ಶಿವ ತಾಂಡವ ಸ್ತ್ರೋತ್ರ ಪಠಣ ಮಾಡುತ್ತಾ ಕಾಣಿಸಿಕೊಂಡ ಅದಾಶರ್ಮಾ, ದಿ ಕೇರಳ ಸ್ಟೋರಿ ನಟಿಯ ವಿಡಿಯೋ ವೈರಲ್…..!

ಕಳೆದ ವರ್ಷ ತೆರೆಕಂಡ ದಿ ಕಾಶ್ಮೀರಿ ಫೈಲ್ಸ್ ಮಾದರಿಯಲ್ಲೆ ಮೇ.5 ರಂದು ತೆರೆಗೆ ಬಂದ ದಿ ಕೇರಳ ಸ್ಟೋರಿ ಸಹ ಭಾರಿ ಸದ್ದು ಮಾಡುತ್ತಿದೆ. ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಾ ಸಾಗುತ್ತಿದೆ.…

ಕಳೆದ ವರ್ಷ ತೆರೆಕಂಡ ದಿ ಕಾಶ್ಮೀರಿ ಫೈಲ್ಸ್ ಮಾದರಿಯಲ್ಲೆ ಮೇ.5 ರಂದು ತೆರೆಗೆ ಬಂದ ದಿ ಕೇರಳ ಸ್ಟೋರಿ ಸಹ ಭಾರಿ ಸದ್ದು ಮಾಡುತ್ತಿದೆ. ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಾ ಸಾಗುತ್ತಿದೆ. ಈ ಸಿನೆಮಾದಲ್ಲಿ ನಟಿಸಿದ ಅದಾ ಶರ್ಮಾ ಒಳ್ಳೆಯ ಕ್ರೇಜ್ ಸಹ ಪಡೆದುಕೊಂಡರು. ಇನ್ನೂ ಮೇ.11 ರಂದು ಅದಾ ಶರ್ಮಾ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ತನ್ನ ಹುಟ್ಟುಹಬ್ಬದಂದು ಹಂಚಿಕೊಂಡ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನೂ ಈ ವಿಡಿಯೋ ಜೊತೆಗೆ ಆಕೆ ಇಂಟ್ರಸ್ಟಿಂಗ್ ಕ್ಯಾಪ್ಷನ್ ಸಹ ಹಾಕಿದ್ದಾರೆ.

ದಿ ಕೇರಳ ಸ್ಟೋರಿ ಸಿನೆಮಾದಲ್ಲಿ ಕೇರಳದ ಸುಮಾರು ಮೂವತ್ತೇರಡು ಮಹಿಳೆಯರು ಮಹಿಳಾ ಉಗ್ರವಾದಿಗಳಾಗಿ ಮುಸ್ಲೀಂ ಮತಕ್ಕೆ ಬಲವಂತವಾಗಿ ಮಂತಾಂತರ ಮಾಡುವ ಕಥೆಯನ್ನು ಆಧರಿಸಿ ಈ ಸಿನೆಮಾ ತೆರೆಗೆ ತರಲಾಗಿದೆ. ಇದೀಗ ಈ ಸಿನೆಮಾದ ಮೇಲೆ ದೊಡ್ಡ ಮಟ್ಟದ ವಿವಾದಗಳೇ ಸೃಷ್ಟಿಯಾಗಿದೆ. ಕೆಲವು ರಾಜ್ಯಗಳಲ್ಲಿ ಈ ಸಿನೆಮಾದ ಮೇಲೇ ನಿಷೇಧ ಸಹ ಹೇರಲಾಗಿತ್ತು. ಈ ಸಿನೆಮಾದಲ್ಲಿ ನಟಿ ಅದಾ ಶರ್ಮಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಆಕೆಯ ಅಭಿನಯಕ್ಕೆ ಒಳ್ಳೆಯ ಮಾರ್ಕ್ಸ್ ಸಹ ಲಭಿಸಿದೆ. ಇನ್ನೂ ಆಕೆ ಮೇ.11 ರಂದು ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ವೇಳೆ ಆಕೆ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಆಕೆ ಶಿವ ತಾಂಡವ ಸ್ತೋತ್ರ ಪಠಣೆ ಮಾಡುತ್ತಾ ಕಾಣಿಸಿಕೊಂಡಿದ್ದಾರೆ. ಆಕೆಯ ಈ ಭಕ್ತಿಗೆ ನೆಟ್ಟಿಗರು ಸಹ ಫಿದಾ ಆಗಿದ್ದು ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಜೊತೆಗೆ ತನ್ನ ಶಕ್ತಿಗೆ ಕಾರಣ ಏನು ಎಂಬುದನ್ನು ತಿಳಿಸಿದ್ದಾರೆ.

