Film News

ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ, ಗ್ಯಾಪ್ ಅಲ್ಲ, ನಾನೇ ಗ್ಯಾಪ್ ತೆಗೆದುಕೊಂಡೆ ಎಂದ ನಟಿ…..!

ಮೊದಲನೇ ಸಿನೆಮಾದ ಮೂಲಕ ಕ್ರೇಜ್ ಪಡೆದುಕೊಂಡ ನಟಿಯರಲ್ಲಿ ಮಲಯಾಳಂ ಮೂಲದ ನಟಿ ಸಾಯಿ ಪಲ್ಲವಿ ಸಹ ಒಬ್ಬರಾಗಿದ್ದಾರೆ. ಸೌತ್ ಸಿನಿರಂಗದಲ್ಲಿ ಸಾಯಿ ಪಲ್ಲವಿ ಸರಳತೆ ಹಾಗೂ ಆಕರ್ಷಣೆಯಾಗುವಂತಹ ನಟನೆಯ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಹ ಪಡೆದುಕೊಂಡಿದ್ದಾರೆ. ಸಾಲು ಸಾಲು ಸಿನೆಮಾಗಳಿಂದ ಬ್ಯುಸಿಯಾಗಿದ್ದ ಈಕೆ ಕೆಲವು ತಿಂಗಳುಗಳಿಂದ ಯಾವುದೇ ಸಿನೆಮಾದಲ್ಲಿ ಕಾಣಿಸಿಕೊಂಡಿಲ್ಲ. ಈ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ಅನೇಕ ರೂಮರ್‍ ಗಳು ಕೇಳಿಬಂದಿದ್ದವರು. ಇದೀಗ ಆಕೆ ಆ ಗ್ಯಾಪ್ ಗೆ ಕಾರಣ ಏನೆಂಬುದನ್ನು ಆಕೆ ರಿವೀಲ್ ಮಾಡಿದ್ದಾರೆ.

ಸಿನಿರಂಗದಲ್ಲಿ ಕೇವಲ ನಟನೆಯಿಂದ ಸ್ಟಾರ್‍ ಡಮ್ ಪಡೆದುಕೊಂಡವರಲ್ಲಿ ಕಡಿಮೆ ಮಂದಿಯೇ ಇರುತ್ತಾರೆ. ಅವರಲ್ಲಿ ಸಾಯಿ ಪಲ್ಲವಿ ಸಹ ಒಬ್ಬರಾಗಿದ್ದಾರೆ. ಪ್ರಸಕ್ತ ಕಾಲದ ಹಿರೋಯಿನ್ ಗಳಲ್ಲಿ ಸಾಯಿ ಪಲ್ಲವಿ ಪ್ರತ್ಯೇಕ ಎಂದು ಹೇಳಬಹುದಾಗಿದೆ. ಇನ್ನೂ ನಟಿ ಸಾಯಿ ಪಲ್ಲವಿ ತುಂಬಾ ಚೆನ್ನಾಗಿ ಡ್ಯಾನ್ಸ್ ಮಾಡುತ್ತಾರೆ. ನಟರಿಗೆ ಸಮನಾಗಿ ಆಕೆ ಹೆಜ್ಜೆ ಹಾಕಬಲ್ಲ ಪ್ರಾವೀಣ್ಯತೆ ಹೊಂದಿದ್ದಾರೆ. ಸಿನಿರಂಗದಲ್ಲಿ ಆಕೆ ತನ್ನದೇ ಆದ ಕ್ರೇಜ್ ಪಡೆದುಕೊಂಡಿದ್ದಾರೆ. ಕ್ಲೀನ್ ಅಂಡ್ ಗ್ರೀನ್ ಹಿರೋಯಿನ್ ಆಗಿ ಖ್ಯಾತಿ ಪಡೆದುಕೊಂಡಿದ್ದಾರೆ. ಆಕೆ ಪಾತ್ರಕ್ಕೆ ಪ್ರಾಧಾನ್ಯತೆ ಹಾಗೂ ತನಗೆ ಕಂಫರ್ಟ್ ಆಗಿದ್ದರೆ ಮಾತ್ರ ಆ ಸಿನೆಮಾಗಳನ್ನು ಒಪ್ಪಿಕೊಳ್ಳುತ್ತಾರೆ. ಗ್ಲಾಮರ್‍ ಶೋಗೆ ದೂರವಿದ್ದು, ಸಿನೆಮಾಗಳಲ್ಲಿ ಅವಕಾಶಗಳನ್ನು ಪಡೆದುಕೊಳ್ಳುತ್ತಿರುವ ನಟಿಯರ ಸಾಲಿಗೆ ಸಾಯಿ ಪಲ್ಲವಿ ಸೇರುತ್ತಾರೆ.

