಬ್ಬರ ಮನಸ್ಸುಗಳು ಬೆರತು ನನ್ನ ಮಕ್ಕಳ ಒಪ್ಪಿಗೆಯ ಮೇರೆಗೆ ಮದುವೆಯಾಗಿದ್ದು ಎಂದು ಹೇಳಿಕೊಂಡರು. ಇನ್ನೂ ಕೆಲವು ದಿನಗಳ ಹಿಂದೆ ಸಹ ಸುನಿತಾ ಗರ್ಭಿಣಿಯಾಗಿದ್ದಾರೆ ಎಂಬ ರೂಮರ್‍ ಗಳು ಸಹ ಹರಿದಾಡಿತ್ತು. ಇದೀಗ ಆಕೆಯ ಹೇಳಿಕೆಗಳು ಸೊಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.