ಇನ್ನೂ ದಿ ಕೇರಳ ಸ್ಟೋರಿ ಸಿನೆಮಾ ಭಾರಿ ಸಕ್ಸಸ್ ಕಾಣುತ್ತಿದ್ದು, ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಆಕೆ ಪ್ರೇಕ್ಷಕರಿಗೆ ಧನ್ಯವಾದಗಳನ್ನು ಸಹ ತಿಳಿಸಿದ್ದಾರೆ. ತನ್ನ ಇನ್ಸ್ಟಾ ಖಾತೆಯಲ್ಲಿ ಆಕೆ ಸಿನೆಮಾ ಸಕ್ಸಸ್ ಅನ್ನು ಹಂಚಿಕೊಂಡಿದ್ದಾರೆ. ನನ್ನ ಪ್ರಾಮಾಣಿಕತೆಯನ್ನು ಕೆಲವರು ಅಪಹಾಸ್ಯ ಮಾಡಿದ್ದರು. ನಮ್ಮ ಚಿತ್ತಶುದ್ದಿಯನ್ನು ಕಡಿಮೆಯಾಗಿ ನೋಡಿದರು. ದಿ ಕೇರಳ ಸ್ಟೋರಿ ಟೀಸರ್‍ ಬಂದ ಬಳಿಕ ಸಿನೆಮಾ ರಿಲೀಸ್ ಮಾಡಬೇಡಿ ಎಂದು ಬೆದರಿಕೆಗಳೂ ಸಹ ಬಂದವು. ಕೆಲವು ರಾಜ್ಯಗಳಲ್ಲಿ ಸಿನೆಮಾ ಬ್ಯಾನ್ ಸಹ ಮಾಡಿತ್ತು. ಆದರೂ ಸಹ ಪ್ರೇಕ್ಷಕರು ಈ ಸಿನೆಮಾಗೆ ಭಾರಿ ಬೆಂಬಲ ನೀಡಿದರು. ಮಹಿಳಾ ಪ್ರಧಾನವಾದ ಈ ಸಿನೆಮಾಗೆ ಒಳ್ಳೆಯ ಬೆಂಬಲ ನೀಡಿದ್ದಕ್ಕೆ ನಿಮಗೆಲ್ಲರಿಗೂ ಧನ್ಯವಾದಗಳು ಈ ಸಿನೆಮಾ ವಿಚಾರದಲ್ಲಿ ಪ್ರೇಕ್ಷಕರು ಗೆದ್ದಿದ್ದಾರೆ ಎಂದಿದ್ದಾರೆ.

ಇನ್ನೂ ದಿ ಕೇರಳ ಸ್ಟೋರಿ ವಿವಾದಗಳ ನಡುವೆಯೇ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಸಿನೆಮಾ ಬಿಡುಗಡೆಯಾದ ಮೊದಲನೇ ದಿನದಿಂದಲೇ ಒಳ್ಳೆಯ ಕಲೆಕ್ಷನ್ ಮಾಡುತ್ತಾ ಬರುತ್ತಿದೆ. ಇಲ್ಲಿಯವರೆಗೆ ಸುಮಾರು 113 ಕೋಟಿ ಯಷ್ಟು ಬಾಚಿಕೊಂಡಿದೆ. ಇನ್ನೂ ಈ ಸಿನೆಮಾ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.