ನಟಿ ಸಾಯಿ ಪಲ್ಲವಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು 8 ವರ್ಷಗಳು ಪೂರ್ಣಗೊಂಡಿದ್ದು, ಸೋಷಿಯಲ್ ಮಿಡಿಯಾದಲ್ಲಿ ಪ್ರೇಮಂ ಹ್ಯಾಷ್ ಟ್ಯಾಗ್ ಟ್ರೆಂಡ್ ಆಗಿದೆ. ನಟಿ ಸಾಯಿ ಪಲ್ಲವಿ ಪ್ರೇಮಂ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಇದೀಗ ಸಾಯಿ ಪಲ್ಲವಿ ಸಹ ಎಂಟು ವರ್ಷ ಪೂರೈಸಿದ್ದಾರೆ. ಆಕೆಯ ಕೆರಿಯರ್‍ ನಲ್ಲಿ ಕಾಣಿಸಿಕೊಂಡ ಪಾತ್ರಗಳು, ಸಾಧಿಸಿದ ವಿಜಯಗಳ ಬಗ್ಗೆ ಚರ್ಚೆಗಳೂ ಸಹ ನಡೆಯುತ್ತಿವೆ. ಕೆಲವು ದಿನಗಳಿಂದ ಆಕೆ ಸಿನೆಮಾಗಳಿಂದ ದೂರವೇ ಉಳಿದರು. ಅದರಲ್ಲೂ ತೆಲುಗು ಸಿನೆಮಾಗಳಿಂದ ದೂರವೇ ಉಳಿದರು. ಈ ಕಾರಣದಿಂದ ಆಕೆ ಏತಕ್ಕಾಗಿ ಸಿನೆಮಾಗಳಿಂದ ದೂರವಾದರು ಎಂಬ ಚರ್ಚೆಗಳೂ ಸಹ ಕೇಳಿಬಂದಿದ್ದವು. ಇನ್ನೂ ಈ ಬಗ್ಗೆ ಇತ್ತಿಚಿಗೆ ನಡೆದ ಸಂದರ್ಶನವೊಂದರಲ್ಲಿ ಸಾಯಿ ಪಲ್ಲವಿ ಮಾತನಾಡಿದ್ದಾರೆ.

ಸಾಯಿ ಪಲ್ಲವಿ ತೆಲುಗು ಸಿನೆಮಾಗಳಿಂದ ದೂರವುಳಿದ ಬಗ್ಗೆ ರಿಯಾಕ್ಟ್ ಆಗಿದ್ದು, ತೆಲುಗಿನಲ್ಲಿ ಗ್ಯಾಪ್ ಬರಲಿಲ್ಲ. ನಾನು ಬೇಕೆಂತಲೇ ಗ್ಯಾಪ್ ತೆಗೆದುಕೊಂಡೆ ಎಂದು ಸಾಯಿಪಲ್ಲವಿ ಹೇಳಿದ್ದಾರೆ. ಆದರೆ ಅದಕ್ಕೆ ಹೇಳಿಕೊಳ್ಳುವಷ್ಟು ಕಾರಣಗಳೂ ಏನು ಇಲ್ಲ. ತನಗೆ ಇಷ್ಟವಾದ ಕಥೆ ದೊರೆತರೇ ಟಾಲಿವುಡ್ ನಲ್ಲಿ ನಟಿಸಲು ಸಿದ್ದ ಎಂದು ಹೇಳಿದ್ದಾರೆ. ಸದ್ಯ ಆಕೆ ಶಿವಕಾರ್ತಿಕೇಯನ್ ಜೊತೆಗೆ ತಮಿಳಿನ ಸಿನೆಮಾದಲ್ಲಿ ನಟಿಸುತ್ತಿದ್ದಾರೆ.

Most Popular

To Top